Site icon Vistara News

ಐಶ್ವರ್ಯಾ-ಅಭಿಷೇಕ್ ಡಿವೋರ್ಸ್ ವದಂತಿ; ಒಟ್ಟಾಗಿ ಕಾಣಿಸಿಕೊಂಡ ದಂಪತಿ

Aishwarya rai and Abhishek Bachchan getting divorce rumours circulated

ಮುಂಬೈ: ಭಾರತದ ಸುಪ್ರಸಿದ್ಧ ತಾರಾ ಜೋಡಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ (Aishwarya rai) ಮತ್ತು ಅಭಿಷೇಕ್ ಬಚ್ಚನ್ (Abhishek bachchan) ಡಿವೋರ್ಸ್ ಪಡೆದುಕೊಳ್ಳಲಿದ್ದಾರೆಂಬ ವದಂತಿ ಜೋರಾಗಿದೆ(divorce rumours). ಈ ಜೋಡಿಯು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಅವರ ಅಭಿಮಾನಿಗಳು ಅವರ ಅನ್ಯೋನ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ, ಬಿಗ್ ಬಿ ಅಮಿತಾಭ್ (Amitabh Bachhan) ಅವರು ತಮ್ಮ ಸೊಸೆ ಐಶ್ವರ್ಯ ಅವರ ಇನ್‌ಸ್ಟಾ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಡಿವೋರ್ಸ್ ವದಂತಿ ಮತ್ತಷ್ಟು ಜೋರಾಗಿದೆ.

ಈ ಎಲ್ಲ ವದಂತಿಗಳ ಮಧ್ಯೆಯೇ ಐಶ್ವರ್ಯಾ ಮತ್ತು ಅಭಿಷೇಕ್ ಅವರು ತಮ್ಮ ಪುತ್ರಿಯೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ವದಂತಿಗಳಿಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದೂ, ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ನೇಟಿಜೆನ್ಸ್ ಬಿಂಬಿಸುತ್ತಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದಾ ಅವರ ಪುತ್ರ ಅಗಸ್ತ್ಯ ನಂದಾ ಅಭಿನಯಿಸಿರುವ ಮೊದಲ ಚಿತ್ರ ದಿ ಆರ್ಚೀಸ್ ಪ್ರೀಮಿಯರ್ ಶೋಗೆ ಇಡೀ ಬಚ್ಚನ್ ಕುಟುಂಬವು ಆಗಮಿಸಿತ್ತು. ಅಮಿತಾಭ್ ಬಚ್ಚನ್ ಕುಟುಂಬ, ನಂದಾ ಕುಟುಂಬಗಳು ಒಟ್ಟಾಗಿ ಈ ಪ್ರೀಮಿಯರ್ ಶೋ ವೀಕ್ಷಿಸಿವೆ. ಇದರಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಅವರು ತಮ್ಮ ಪುತ್ರಿಯೊಂದಿಗೆ ಮಾಧ್ಯಮಗಳಿಗೆ ಪೋಸು ನೀಡಿದ್ದು ವಿಶೇಷವಾಗಿತ್ತು.

ದಿ ಆರ್ಚೀಸ್‌ ಚಿತ್ರದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಮತ್ತು ಬಚ್ಚನ್ ಅವರ ಮೊಮ್ಮಗ ಅಗಸ್ತ್ಯರಲ್ಲದೆ, ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ ನೋಡುಗರ​ ಗಮನ ಸೆಳೆದಿದೆ.

ಇವರೇ ನೋಡಿ ಅಮಿತಾಭ್ ಅವರ ಸಹೋದರ

ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್‌ ಅಪರೂಪವಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ‘ದಿ ಆರ್ಚೀಸ್​’ (The Archies Film) ಚಿತ್ರ ಡಿಸೆಂಬರ್​ 7ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​, ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ಹಲವು ವಿಶೇಷತೆಗಳು ಕಂಡು ಬಂದವು. ಶ್ರೀದೇವಿ ಪುತ್ರಿ ಖುಷಿ ಕಪೂರ್ ಅವರು ಶ್ರೀದೇವಿಯವರ ಹಳೇಯ ಗೌನ್‌ ಧರಿಸಿ ತಾಯಿಯನ್ನು ಸ್ಮರಿಸಿಕೊಂಡಿದ್ದಾರೆ.

ಅಗಸ್ತ್ಯ ನಂದ ಅವರ ಚೊಚ್ಚಲ ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬವು ಹಾಜರಿತ್ತು. ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ, ಶ್ವೇತಾ ಬಚ್ಚನ್ ಜತೆಗೆ ಅವರ ಮಗಳು ನವ್ಯಾ, ಜಯಾ ಮತ್ತು ಅಮಿತಾಭ್‌ ಎಲ್ಲರೂ ಭಾಗಿಯಾಗಿದ್ದರು. ʻದಿ ಆರ್ಚೀಸ್​’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿಲ್ಲ. ಬದಲಿಗೆ, ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ.

ಸಿನಿಮಾದ ಪ್ರೀಮಿಯರ್​ ಶೋನಲ್ಲಿ ಬಚ್ಚನ್‌ ಅವರ ಕುಟುಂಬ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು. ಇನ್ನೂ ವಿಶೇಷ ಅಂದರೆ ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್‌ ಅಪರೂಪವಾಗಿ ಕ್ಯಾಮೆರಾ ಮುಂದೆ ಕಂಡರು. ಕಾಲೇಜು ಪದವಿಯ ನಂತರ, ಅಜಿತಾಭ್ ಉದ್ಯಮಿಯಾದರು. ಭಾರತದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅವರು ನಂತರ ಲಂಡನ್‌ಗೆ ತೆರಳಿದರು. ಅಲ್ಲೇ ಉದ್ಯಮಿಯಾಗಿ ಮುಂದುವರಿದರು. ರಾಮೋಲಾರನ್ನು ವರಸಿದ ಅಜಿತಾಭ್‌ ಅವರಿಗೆ ಮೂರು ಮಕ್ಕಳಿದ್ದಾರೆ. ಅಜಿತಾಭ್ ಮತ್ತು ಅಮಿತಾಭ್ ಅವರಿಗೆ 5 ವರ್ಷಗಳ ವಯಸ್ಸಿನ ಅಂತರವಿದೆ. ಏಕಾಏಕಿ ಅಜಿತಾಭ್ ಮತ್ತು ಅಮಿತಾಭ್ ಒಟ್ಟಿಗೆ ಕಂಡ ಫ್ಯಾನ್ಸ್‌ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Aishwarya Rai: ನಾವು ತುಂಬ ಮಿಸ್‌ ಮಾಡಿಕೊಳ್ಳುತ್ತೇವೆ ಅಪ್ಪ; ಐಶ್ವರ್ಯಾ ರೈ ಭಾವುಕ ಪೋಸ್ಟ್‌!

Exit mobile version