Site icon Vistara News

US China War : ಇನ್ನೆರಡು ವರ್ಷದಲ್ಲಿ ಅಮೆರಿಕ-ಚೀನಾ ಸಮರ ಸಾಧ್ಯತೆ, ಯುಎಸ್‌ ವಾಯುಪಡೆ ಅಧಿಕಾರಿ ಎಚ್ಚರಿಕೆ

Air Force general predicts war with China in 2025

#image_title

ವಾಷಿಂಗ್ಟನ್:‌ ಅಮೆರಿಕ ಮತ್ತು ಚೀನಾ ನಡುವೆ 2025ರಲ್ಲಿ ಭಾರಿ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂದು ಅಮೆರಿಕ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ವಾಯುಪಡೆಯಲ್ಲಿ 4 ಸ್ಟಾರ್‌ ದರ್ಜೆಯ ಜನರಲ್‌ ಮೈಕ್‌ ಮಿನಿಹಾನ್‌ ಅವರು, ನನ್ನ ಅಂತರಾಳವು 2025ರಲ್ಲಿ ಚೀನಾ ಮತ್ತು ಅಮೆರಿಕದ ನಡುವೆ ಯುದ್ಧ ಸಂಭವಿಸಲಿದೆ ಎನ್ನುತ್ತಿದೆ. ಆದರೆ ಈ ಆತಂಕ ಅದು ಸುಳ್ಳಾಗಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ. ಮೈಕ್‌ ಮಿನಿಹಾನ್‌ 50,000 ಯೋಧರು ಹಾಗೂ 500 ವಿಮಾನಗಳ ಸೇನಾ ವಿಭಾಗವನ್ನು ನಿಯಂತ್ರಿಸುತ್ತಿದ್ದಾರೆ. ಅದರ ಸಾರಿಗೆ ಮತ್ತು ಇಂಧನ ಪೂರಣದ ಜವಾಬ್ದಾರಿ ವಹಿಸುತ್ತಾರೆ.

ಅಮೆರಿಕ ಮತ್ತು ತೈವಾನ್‌ 2024ರಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸಲಿವೆ. ಅಮೆರಿಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಇದರಿಂದ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರು ತೈವಾನ್‌ ಮೇಲೆ ಸವಾರಿ ನಡೆಸಲು ಹೋಗಬಹುದು. ಹಾಗೂ ಇದು ಚೀನಾ-ಅಮೆರಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಚೀನಾ ಜತೆಗೆ ಯುದ್ಧಕ್ಕೆ ಅಮೆರಿಕದ ಯೋಧರು, ಸೇನಾಧಿಕಾರಿಗಳು ಸನ್ನದ್ಧರಾಗಬೇಕು ಎಂದು ಕೂಡ ಜನರಲ್‌ ಮೈಕೆಲ್‌ ಮಿನಿಹಾನ್‌ ಹೇಳಿದ್ದಾರೆ.

Exit mobile version