Site icon Vistara News

Air India : ಏರ್​ ಇಂಡಿಯಾ ತೆಕ್ಕೆ ಸೇರಿತು ಭಾರತದ ಮೊದಲ ವೈಡ್​ ಬಾಡಿ ವಿಮಾನ

air india bomb threat

ಬೆಂಗಳೂರು: ದೀರ್ಘ ಪ್ರಯಾಣಕ್ಕೆ ಸೂಕ್ತವಾಗುವ ಐಷಾರಾಮಿ ಸೌಕರ್ಯಗಳನ್ನು ಕಲ್ಪಿಸುವ ವೈಡ್​ ಬಾಡಿ A350 ವಿಮಾನ ಟಾಟಾ ಮಾಲೀಕತ್ವದ ಏರ್​ಇಂಡಿಯಾ (Air India) ಸಂಸ್ಥೆಯ ತಕ್ಕೆ ಸೇರಿದೆ. ಇದು ಭಾರತ ಮೂಲಕ ಸಂಸ್ಥೆಯೊಂದು ಕಾರ್ಯಚರಣೆ ಮಾಡಲಿರುವ ಮೊಟ್ಟಮೊದಲ ವೈಡ್​ ಬಾಡಿ ವಿಮಾನ. ಇದು ನ್ಯಾರೊ ವಿಮಾನಕ್ಕಿಂತ ಎರಡು ಪಟ್ಟು ಅಗಲವಾಗಿರುತ್ತದೆ ಹಾಗೂ ಮಲಗಿಕೊಂಡು ಪ್ರಯಾಣ ಮಾಡಬಲ್ಲ ಸೀಟಿಂಗ್ ವ್ಯವಸ್ಥೆಯನ್ನೂ ನಿರ್ಮಿಸಲು ಪೂರಕವಾಗಿದೆ ಎಂಬುದೇ ಇದರ ವಿಶೇಷ.

ಇದೇ ಮಾದರಿಯ 20 ವಿಮಾನಗಳಿಗೆ ಟಾಟಾ ಆರ್ಡರ್ ನೀಡಿದೆ ಅದರಲ್ಲಿ ಮೊದಲ ವಿಮಾನ 350-900 ಭಾರತಕ್ಕೆ ಬಂದಿಳಿದಿದೆ. ಏರ್ ಇಂಡಿಯಾದ ಫ್ಲೀಟ್ ವಿಸ್ತರಣೆ ಯೋಜನೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಏರ್ ಇಂಡಿಯಾ ಸಿಇಒ ಮತ್ತು ಎಂಡಿ ಕ್ಯಾಂಪ್ಬೆಲ್ ವಿಲ್ಸನ್ ಅವರು ಸಂಸ್ಥೆಯ ಉದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಹಲವು ತಿಂಗಳುಗಳ ಯೋಜನೆಯ ನಂತರ ವೈಡ್ ಬಾಡಿ ವಿಮಾನ ದೆಹಲಿಗೆ ಬಂದಿಳಿದಿದೆ ಎಂದು ಅವರು ಹೇಳಿದ್ದಾರೆ.

ದೆಹಲಿಗೆ ಬಂದಿಳಿದ ವಿಮಾನಕ್ಕೆ ಎಲ್ಲಾ ಕಡ್ಡಾಯ ಪರೀಕ್ಷೆಗಳು ಮತ್ತು ತಪಾಸಣೆಗಳನ್ನು ಮಾಡಲಾಗಿದೆ. ಆ ಬಳಿಕ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಲಾಗಿದೆ. ವಿಮಾನದ ಉಪಕರಣಗಳ ಡಿಜಿಸಿಎ ತಪಾಸಣೆಗಳು, ಹಾರಾಟ ಪರೀಕ್ಷೆಗಳನ್ನು ನಡೆಸಲಾಗಿದೆ.

ವೈಡ್-ಬಾಡಿ ಎ 350-900 ವಿಮಾನದ ಕುರಿತು ಒಂದಿಷ್ಟು ಮಾಹಿತಿ

ಎ 350-900 ವಿಮಾನವು ಜನವರಿ 2024 ರಿಂದ ಭಾರತದಲ್ಲಿ ತನ್ನ ವಾಣಿಜ್ಯ ಪ್ರಯಾಣವನ್ನು ಪ್ರಾರಂಭಿಸಲಿದೆ. ಏರ್​​ಬಸ್ ಕಂಪನಿಯ ಫ್ರಾನ್ಸ್​​ನ ಕೇಂದ್ರದಿಂದ ಪ್ರಯಾಣವನ್ನು ಆರಂಭಿಸಿದ ವಿಮಾನವು ದೆಹಲಿಯಲ್ಲಿ ಇಳಿದಿದೆ.

ಏರ್ ಇಂಡಿಯಾಕ್ಕೆ ಸೇರ್ಪಡೆಗೊಂಡ ಎ 350-900 ವಿಮಾನವು ಒಟ್ಟು 316 ಆಸನಗಳೊಂದಿಗೆ. ಮೂರು ದರ್ಜೆಯ ಕ್ಯಾಬಿನ್ ಆಯ್ಕೆಗಳನ್ನು ಹೊಂದಿದೆ. ಪೂರ್ಣ ಫ್ಲಾಟ್ ಹಾಸಿಗೆಗಳನ್ನು ಹೊಂದಿರುವ 28 ಬಿಸಿನೆಸ್ ಕ್ಲಾಸ್ ಸೂಟ್ ಗಳು, ಹೆಚ್ಚುವರಿ ಲೆಗ್ ರೂಮ್ ಹೊಂದಿರುವ 24 ಪ್ರೀಮಿಯಂ ಎಕಾನಮಿ ಸೀಟುಗಳು ಮತ್ತು 264 ಎಕಾನಮಿ ಕ್ಲಾಸ್ ಸೀಟುಗಳು ಈ ವಿಮಾನದಲ್ಲಿರುತ್ತವೆ.

ಇದನ್ನೂ ಓದಿ : IMF Report : ಭಾರತ ಸಾಲ ಮಿತಿಮೀರುತ್ತಿದೆ ಎಂಬ ಐಎಂಎಫ್​ ವರದಿ ಅಸಂಬದ್ಧ, ಕೇಂದ್ರದ ಸ್ಪಷ್ಟನೆ

ಏರ್ ಇಂಡಿಯಾ ವೈಡ್-ಬಾಡಿ ವಿಮಾನ ಹೊಂದಿರುವ ಏಕೈಕ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಕಂಪನಿಯು ಮೇ 2024 ರ ವೇಳೆಗೆ ಇದ ಮಾದರಿಯ ಐದು ವಿಮಾನಗಳನ್ನು ತನ್ನ ಫ್ಲೀಟ್​ಗೆ ಸೇರಿಸಿಕೊಳ್ಳಲಿದೆ.

ವೈಡ್-ಬಾಡಿ ಎ 350-900 ವಿಮಾನವು ಎಲ್ಲಾ ಹಳೆಯ ವಿಮಾನಗಳಿಗಿಂತ ಶೇಕಡಾ 25 ರಷ್ಟು ಕಡಿಮೆ ಇಂಧನವನ್ನು ಬಳಸುತ್ತದೆ. ಇದು ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಂದ ಹೆಚ್ಚು ಬೇಡಿಕೆ ಪಡೆದ ವಿಮಾನಗಳಲ್ಲಿ ಒಂದಾಗಿದೆ.

ಏರ್ ಇಂಡಿಯಾ ಸಂಸ್ಥೆಯು 250 ಏರ್​ಬಸ್​​ ವಿಮಾನಗಳು ಮತ್ತು 220 ಹೊಸ ಬೋಯಿಂಗ್ ವಿಮಾನಗಳಿಗೆ ಆರ್ಡರ್​ ನೀಡಿದೆ. ಇದು ಸುಮಾರು 5 ಲಕ್ಷ ಕೋಟಿ ರೂಪಾಯಿಯ ವಹಿವಾಟಾಗಿದೆ.

Exit mobile version