ಬೆಂಗಳೂರು: ಬಹುರಾಷ್ಟ್ರೀಯ ಕಾಫಿ ಚೈನ್ ಶಾಪ್ ಸ್ಟಾರ್‌ಬಕ್ಸ್ (Starbucks Coffee) ಪ್ರದರ್ಶಿಸಿದ ಜಾಹೀರಾತಿಗೆ ಇಡೀ ಸೋಷಿಯಲ್ ಮೀಡಿಯಾ ಶಾಕ್ ಆಗಿದೆ. ಹಲವರು ಕಂಪನಿಯ ಈ ಜಾಹೀರಾತನ್ನು ಅಣಕಿಸಿದ್ದಾರೆ. ಬೆಂಗಳೂರಲ್ಲಿ ಜಾಹೀರಾತು ಪ್ರದರ್ಶಿಸಿರುವ ಕಂಪನಿಯು, ಅದರಲ್ಲಿ ಅಜ್ಜಿ ಒಪ್ಪಿದ ಫಿಲ್ಟರ್ ಕಾಫಿ(Ajji Approved filter coffee ₹ 290) ಬೆಲೆ 290 ರೂ.ನಿಂದ ಆರಂಭ ಎಂದು ಬರೆಯಲಾಗಿದೆ. ಈ ಜಾಹೀರಾತಿನ ಫೋಟೋವನ್ನು ಸೆರೆ ಹಿಡಿದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇಷ್ಟು ದುಬಾರಿ ಕಾಫಿ ಕುಡಿಯಲು ಯಾವುದೇ ಅಜ್ಜಿ ಒಪ್ಪಲಾರಳು ಎಂದು ಅಣಕಿಸಲಾಗಿದೆ(Viral News).
ಆದಿತ್ಯ ವೆಂಕಟೇಶನ್ ಎನ್ನುವವರು ಟ್ವಿಟರ್ ತಮ್ಮ ಖಾತೆಯಲ್ಲಿ ಈ ಫೋಟೋ ಷೇರ್ ಮಾಡಿಕೊಂಡಿದ್ದಾರೆ. “ಆತ್ಮೀಯ ಸ್ಟಾರ್‌ಬಕ್ಸ್, ದೇವರ ಈ ಹಸಿರು ಭೂಮಿಯಲ್ಲಿ 290 ರೂ.ಗೆ ಫಿಲ್ಟರ್ ಕಾಫಿಯನ್ನು ಅನುಮೋದಿಸುವ ಯಾವುದೇ ಅಜ್ಜಿ ಅಕ್ಷರಶಃ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸೆರೆ ಹಿಡಿದ ಜಾಹೀರಾತಿನ ಭಾವಚಿತ್ರದಲ್ಲಿ ಅಜ್ಜಿ ಮತ್ತು ವಯಸ್ಕರೊಬ್ಬರು ಅಕ್ಕಪಕ್ಕ ಕುಳಿತುಕೊಂಡು ಕಾಫಿ ಕುಡಿಯುತ್ತಿದ್ದಾರೆ. ಮೇಲ್ಗಡೆ ಭಾಗದಲ್ಲಿ ಅಜ್ಜಿ ಒಪ್ಪಿದ ಕಾಫಿ ಎಂದು ಹೆಡ್ಡಿಂಗ್ ನೀಡಲಾಗಿದೆ.
ಈ ಫೋಸ್ಟ್ ಸಖತ್ ವೈರಲ್ ಆಗಿದ್ದು, ಈವರೆಗೆ 6 ಲಕ್ಷ ವೀವ್ಸ್ ದೊರೆತಿದೆ ಮತ್ತು 15 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಕಾಫಿಯ ಬೆಲೆ ಕಂಡು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಿಜವಾಗಲೂ ಇದು ಅತಿಯಾದ ಬೆಲೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Caffeine effects | ನಿಮ್ಮ ಕಳಾಹೀನ ಚರ್ಮದ ರಹಸ್ಯ ಅತಿಯಾದ ಕಾಫಿ ಸೇವನೆಯೂ ಆಗಿರಬಹುದು!
ಮತ್ತೊಬ್ಬ ಬಳಕೆದಾರರು, ಆಕಾಂಕ್ಷೆಗಳಿವೆ. ನಂತರ ಕನಸುಗಳಿವೆ. ಮತ್ತು ಕನಸುಗಳ ವೇಷದ ದುಃಸ್ವಪ್ನಗಳಿವೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅಜ್ಜಿ ಮನೆಯಲ್ಲಿ, ನಾಲ್ಕು ರೂಪಾಯಿಗೆ ಮನೆಯಲ್ಲಿ ಬಿಸಿ ಕಾಫಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಹೀಗೆ ನಾನಾ ರೀತಿಯ ಕಮೆಂಟ್‌ಗಳು ಈ ಪೋಸ್ಟಿಗೆ ಬಂದಿವೆ. ಅನೇಕ ಸ್ಟಾರ್‌ಬಕ್ಸ್‌ನ ಈ ದುಬಾರಿ ಬೆಲೆಯನ್ನು ಟೀಕಿಸಿದ್ದಾರೆ.