Site icon Vistara News

Amritpal Singh: ಮೃತ ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ಗೆ ಸೇನಾ ಗೌರವ ಏಕಿಲ್ಲ?

Agniveer Amritpal Singh

Agniveer Amritpal Singh died by suicide, no military honours as per rule: Army Clarifies

ನವದೆಹಲಿ: ಭಾರತೀಯ ಸೇನೆಗೆ ಕಿರು ಅವಧಿಗೆ ಸೇರಲು ಜಾರಿಗೆ ತಂದಿರುವ ‘ಅಗ್ನಿಪಥ’ ಯೋಜನೆ (Agnipath Scheme) ಅಡಿಯಲ್ಲಿ ಸೇನೆ ಸೇರಿದ ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ ಅವರು ಕಾರ್ಯನಿರ್ವಹಿಸುವಾಗಲೇ (On Duty) ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ಸೇನೆಯಿಂದ ಗೌರವ ನೀಡಿಲ್ಲ ಎಂಬ ವಿಷಯವೀಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಇದರ ಬೆನ್ನಲ್ಲೇ, ಭಾರತೀಯ ಸೇನೆಯು ಸ್ಪಷ್ಟನೆ ನೀಡಿದ್ದು, “ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ (Amritpal Singh) ಸೇವೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾರಣ ಸೇನಾ ಗೌರವ ನೀಡಿಲ್ಲ” ಎಂದು ತಿಳಿಸಿದೆ.

“ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ ಅವರು ಡ್ಯೂಟಿಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡುರುವುದು ಬೇಸರದ ಸಂಗತಿ. ಅವರ ಅಗಲಿಕೆಯಿಂದ ಭಾರತೀಯ ಸೇನೆಗೆ ನಷ್ಟವಾಗಿದೆ. ಆದರೆ, ಅವರಿಗೆ ಸೇನೆಯ ಗೌರವದ ಕುರಿತು ಜನರಲ್ಲಿ ಗೊಂದಲ ಮೂಡಿದೆ. ಅಮೃತ್‌ಪಾಲ್‌ ಸಿಂಗ್‌ ಅವರ ಶವವನ್ನು ಸೇನೆಯ ವಾಹನದಲ್ಲಿಯೇ ಅವರ ಹುಟ್ಟೂರಿಗೆ ಕಳುಹಿಸಲಾಗಿದೆ. ಅವರು ಸೇವೆಯಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾರಣ ಸೇನೆಯಿಂದ ಗೌರವ ಸಲ್ಲಿಸಿಲ್ಲ” ಎಂಬುದಾಗಿ ಭಾರತೀಯ ಸೇನೆಯು ಭಾನುವಾರ (ಅಕ್ಟೋಬರ್‌ 15) ರಾತ್ರಿ ಸ್ಪಷ್ಟನೆ ನೀಡಿದೆ.

ಭಾರತೀಯ ಸೇನೆ ಸ್ಪಷ್ಟನೆ

“ಯೋಧರಿಗೆ ಸೇನೆಯ ಗೌರವ ನೀಡುವ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ. ಆರ್ಮಿ ಆರ್ಡರ್‌ ಆಫ್‌ 1967ರ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ಯೋಧರಿಗೆ ಸೇನಾ ಗೌರವ ಸಿಗುವುದಿಲ್ಲ. 2001ರಿಂದ ಇದುವರೆಗೆ 100-140 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಯಾರಿಗೂ ಸೇನೆಯ ಗೌರವ ನೀಡಿಲ್ಲ” ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಅಗ್ನಿಪಥ ಯೋಜನೆ ಅಡಿಯಲ್ಲಿ ಭಾರತೀಯ ಸೇನೆಯ ನೈಟ್‌ ಕಾರ್ಪ್ಸ್‌ಗೆ (Knight Corps) ಅಮೃತ್‌ಪಾಲ್‌ ಸಿಂಗ್‌ ಸೇರಿದ್ದು, ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವಾಗಲೇ ಗುಂಡು ಹಾರಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟಿದ್ದಾರೆ ಎಂದು ಶನಿವಾರ (ಅಕ್ಟೋಬರ್‌ 14) ನೈಟ್‌ ಕಾರ್ಪ್ಸ್‌ ಮಾಹಿತಿ ನೀಡಿದೆ.

ರಾಘವ್‌ ಚಡ್ಡಾ ಆಕ್ರೋಶ

ಇದನ್ನೂ ಓದಿ: ಹುತಾತ್ಮ ತಂದೆಗೆ ಸೇನೆ ಬಟ್ಟೆ ಧರಿಸಿ ಸೆಲ್ಯೂಟ್‌ ಹೊಡೆದ 6 ವರ್ಷದ ಮಗ; ಕರುಳು ಕಿವುಚುವ ವಿಡಿಯೊ ವೈರಲ್‌

ಸೇನೆ ಗೌರವ ಕುರಿತು ವಿವಾದ ಏಕೆ?

ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ ಪಂಜಾಬ್‌ನವರಾಗಿದ್ದು, ಅವರಿಗೆ ಸೇನೆಯ ಗೌರವ ಸಿಗದ ಕುರಿತು ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಚಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದರು. “ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ ಅವರಿಗೆ ಸೇನೆಯಿಂದ ಗೌರವ ಸಿಕ್ಕಿಲ್ಲ. ಹುತಾತ್ಮರಿಗೆ ಗೌರವ ನೀಡದ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ದೀಪಾವಳಿ ವೇಳೆ ಯೋಧರಿಗೆ ಸಿಹಿ ಹಂಚಿ, ಫೋಟೊ ತೆಗೆಸಿಕೊಂಡರೆ ಸಾಲದು, ಗೌರವವನ್ನೂ ನೀಡಬೇಕು” ಎಂದು ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Exit mobile version