ನವದೆಹಲಿ: ಕ್ಷಿಪಣಿಗಳ ಪರೀಕ್ಷೆಯಲ್ಲಿ ಭಾರತವು ಮತ್ತೊಂದು ಸಕ್ಸೆಸ್ ಸಾಧಿಸಿದೆ. ಸುಮಾರು 5,000 ಕಿ.ಮೀ. ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿರುವ ಅಗ್ನಿ v (Agni v) ಕ್ಷಿಪಣಿಯನ್ನು ಗುರುವಾರ ರಾತ್ರಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಪರಮಾಣು ಸಾಮರ್ಥ್ಯದ ಈ ಕ್ಷಿಪಣಿಯು ಭಾರತದ ಯುದ್ಧಬಲವನ್ನು ಹೆಚ್ಚಿಸಿದೆ. ಕಳೆದ ವರ್ಷವೂ ಇದೇ ರೀತಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.
ಅಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಅಗ್ನಿ ಕ್ಷಿಪಣಿಯು ಚೀನಾದ ರಾಜಧಾನಿ ಬೀಜಿಂಗ್ ಟಾರ್ಗೆಟ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಕ್ಷಿಪಣಿಯಲ್ಲಿ ಅಳವಡಿಸಲಾಗಿರುವ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸುವ ನಿಟ್ಟಿನಲ್ಲಿ ರಾತ್ರಿ ವೇಳೆ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಈ ಮೊದಲಿಗಿಂತಲೂ ಕ್ಷಿಪಣಿ ಇನ್ನಷ್ಟು ಹಗುರವಾಗಿದೆ. ಒಂದು ವೇಳೆ, ಅಗತ್ಯವಾದರೆ, ಕ್ಷಿಪಣಿಯ ವ್ಯಾಪ್ತಿಯನ್ನು ಹಿಗ್ಗಿಸುವ ಸಾಮರ್ಥ್ಯವನ್ನು ಈ ಪ್ರಯೋಗ ಪರೀಕ್ಷೆಯು ಸಾಬೀತುಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | AD-1 Missile | ಎತ್ತರದ ಗುರಿ ಸದೆಬಡಿಯುವ ಸಾಮರ್ಥ್ಯದ ಎಡಿ-1 ಕ್ಷಿಪಣಿ ಪರೀಕ್ಷೆ ಯಶಸ್ವಿ