Site icon Vistara News

Air India: ನಿಯಮ ಉಲ್ಲಂಘಿಸಿದ ಏರ್‌ ಇಂಡಿಯಾಗೆ ಬಿತ್ತು 10 ಲಕ್ಷ ರೂ. ದಂಡ!

Air India breaks compensation rules and DGCA imposed rs 10 laks fine

ನವದೆಹಲಿ: ಟಾಟಾ ಸಮೂಹದ (Tata Group) ಒಡೆತನದಲ್ಲಿರುವ ಏರ್ ಇಂಡಿಯಾ (Air India) ಮತ್ತೊಂದು ದಂಡದ ಹೊಡೆತವನ್ನು ಎದುರಿಸುತ್ತಿದೆ. ಪರಿಹಾರ ನಿಯಮಗಳನ್ನು ಪಾಲಿಸದ್ದರಿಂದ (non-compliance of compensation rules) ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು(DGCA) ಏರ್‌ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಈ ರೀತಿಯ ದಂಡವನ್ನು ಎರಡನೇ ಬಾರಿಗೆ ಏರ್‌ ಇಂಡಿಯಾ ಪಾವತಿಸುತ್ತಿದೆ. ನವೆಂಬರ್ 3ರಂದು ಈ ಸಂಬಂಧ ಕಾರಣ ಕೇಳಿ ನೋಟಿಸ್ (Show cause Notice) ಕೂಡ ನೀಡಲಾಗಿತ್ತು.

ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ಸಂಸ್ಥೆಗಳ ತಪಾಸಣೆ ನಡೆಸಿದ ನಂತರ, ಸಂಬಂಧಿತ ನಾಗರಿಕ ವಿಮಾನಯಾನ ಅಗತ್ಯತೆಯ (ಸಿಎಆರ್) ನಿಬಂಧನೆಗಳನ್ನು ಏರ್ ಇಂಡಿಯಾ ಅನುಸರಿಸುತ್ತಿಲ್ಲ ಎಂದು ನಿಯಂತ್ರಕರು ಕಂಡುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಡಿಜಿಸಿಎ ದಂಡವನ್ನು ವಿಧಿಸಿದೆ.

ಶೋಕಾಸ್ ನೋಟಿಸ್‌ಗೆ ಏರ್ ಇಂಡಿಯಾ ನೀಡಿದ ಉತ್ತರವನ್ನು ಆಧರಿಸಿ, ಅದು ಸಿಎಆರ್‌ನ ನಿಬಂಧನೆಗಳನ್ನು ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ. ಆ ಕಾರಣಕ್ಕಾಗಿ ದಂಡವನ್ನು ವಿಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನ ವಿಳಂಬವಾದಾಗ ಪ್ರಯಾಣಿಕರಿಗೆ ಅಗತ್ಯ ಹೊಟೇಲ್ ವಸತಿ ಸೌಲಭ್ಯ ಕಲ್ಪಿಸದಿರುವುದು, ನಿಬಂಧನೆಗಳ ಪ್ರಕಾರ ಅವರ ಕೆಲವು ತಳಮಟ್ಟದ ಸಿಬ್ಬಂದಿಗೆ ತರಬೇತಿ ನೀಡದಿರುವುದು ಮತ್ತು ಸೇವೆಗೆ ಅರ್ಹವಲ್ಲದ ಆಸನಗಳಲ್ಲಿ ಪ್ರಯಾಣಿಸಲು ಮಾಡಿದ ಅಂತಾರಾರಾಷ್ಟ್ರೀಯ ವ್ಯಾಪಾರ ವರ್ಗದ ಪ್ರಯಾಣಿಕರಿಗೆ ಪರಿಹಾರವನ್ನು ಪಾವತಿಸದಿರುವುದು ಸೇರಿದಂತೆ ಅನೇಕ ಪರಿಹಾರ ಲೋಪಗಳನ್ನು ಎಸಗಿದೆ ಎಂದು ಡಿಜಿಸಿಎ ಹೇಳಿದೆ. ಈ ಎಲ್ಲ ಲೋಪಗಳಿಗಾಗಿ 10 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Air India: ಕ್ಯಾಬಿನ್ ಸಿಬ್ಬಂದಿಗೆ ಪ್ರಯಾಣಿಕ ಹಲ್ಲೆ, ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಸ್

Exit mobile version