US China War : ಇನ್ನೆರಡು ವರ್ಷದಲ್ಲಿ ಅಮೆರಿಕ-ಚೀನಾ ಸಮರ ಸಾಧ್ಯತೆ, ಯುಎಸ್‌ ವಾಯುಪಡೆ ಅಧಿಕಾರಿ ಎಚ್ಚರಿಕೆ Vistara News
Connect with us

ದೇಶ

US China War : ಇನ್ನೆರಡು ವರ್ಷದಲ್ಲಿ ಅಮೆರಿಕ-ಚೀನಾ ಸಮರ ಸಾಧ್ಯತೆ, ಯುಎಸ್‌ ವಾಯುಪಡೆ ಅಧಿಕಾರಿ ಎಚ್ಚರಿಕೆ

ಮುಂದಿನ 2024ರಲ್ಲಿ ಅಮೆರಿಕ ಮತ್ತು ತೈವಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಬಳಿಕ ಚೀನಾಕ್ಕೆ ತೈವಾನ್‌ ಮೇಲೆ ಅತಿಕ್ರಮಣ ನಡೆಸುವ ಅವಕಾಶ ಸಿಗಬಹುದು. ಇದು ಚೀನಾ-ಅಮೆರಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಅಮೆರಿಕ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು (US China War) ಎಚ್ಚರಿಸಿದ್ದಾರೆ.

VISTARANEWS.COM


on

Air Force general predicts war with China in 2025
Koo

ವಾಷಿಂಗ್ಟನ್:‌ ಅಮೆರಿಕ ಮತ್ತು ಚೀನಾ ನಡುವೆ 2025ರಲ್ಲಿ ಭಾರಿ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂದು ಅಮೆರಿಕ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ವಾಯುಪಡೆಯಲ್ಲಿ 4 ಸ್ಟಾರ್‌ ದರ್ಜೆಯ ಜನರಲ್‌ ಮೈಕ್‌ ಮಿನಿಹಾನ್‌ ಅವರು, ನನ್ನ ಅಂತರಾಳವು 2025ರಲ್ಲಿ ಚೀನಾ ಮತ್ತು ಅಮೆರಿಕದ ನಡುವೆ ಯುದ್ಧ ಸಂಭವಿಸಲಿದೆ ಎನ್ನುತ್ತಿದೆ. ಆದರೆ ಈ ಆತಂಕ ಅದು ಸುಳ್ಳಾಗಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ. ಮೈಕ್‌ ಮಿನಿಹಾನ್‌ 50,000 ಯೋಧರು ಹಾಗೂ 500 ವಿಮಾನಗಳ ಸೇನಾ ವಿಭಾಗವನ್ನು ನಿಯಂತ್ರಿಸುತ್ತಿದ್ದಾರೆ. ಅದರ ಸಾರಿಗೆ ಮತ್ತು ಇಂಧನ ಪೂರಣದ ಜವಾಬ್ದಾರಿ ವಹಿಸುತ್ತಾರೆ.

ಅಮೆರಿಕ ಮತ್ತು ತೈವಾನ್‌ 2024ರಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸಲಿವೆ. ಅಮೆರಿಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಇದರಿಂದ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರು ತೈವಾನ್‌ ಮೇಲೆ ಸವಾರಿ ನಡೆಸಲು ಹೋಗಬಹುದು. ಹಾಗೂ ಇದು ಚೀನಾ-ಅಮೆರಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಚೀನಾ ಜತೆಗೆ ಯುದ್ಧಕ್ಕೆ ಅಮೆರಿಕದ ಯೋಧರು, ಸೇನಾಧಿಕಾರಿಗಳು ಸನ್ನದ್ಧರಾಗಬೇಕು ಎಂದು ಕೂಡ ಜನರಲ್‌ ಮೈಕೆಲ್‌ ಮಿನಿಹಾನ್‌ ಹೇಳಿದ್ದಾರೆ.

ದೇಶ

Supreme Court: ನೇಣಿಗೇರಿಸುವುದು ಕ್ರೂರತನವೇ? ಈ ಬಗ್ಗೆ ಚರ್ಚಿಸಿ ಎಂದು ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

Supreme Court: ಮರಣದಂಡನೆಗೆ ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ನೇಣಿಗೇರಿಸುವುದು(Hanging) ಕ್ರೂರತನವೇ? ಈ ಬಗ್ಗೆ ಚರ್ಚೆ ನಡೆಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಕಡಿಮೆ ನೋವಿನ ಮೂಲಕ ಮರಣದಂಡನೆ ಜಾರಿ ಮಾಡುವ ಪರ್ಯಾಯ ಮಾರ್ಗ ಶೋಧಕ್ಕೂ ಸೂಚಿಸಿದೆ.

VISTARANEWS.COM


on

Edited by

Death By Hanging Cruel asks Supreme Court
Koo

ನವದೆಹಲಿ: ನೇಣಿಗೇರಿಸುವ ಮೂಲಕ ಮರಣದಂಡನೆಯನ್ನು(Hanging) ಜಾರಿಗೊಳಿಸುವುದಕ್ಕಿಂತಲೂ ಕಡಿಮೆ ನೋವು ಆಗುವ ಮೂಲಕ ಮರಣದಂಡನೆಯನ್ನು ಜಾರಿ ಮಾಡುವ ಪರ್ಯಾಯ ಮಾರ್ಗವನ್ನು ಶೋಧಿಸಬಹುದೇ ಎಂದು ಸುಪ್ರೀಂ ಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ಕೇಳಿದೆ. ಈ ಬಗ್ಗೆ ಚರ್ಚೆ ಮಾಡುವಂತೆ ದೇಶದ ಅತ್ಯುನ್ನತ ನ್ಯಾಯಾಲಯವು ಸೂಚಿಸಿದೆ.

ನೇಣು ಹಾಕುವುದಕ್ಕಿಂತ ಕಡಿಮೆ ನೋವಿನ ವಿಧಾನವಿದೆಯೇ ಎಂದು ಪರಿಶೀಲಿಸಲು ಚರ್ಚೆಯನ್ನು ಪ್ರಾರಂಭಿಸಲು ಮತ್ತು ಮಾಹಿತಿಯನ್ನು ಸಂಗ್ರಹಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನೇಣು ಹಾಕುವ ಮೂಲಕ ಉಂಟಾಗುವ ಪರಿಣಾಮಗಳ ಕುರಿತಾದ ಅಧ್ಯಯನ ಮಾಹಿತಿಯೊಂದಿಗೆ ಬನ್ನಿ ಎಂದು ಕೇಂದ್ರ ಸರ್ಕಾರ ಅಟಾರ್ನಿ ಜನರಲ್ ಅವರಿಗೆ ಆರ್ ವೆಂಕಟರಮಣಿ ಅವರಿಗೆ ಕೋರಿದೆ.

ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೆ ನೋವು ರಹಿತವಾಗಿ ಶಿಕ್ಷೆಯನ್ನು ಜಾರಿಗೊಳಿಸುವ ಕುರಿತು ದಾಖಲಾಗಿರುವ ಪಿಐಎಲ್‌ಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ. ನೇಣು ಹಾಕುವ ಬದಲು ಗುಂಡು ಹಾರಿಸುವುದು, ಮಾರಣಾಂತಿಕ ಚುಚ್ಚುಮದ್ದು ನೀಡುವುದು ಅಥವಾ ವಿದ್ಯುತ್ ಕುರ್ಚಿ ಮೂಲಕ ಸಾಯಿಸುವುದು ಸೇರಿದಂತೆ ಇತರ ಕ್ರಮಗಳನ್ನು ಅರ್ಜಿಯಲ್ಲಿ ಮಾಹಿತಿ ನೀಡಲಾಗಿದೆ. ಕುತ್ತಿಗೆಗೆ ನೇಣು ಹಾಕಿ ಮರಣದಂಡನೆಯನ್ನು ಜಾರಿಗೊಳಿಸುವ ಪ್ರಕ್ರಿಯೆ ಅತ್ಯಂತ ಕ್ರೂರವಾಗಿದೆ ಎಂದು, ಕಾನೂನು ಆಯೋಗದ ವರದಿಯನ್ನು ಓದಿ ವಕೀಲ ರಿಷಿ ಮಲ್ಹೋತ್ರಾ ಅವರು ಕೋರ್ಟ್‌ಗೆ ತಿಳಿಸಿದರು.

ಹೌದು, ಇದೊಂದು ಚರ್ಚಾ ವಿಷಯವಾಗಿದೆ. ಈ ಕುರಿತು ನಮಗೆ ಕೆಲವು ವೈಜ್ಞಾನಿಕ ದತ್ತಾಂಶಗಳು ನಮ್ಮ ಬಳಿ ಇಲ್ಲ. ನೋವಿಗೆ ಕಾರಣವಾಗುವ ಕೆಲವು ಅಧ್ಯಯನಗಳನ್ನು ನಮಗೆ ಕೊಡಿ. ನಾವು ಒಂದು ಸಮಿತಿಯನ್ನು ರಚಿಸಬಹುದು, ಈ ಕುರಿತು ಮುಂದಿನ ವಿಚಾಣೆಯಲ್ಲಿ ಚರ್ಚಿಸಬಹುದು ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹೇಳಿದರು. ಅಲ್ಲದೇ, ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ನಿಗದಿ ಮಾಡಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಪಿ ಎಸ್ ನರಸಿಂಹ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂದಿಗೂ ಸಾವಿನಲ್ಲಿ ಘನತೆ ಇರಬೇಕೆಂಬ ಪ್ರಶ್ನೆ ಚರ್ಚೆಯಾಗುತ್ತಲೇ ಇದೆ. ಅದು ಕಡಿಮೆ ನೋವಿನಿಂದ ಕೂಡಿರಬೇಕು. ಸದ್ಯದ ಪರಿಸ್ಥಿತಿಯ ನೇಣು ಹಾಕುವುದು ತೃಪ್ತಿಕರ ಸಾಧನವಾಗಿದೆ. ಹಾಗಾದಲ್ಲಿ, ಇಂಜೆಕ್ಷನ್ ಕೊಟ್ಟು ಸಾಯಿಸುವುದು ಪರಿಗಣಿಸಬಹುದೇ ಎಂದು ಜಸ್ಟೀಸ್ ಹೇಳಿದರು.

ಚುಚ್ಚುಮದ್ದು ಮೂಲಕ ಮರಣ ದಂಡನೆ ಶಿಕ್ಷೆಯ ಜಾರಿ ಮಾಡುವುದು ನೋವಿನಿಂದ ಕೊಡಿದೆ. ಶೂಟ್ ಮಾಡುವ ಮೂಲಕ ಶಿಕ್ಷೆ ಜಾರಿ ಮಾಡುವುದು ಮಿಲಿಟರಿ ಆಡಳಿತಗಳ ನೆಚ್ಚಿನ ಟೈಮ್‌ಪಾಸ್ ಆಗಿತ್ತು. ಇದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಸಿಜೆಐ ಚಂದ್ರಚೂಡ್ ಅವರು ಹೇಳಿದರು.

Continue Reading

ಕರ್ನಾಟಕ

Nitin Gadkari: ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ಮಂಗಳೂರು ಮಹಿಳೆಯ ಮೊಬೈಲ್‌ನಿಂದ, ಏನಿದು ಕೇಸ್?

Nitin Gadkari: ಕಳೆದ ಜನವರಿಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜಯೇಶ್‌ ಕಾಂತಾ ಎಂಬಾತನ ಹೆಸರಿನಲ್ಲಿ ನಾಗಪುರದ ಕಚೇರಿಗೆ ಬೆದರಿಕೆ ಕರೆ ಮಾಡಲಾಗಿತ್ತು. ಇದೀಗ ಅದೇ ಜಯೇಶ್‌ ಹೆಸರಿನಲ್ಲಿ ಹಿಂಡಲಗಾ ಜೈಲಿನಿಂದಲೇ ಕರೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Edited by

Threat Calls to Nitin Gadkari made by Mangaluru womans phone Says Police
Koo

ಬೆಂಗಳೂರು: ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರಿಗೆ ಮತ್ತೆ ಬೆದರಿಕೆ ಕರೆಗಳು ಬಂದಿದ್ದು, ಇದರ ಹಿನ್ನೆಲೆಯಲ್ಲಿ ಸಚಿವರ ಕಚೇರಿ ಹಾಗೂ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ ಜಯೇಶ್‌ ಪೂಜಾರಿ ಎಂಬಾತನೇ ಮತ್ತೆ ಬೆದರಿಕೆ ಕರೆ ಮಾಡಿದ್ದಾನೆ ಎಂಬುದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಂಗಳೂರಿನ ಮಹಿಳೆಯ ಮೊಬೈಲ್‌ನಿಂದ ಬೆದರಿಕೆ ಕರೆ ಮಾಡಿದ್ದಾನೆ ಎಂದು ಮಹತ್ವದ ಅಂಶ ಬಹಿರಂಗಪಡಿಸಿದ್ದಾರೆ.

“ನಿತಿನ್‌ ಗಡ್ಕರಿ ಅವರ ಕಚೇರಿಗೆ ಕರೆಗಳನ್ನು ಮಾಡಿದ ವ್ಯಕ್ತಿಯು ಜಯೇಶ್‌ ಪೂಜಾರಿ ಎಂಬುದಾಗಿ ತಿಳಿಸಿದ್ದಾನೆ. ಕರೆ ಮಾಡಿದ ನಂಬರ್‌ಅನ್ನು ಆಧರಿಸಿ ತನಿಖೆ ನಡೆಸಲಾಗಿದ್ದು, ಆ ಮಹಿಳೆಯು ಮಂಗಳೂರಿನವರು ಎಂಬುದಾಗಿ ಗೊತ್ತಾಗಿದೆ. ನಾವು ಕೂಡ ಆ ಮಹಿಳೆಯನ್ನು ಸಂಪರ್ಕಿಸಿದ್ದು, ಮಂಗಳೂರಿನಲ್ಲಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕೆಲಸ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಮಹಿಳೆಯ ಫ್ರೆಂಡ್‌ ಅಥವಾ ಜಯೇಶ್‌ ಪೂಜಾರಿಯಿಂದ ಕರೆ ಬಂದಿರುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ” ಎಂದು ನಾಗ್ಪುರ ಡಿಸಿಪಿ ರಾಹುಲ್‌ ಮಂದಾನೆ ಮಾಹಿತಿ ನೀಡಿದ್ದಾರೆ.

ನಾಗ್ಪುರ ಪೊಲೀಸರು ನೀಡಿದ ಮಾಹಿತಿ

ನಿತಿನ್‌ ಗಡ್ಕರಿ ಕಚೇರಿಗೆಕರೆ ಮಾಡಿ 10 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಜನವರಿಯಲ್ಲಿ ಕರೆ ಮಾಡಿದ್ದಾಗ 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂಬುದಾಗಿ ತಿಳಿದುಬಂದಿದೆ. ಅಲ್ಲದೆ, ಜನವರಿಯಲ್ಲಿ ಕರೆ ಮಾಡಿದ್ದಾತ, ತಾನು ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹಚರ ಎಂಬುದಾಗಿ ಹೇಳಿದ್ದ. ಆಗಲೂ, ಗಡ್ಕರಿ ನಿವಾಸ ಹಾಗೂ ಕಚೇರಿಗೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಜನವರಿಯಲ್ಲೂ ಜಯೇಶ್‌ ಪೂಜಾರಿ ಹೆಸರಲ್ಲಿ ಕರೆ

ಕಳೆದ ಜನವರಿ 14ರಂದು ನಾಗ್ಪುರದಲ್ಲಿರುವ ನಿತಿನ್‌ ಗಡ್ಕರಿ ಅವರ ಕಚೇರಿಗೆ ರಾತ್ರಿ 11.25, 11.32 ಮತ್ತು 12.32ಕ್ಕೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದು ಹಿಂಡಲಗಾ ಜೈಲಿನಿಂದ ಬಂದ ಕರೆ ಇದೆಂದು ಪ್ರಾಥಮಿಕ ತನಿಖೆಯಲ್ಲೇ ಬಯಲಾಗಿತ್ತು. ಆವತ್ತು ಕರೆ ಮಾಡಿದವನು ಜೈಲಿನಲ್ಲಿರುವ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್‌ ಸ್ಟರ್‌ ಜಯೇಶ್‌ ಕಾಂತಾ ಅಲಿಯಾಸ್‌ ಜಯೇಶ್‌ ಪೂಜಾರಿ ಎಂದು ಪತ್ತೆ ಹಚ್ಚಲಾಗಿತ್ತು. ಆವತ್ತು ಜಯೇಶ್‌ ಪೂಜಾರಿಯ ಕೋಣೆಯನ್ನು ಶೋಧಿಸಿದಾಗ ಒಂದು ಡೈರಿ ಪತ್ತೆಯಾಗಿತ್ತು.

ಜಯೇಶ್‌ ಕಾಂತಾನನ್ನು ಆವತ್ತು ನಾಗಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮರಳಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ಈಗ ಆತ ಮತ್ತೆ ಕರೆ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪದೇಪದೆ ಗಡ್ಕರಿ ಅವರಿಗೆ ಕರೆ ಮಾಡುವ ಉದ್ದೇಶದ ಬಗ್ಗೆಯೂ ತನಿಖೆ ಆಗಬೇಕಾಗಿದೆ. ಮಹಾರಾಷ್ಟ್ರ ಎಟಿಎಸ್‌ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Nitin Gadkari : ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?

Continue Reading

ದೇಶ

ಪಾಟ್ನಾ ರೈಲ್ವೆ ಸ್ಟೇಶನ್​​ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಆಗಿದ್ದಕ್ಕೆ ಫುಲ್ ಖುಷಿಯಾದ ಪೋರ್ನ್​ ಸ್ಟಾರ್​; ಅದು ನಂದೇ ಎಂದ ಕೇಂದ್ರಾ ಲಸ್ಟ್​

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಬ್ಲರ್​ ರೂಪದಲ್ಲಿ ಹರಿದಾಡುತ್ತಿದೆ. ಕೆಲವು ವಿಡಿಯೊಗಳು ಸಂಪೂರ್ಣ ಬ್ಲರ್​ ಆಗಿದ್ದರೆ, ಮತ್ತೆ ಕೆಲವು ಅರ್ಧಂಬರ್ಧ ಬ್ಲರ್ ಆಗಿದೆ.

VISTARANEWS.COM


on

Edited by

Kendra Lust Express happiness Over porn film at Patna railway station
Koo

ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್​​ನ (Patna Railway Junction)10ನೇ ಪ್ಲಾಟ್​ಫಾರ್ಮ್​​ನಲ್ಲಿ ಭಾನುವಾರ ಬೆಳಗ್ಗೆ 9.30ರ ಹೊತ್ತಿಗೆ, ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರದರ್ಶನವಾಗಿತ್ತು. ಅಲ್ಲಿದ್ದ ನೂರಾರು ಪ್ರಯಾಣಿಕರು ಮುಜುಗರಗೊಂಡಿದ್ದರೆ, ಕೆಲವರು ಅದನ್ನು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದರು. ಅದರ ಬೆನ್ನಲ್ಲೇ ಈ ಟಿವಿ ಪರದೆ ಮೇಲೆ ಜಾಹೀರಾತು ಪ್ರಸಾರ ಮಾಡಲು ಗುತ್ತಿಗೆ ತೆಗೆದುಕೊಂಡಿದ್ದ ದತ್ತಾ ಸ್ಟುಡಿಯೊ ಕಂಪನಿ ಪ್ರೈವೇಟ್​ ಲಿಮಿಟೆಡ್​​ ವಿರುದ್ಧ ರೈಲ್ವೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಆ ಏಜೆನ್ಸಿಯನ್ನು ಬ್ಲ್ಯಾಕ್​ ಲಿಸ್ಟ್​ಗೆ ಹಾಕಲಾಗಿದೆ. ಇಷ್ಟೆಲ್ಲದರ ಮಧ್ಯೆ ಈ ಅಶ್ಲೀಲ ವಿಡಿಯೊ ಪ್ರಸಾರವಾದ ಬಗ್ಗೆ ಅಮೆರಿಕದ ಪೋರ್ನ್​ಸ್ಟಾರ್​​ ಕೇಂದ್ರಾ ಲಸ್ಟ್​ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಇದು ನನ್ನದೇ ವಿಡಿಯೊ ಇರಬಹುದು ಎನ್ನಿಸುತ್ತದೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಬ್ಲರ್​ ರೂಪದಲ್ಲಿ ಹರಿದಾಡುತ್ತಿದೆ. ಕೆಲವು ವಿಡಿಯೊಗಳು ಸಂಪೂರ್ಣ ಬ್ಲರ್​ ಆಗಿದ್ದರೆ, ಮತ್ತೆ ಕೆಲವು ಅರ್ಧಂಬರ್ಧ ಮಸುಬಾಗಿವೆ. ಅದರ ಮಧ್ಯೆ ಕೇಂದ್ರಾ ಲಸ್ಟ್​ ಅವರು ತಮ್ಮ ಒಂದು ಮಾದಕ ಫೋಟೋವನ್ನು ಪೋಸ್ಟ್ ಮಾಡಿಕೊಂಡು, ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಅದರ ಮುಂದೆ ಭಾರತದ ಧ್ವಜದ ಇಮೋಜಿ ಹಾಕಿದ್ದಾರೆ. ಬಿಹಾರ ರೈಲ್ವೆ ಸ್ಟೇಶನ್​ ಎಂದು ಹ್ಯಾಷ್​ಟ್ಯಾಗ್ (#BiharRailwayStation)​ ಹಾಕಿದ್ದಾರೆ.

ಅವರ ಈ ಟ್ವೀಟ್​ಗೆ ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ‘ಇದು ನಿಮ್ಮ ವಿಡಿಯೊವಾ? ನಿಮಗೆ ಗೊತ್ತಾ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಕೇಂದ್ರಾ ಲಸ್ಟ್​ ‘ನಾನೂ ಹಾಗಂದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಇನ್ನುಳಿದಂತೆ ಹಲವು ನೆಟ್ಟಿಗರು ಕೇಂದ್ರಾ ಅವರ ಟ್ವೀಟ್​ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರಂತೂ ಪಕ್ಕಾ ಇದು ನಿಮ್ಮ ವಿಡಿಯೊವೇ. ಭಾರತದಲ್ಲಿ ಇನ್ಮುಂದೆ ನಿಮ್ಮ ಪೋರ್ನ್​ ವಿಡಿಯೊಗಳು ಸಖತ್ ಫೇಮಸ್ ಆಗಲಿವೆ ಎಂದಿದ್ದಾರೆ.

ಇದನ್ನೂ ಓದಿ: ರೈಲ್ವೆ ಸ್ಟೇಶನ್​​ ಟಿವಿ ಪರದೆ ಮೇಲೆ ಪ್ರಸಾರವಾದ ಅಶ್ಲೀಲ ವಿಡಿಯೊ; ಪ್ರಯಾಣಿಕರಿಗೆ ಮುಜುಗರ, ಅದನ್ನೂ ಚಿತ್ರೀಕರಿಸಿ ವೈರಲ್ ಮಾಡಿದ ಮಂದಿ!

Continue Reading

ದೇಶ

Amritpal Singh: 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ? ಪಂಜಾಬ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Amritpal Singh: ಕಳೆದ ಶನಿವಾರದಿಂದಲೂ ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದರೂ, ಇದುವರೆಗೆ ಏಕೆ ಬಂಧಿಸಲು ಸಾಧ್ಯವಾಗಿಲ್ಲ? ಇದು ಸಂಪೂರ್ಣ ಗುಪ್ತಚರ ವೈಫಲ್ಯ ಎಂಬುದಾಗಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

VISTARANEWS.COM


on

Edited by

What are 80k cops doing Punjab and Haryana court slammed the AAP government
Koo

ಚಂಡೀಗಢ: ಖಲಿಸ್ತಾನಿಗಳ ಪರ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಅಮೃತ್‌ಪಾಲ್‌ ಸಿಂಗ್‌ (Amritpal Singh) ಬಂಧನಕ್ಕಾಗಿ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆತನನ್ನು ಬಂಧಿಸಲು ರಾಜ್ಯದ ಪೊಲೀಸರು ಹರಸಾಹಸಪಡುತ್ತಿದ್ದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಆತನ ಆಪ್ತರ ಬಂಧನ, ಕಾರು ವಶ, ಶಸ್ತ್ರಾಸ್ತ್ರಗಳ ಜಪ್ತಿ ಮಾತ್ರ ಸಾಧ್ಯವಾಗಿದೆ. ಇನ್ನು ಬಂಧನ ಕಾರ್ಯಾಚರಣೆ ಕುರಿತು ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದೆ.

ಅಮೃತ್‌ಪಾಲ್‌ ಸಿಂಗ್‌ನನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಆತನನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ವಾರಿಸ್‌ ದೇ ಪಂಜಾಬ್‌ ಮುಖ್ಯಸ್ಥನ ಕಾನೂನು ಸಲಹೆಗಾರ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಸಲ್ಲಿಸಿದ್ದಾರೆ. ಇದೇ ಪ್ರಕರಣದ ಅರ್ಜಿಯ ವಿಚಾರಣೆ ವೇಳೆ, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಮೂರ್ತಿ ಎನ್‌.ಎಸ್‌.ಶೇಖಾವತ್‌ ನೇತೃತ್ವದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಇದು ಸಂಪೂರ್ಣ ಗುಪ್ತಚರ ವೈಫಲ್ಯ ಎಂದು ಜರಿದಿದೆ.

ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ವಿನೋದ್‌ ಘಾಯ್‌ ಅವರು ರಾಜ್ಯ ಸರ್ಕಾರದ ಕ್ರಮಗಳ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದರು. “ಅಮೃತ್‌ಪಾಲ್‌ ಸಿಂಗ್‌ನನ್ನು ಬಂಧಿಸಿಲ್ಲ. ಆತ ಪೊಲೀಸ್‌ ಕಸ್ಟಡಿಯಲ್ಲಿ ಇಲ್ಲ. ಇದುವರೆಗೆ ಆತನ 120 ಆಪ್ತರನ್ನು ಬಂಧಿಸಲಾಗಿದೆ. ಅವನ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಆದಾಗ್ಯೂ, ಕೋರ್ಟ್‌ನಲ್ಲಿ ಮುಕ್ತವಾಗಿ ಒಂದಷ್ಟು ಅಂಶಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ” ಎಂದರು.

ಆಗ ನ್ಯಾಯಾಲಯವು, “ಅಮೃತ್‌ಪಾಲ್‌ ಸಿಂಗ್‌ ವಿರುದ್ಧ 5-6 ಎಫ್‌ಐಆರ್ ದಾಖಲಾಗಿದೆ ಎಂದು ಹೇಳುತ್ತಿದ್ದೀರಿ. ಆತನ ವಿರುದ್ಧ 5-6 ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದೀರಿ. ಜಿ-20 ಸಭೆಯ ಹಿನ್ನೆಲೆಯಲ್ಲಿ ಅಷ್ಟೊಂದು ಬಿಗಿ ಭದ್ರತೆ ಇದ್ದರೂ ಅಮೃತ್‌ಪಾಲ್‌ ಸಿಂಗ್‌ ಪರಾರಿಯಾಗಲು ಹೇಗೆ ಸಾಧ್ಯ? ಇದುವರೆಗೆ ಅಮೃತ್‌ಪಾಲ್‌ ಹೊರತಾಗಿ ಆತನ 120 ಆಪ್ತರನ್ನು ಬಂಧಿಸಿದ್ದೀರಿ. ಅಷ್ಟಕ್ಕೂ ರಾಜ್ಯದಲ್ಲಿರುವ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿತು. ಆದಾಗ್ಯೂ, ರಾಜ್ಯ ಸರ್ಕಾರದ ಹಿತಕ್ಕೆ ಧಕ್ಕೆ ತರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಭಗವಂತ್‌ ಮಾನ್‌ ಹೇಳಿದ್ದಾರೆ.

ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ನಾಯಕನಾಗಿದ್ದ ಅಮೃತ್‌ಪಾಲ್‌, ಆನಂದ್‌ಪುರ್‌ ಖಾಲ್ಸಾ ಫೋರ್ಸ್‌ (AKF) ಎಂಬ ಹೆಸರಿನ ತನ್ನದೇ ಸೈನ್ಯವನ್ನು ಕಟ್ಟಲು ಯತ್ನಿಸಿದ್ದ. ಇದು ಖಲಿಸ್ತಾನಿ ಟೈಗರ್‌ ಫೋರ್ಸ್‌ (KTF) ಎಂಬ ಈ ಹಿಂದಿನ ಉಗ್ರ ಸಂಘಟನೆಯ ರೀತಿಯಲ್ಲಿತ್ತು. ಜತೆಗೆ ಒಂದು ಮಾನವ ಬಾಂಬ್‌ ಸ್ಕ್ವಾಡ್‌ ಅನ್ನೂ ಸಿದ್ಧಪಡಿಸುತ್ತಿದ್ದ ಎಂದು ತಿಳಿದುಬಂದಿದೆ. ಅಮೃತ್‌ಪಾಲ್‌ ಸಿಂಗ್‌ ಮಾದಕದ್ರವ್ಯ ವ್ಯಸನ ತಡೆ ಶಿಬಿರಗಳನ್ನು ಹಾಗೂ ಗುರುದ್ವಾರಗಳನ್ನು ತನ್ನ ಆಯುಧ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಆತ್ಮಹತ್ಯಾ ಬಾಂಬ್‌ ದಾಳಿಗೆ ಯುವಕರನ್ನು ಸಿದ್ಧಗೊಳಿಸುತ್ತಿದ್ದಾನೆ ಎಂದು ಮಾಹಿತಿಯನ್ನು ಬೇಹುಗಾರಿಕೆ ಸಂಸ್ಥೆಗಳು ನೀಡಿವೆ.

ಇದನ್ನೂ ಓದಿ: Amritpal Singh: ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್‌ ಬಳಿ ಸ್ವಂತ ಮಿಲಿಟರಿ, ಬಾಂಬ್‌ ಸ್ಕ್ವಾಡ್!‌

Continue Reading
Advertisement
Azam peer Khadri
ಕರ್ನಾಟಕ1 min ago

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

ಕಿರುತೆರೆ4 mins ago

Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ

ಕರ್ನಾಟಕ6 mins ago

Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ

Tejasvi Surya says Rahul Gandhi is dependent on pocket money given by mother
ಕರ್ನಾಟಕ11 mins ago

BJP Yuva Morcha: ಅಮ್ಮ ನೀಡುವ ಪಾಕೆಟ್ ಮನಿ ಮೇಲೆಯೇ ರಾಹುಲ್ ಗಾಂಧಿ ಜೀವನ: ತೇಜಸ್ವಿ ಸೂರ್ಯ

WPL 2023: RCB ends campaign with defeat
ಕ್ರಿಕೆಟ್12 mins ago

WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ

Bike Rally yallapur ugadi
ಉತ್ತರ ಕನ್ನಡ15 mins ago

Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ

Shobha Karandlaje criticizes congress guarantee
ಕರ್ನಾಟಕ16 mins ago

Congress Guarantee:‌ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಜಾರ್ಜ್‌ ಸೊರೊಸ್‌ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ

DC Prabhulinga Kavalikatti karwar
ಉತ್ತರ ಕನ್ನಡ16 mins ago

Karnataka Election 2023: ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಸೂಚನೆ

Gangavathi Pranesh nisarga mane sirsi
ಉತ್ತರ ಕನ್ನಡ22 mins ago

Sirsi News: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ: ಗಂಗಾವತಿ ಪ್ರಾಣೇಶ

fire accident honnavar Ranga Bhoomika
ಉತ್ತರ ಕನ್ನಡ28 mins ago

Fire Accident: ಕಡ್ಲೆ ಗ್ರಾಮದಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ; 15 ಲಕ್ಷ ರೂ. ಹಾನಿ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ14 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ1 hour ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ6 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ6 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!