ನವದೆಹಲಿ: ತಾಲಿಬಾನ್ ಉಗ್ರರ ಆಡಳಿತವಿರುವ ಅಫಘಾನಿಸ್ತಾನವು ಭಾರತದಲ್ಲಿರುವ ರಾಯಭಾರ ಕಚೇರಿಯ (Afghan Embassy) ಕಾರ್ಯಾಚರಣೆಯನ್ನು ಭಾನುವಾರದಿಂದಲೇ (ಅಕ್ಟೋಬರ್ 1) ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ. ಭಾರತದಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಣೆ ಮಾಡಲು ಆಗದಿದ್ದರೂ, ತಾಲಿಬಾನ್ ಆಡಳಿತದ ದೇಶವು ಭಾರತದ ಮೇಲೆಯೇ ಆರೋಪ ಮಾಡಿದೆ.
“ದೆಹಲಿಯಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಿಸಲು ಭಾರತ ಸರ್ಕಾರ ಸಾಕಷ್ಟು ನೆರವು, ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ಅಫಘಾನಿಸ್ತಾನದ ಹಿತಾಸಕ್ತಿಗಳು ಈಡೇರುತ್ತಿಲ್ಲ. ಹಾಗಾಗಿ, ದೆಹಲಿಯಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಲಾಗುತ್ತಿದೆ” ಎಂದು ಪ್ರಕಟಣೆಯಲ್ಲಿ ಆರೋಪಿಸಿದೆ. ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಮೇಲೆ ಆ ಆಡಳಿತವನ್ನು ಭಾರತ ಗಣನೆಗೆ ತೆಗೆದುಕೊಂಡಿಲ್ಲ. ಹೀಗಿದ್ದರೂ, ದೇಶದಲ್ಲಿ ರಾಯಭಾರ ಕಚೇರಿಯ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ. ಆದರೂ, ಭಾರತದ ಮೇಲೆಯೇ ಅಫಘಾನಿಸ್ತಾನ ಆರೋಪ ಮಾಡಿದೆ.
The Embassy of Afghanistan in New Delhi issues press statement, announces the decision to cease its operations, effective October 1, 2023. pic.twitter.com/iI4nQhq3aj
— ANI (@ANI) September 30, 2023
ಸಿಬ್ಬಂದಿಯ ಕೊರತೆ
“ಭಾರತದಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಿಸಲು ಸಾಕಷ್ಟು ಸಿಬ್ಬಂದಿಯ ಕೊರತೆ ಇದೆ” ಎಂದು ಅಫಘಾನಿಸ್ತಾನವೇ ತಿಳಿಸಿದೆ. ಆ ಮೂಲಕ ರಾಯಭಾರ ಕಚೇರಿ ನಿರ್ವಹಣೆಗೆ ಸಾಕಷ್ಟು ದುಡ್ಡಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಆದರೂ, ಭಾರತದ ಮೇಲೆ ಆಫ್ಘನ್ ಆರೋಪ ಮಾಡಿದೆ. “ರಾಯಭಾರಿಗಳ ವೀಸಾ ನವೀಕರಣ ಮಾಡದ ಕಾರಣ ಭಾರತದಲ್ಲಿ ಹೆಚ್ಚಿನ ರಾಯಭಾರಿಗಳು ಉಳಿಯಲು ಆಗುತ್ತಿಲ್ಲ” ಎಂದು ತಿಳಿಸಿದೆ. ಆದರೆ, ಕಚೇರಿ ನಿರ್ವಹಣೆಗೆ ಸಿಬ್ಬಂದಿ ಕೊರತೆಯ ನೆಪ ಹೇಳಿದೆ.
#WATCH | The Embassy of Afghanistan in New Delhi will cease operations from today, October 1; outside visuals from the Embassy https://t.co/btVHVLEjHf pic.twitter.com/u0DQ2ok3gx
— ANI (@ANI) October 1, 2023
ಇದನ್ನೂ ಓದಿ: Justin Trudeau: ಖಲಿಸ್ತಾನ್ ಉಗ್ರನ ಹತ್ಯೆ ಹಿಂದೆ ಭಾರತದ ಕೈವಾಡ ಆರೋಪ; ರಾಜತಾಂತ್ರಿಕರ ಉಚ್ಚಾಟನೆ
ಅನುಮಾನ ಹುಟ್ಟಿಸಿದ ನಡೆ
ಅಫಘಾನಿಸ್ತಾನವು ಏಕಾಏಕಿ ರಾಯಭಾರ ಕಚೇರಿಯನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೂಲಗಳ ಪ್ರಕಾರ, ಅಶ್ರಫ್ ಘನಿ ಅವರು ಅಧ್ಯಕ್ಷರಾಗಿದ್ದಾಗ (ತಾಲಿಬಾನ್ ಆಡಳಿತಕ್ಕೂ ಮೊದಲು) ನೇಮಿಸಿದ ರಾಯಭಾರಿಗಳಿಗೂ, ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ನೇಮಿಸಲಾದ ಸಿಬ್ಬಂದಿಗೂ ಆಗಿಬರುತ್ತಿಲ್ಲ. ಎರಡೂ ತಂಡಗಳ ಮಧ್ಯೆ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಹಣದ ಕೊರತೆಯೂ ಉಂಟಾಗಿದೆ. ಹಾಗಾಗಿ, ಕಚೇರಿಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.