ದೆಹಲಿ: ಭಾರತದ ಪ್ರಸಿದ್ಧ ವಿಮಾನಸಂಸ್ಥೆಯಾದ ಆಕಾಶ ಏರ್ (Akasa Air) ಗೋರಖ್ಪುರದಿಂದ ದೆಹಲಿ ಮತ್ತು ಬೆಂಗಳೂರಿಗೆ ಪ್ರತಿನಿತ್ಯ ವಿಮಾನ ಸಂಪರ್ಕವನ್ನು ಕಲ್ಪಿಸಿದೆ. 2024 ಮೇ 29 ರಂದು ಸೇವೆ ಆರಂಭಗೊಂಡಿದ್ದು ಮೊದಲ ವಿಮಾನ ಹಾರಾಟವು ಮಹಾಯೋಗಿ ಗೋರಖ್ನಾಥ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:45 ಗಂಟೆಗೆ ಹೊರಟು, ಸಂಜೆ 4 ಗಂಟೆಗೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ.
ಇದು ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನರ ಬೇಡಿಕೆಯನ್ನು ಪೂರೈಸುವ ಮೂಲಕ ಆಕಾಶ ಏರ್ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಅಲ್ಲದೇ ಗೋರಖಪುರ ಹಾಗೂ ಬೆಂಗಳೂರ ನಡುವೆ ನೇರ ವಿಮಾನ ಸಂಪರ್ಕವನ್ನು ಕಲ್ಪಸಿದ ಏಕೈಕ ಸಂಸ್ಥೆ ಆಕಾಶ ಏರ್ ಎನಿಸಿಕೊಂಡಿದೆ. ದೇಶದಾದ್ಯಂತ ಮೆಟ್ರೋ ಹಾಗೂ ಮೆಟ್ರೋ ಇಲ್ಲದ ನಗರಗಳಿಗೆ ತಡೆರಹಿತ ಸಂಪರ್ಕ ಒದಗಿಸಬೇಕೆನ್ನುವ ವಿಮಾನ ಸಂಸ್ಥೆಯ ಧೋರಣೆಯನ್ನು ಎತ್ತಿ ಹಿಡಿದಿದೆ.
ಇತಿಹಾಸ ಮತ್ತು ಸಂಸ್ಕೃತಿಯ ಭಂಡಾರವಾದ ಗೋರಖಪುರ ನಗರ ಅತಿ ಶೀಘ್ರದಲ್ಲಿಯೇ ಆರ್ಥಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗೇ ಈ ನಗರ ತಮ್ಮ ಮೂಲ ಸೌಕರ್ಯಗಳ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೆಟ್ರೋ ನಗರಗಳಾದ ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿನಿತ್ಯದ ವಿಮಾನ ಹಾರಾಟ ಮತ್ತು ವಿಮಾನ ಪ್ರಯಾಣದಲ್ಲಿ ಕೈಗೆಟಕ್ಕುವ ಆಯ್ಕೆಗಳನ್ನು ಒದಗಿಸಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಕಾರಣವಾಗಿದೆ.
ಈ ಸಂಸ್ಥೆಯ ವತಿಯಿಂದ ವಿಮಾನ ಹಾರಾಟ ಪ್ರಾರಂಭವಾದಾಗಿನಿಂದಲೂ ಉತ್ತರ ಪ್ರದೇಶದಲ್ಲಿ ಪ್ರಗತಿ ಹೆಚ್ಚುತ್ತಿದೆ. ಮತ್ತು ಈ ಪ್ರದೇಶದಲ್ಲಿ ಇದು ತನ್ನ ಅಸ್ತಿತ್ವವನ್ನು ಬಲವಾಗಿ ನೆಲೆಯೂರಲಿದೆ ಎನ್ನಲಾಗಿದೆ. ಈಗ ಈ ರಾಜ್ಯದಲ್ಲಿ ಲಕ್ನೌ, ವಾರಣಾಸಿ, ಅಯೋಧ್ಯ, ಪ್ರಯಾಗ ಹಾಗೂ ಗೋರಖಪುರ ಸೇರಿದಂತೆ 5 ಮೆಟ್ರೋ ನಗರಗಳನ್ನು ದೇಶದಾದ್ಯಂತ ಇರುವ ಇತರ ಮೆಟ್ರೋಗಳೊಂದಿಗೆ ತಡೆರಹಿತವಾಗಿ ಸಂಪರ್ಕಿಸುತ್ತಿದೆ.
ಪ್ರಯಾಣಿಕರು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಆಕಾಶ ಏರ್ ಅನೇಕ ಗುಣಮಟ್ಟದ ಉತ್ಪನ್ನಗಳು ಹಾಗೂ ವಿಭಿನ್ನ ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಕಾಲನ್ನು ಆರಾಮದಾಯಕವಾಗಿ ಇರಿಸಿಕೊಳ್ಳುವಂತೆ ಹೆಚ್ಚು ಸ್ಥಳಾವಕಾಶವಿರುವ ಸೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೇ ಇದರಲ್ಲಿ ಯುಎಸ್ ಬಿ ಪೋರ್ಟ್ಸ್ ಅಳವಡಿಸಿದ್ದು, ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವಾಗಲೇ ತಮ್ಮ ಮೊಬೈಲ್ , ಇತರ ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಇಲ್ಲಿ ‘café akasa’ ದ ಮೂಲಕ ಆಹಾರ ಸೇವೆಯನ್ನು ಒದಗಿಸಲಾಗುತ್ತದೆ. ಇದರಲ್ಲಿ ಹಬ್ಬದ ಮೆನುಗಳು, ಹಾಗೂ ಕೊಂಬುಚಾದಂತಹ ಆಯ್ಕೆಗಳಿವೆ. ಒಟ್ಟಾರೆ ಇಲ್ಲಿ ಆರೋಗ್ಯಕರವಾದ ಸ್ವಾದಿಷ್ಟ ಭೋಜನವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ಹಾಗೇ ಪ್ರಯಾಣಿಕರು ತಮ್ಮ ಜೊತೆ ತಮ್ಮ ಸಾಕು ಪ್ರಾಣಿಗಳನ್ನು ಅವುಗಳ ತೂಕದ ಆಧಾರದ ಮೇಲೆ ಕ್ಯಾಬಿನ್ ಒಳಗೆ ಅಥವಾ ಕಾರ್ಗೋದಲ್ಲಿ ಕರೆದೊಯ್ಯಲು ಅವಕಾಶವಿದೆ. ಹಾಗೇಆಕಾಶಏರ್ ದೃಷ್ಟಿಮಾಂದ್ಯತೆಯಿರುವವರಿಗಾಗಿ ಬ್ರೇಲ್ ನಲ್ಲಿ ತನ್ನ ಸುರಕ್ಷತಾ ಸೂಚನಾಕಾರ್ಡ್ ಮತ್ತು ಆನ್ ಬೋರ್ಡ್ ಮೆನು ಕಾರ್ಡ್ ಪರಿಚಯಿಸಿದೆ. ಪ್ರಯಾಣಿಕರಿಗೆ ಕೈಗೆಟಕುವ ದರಗಳಲ್ಲಿ ಎಲ್ಲವನ್ನು ಒಳಗೊಂಡ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದಂತಹ ರಜಾ ಪ್ಯಾಕೇಜ್ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು
ಆಕಾಶ ಏರ್ ನ ನಿರಂತರವಾದ ಕಾರ್ಯ ಚರಣೆ ಸಾಮರ್ಥ್ಯಗಳು ಹಾಗೂ ಪ್ರಯಾಣಿಕರ ಮೆಚ್ಚುಗೆಯ ಮೂಲಕ ಅದು ಭಾರತದ ನಂಬರ್ ಒನ್ ಆಗಿದೆ ಮತ್ತು ಕಳೆದ 12 ತಿಂಗಳುಗಳಿಂದ 85%ಗಿಂತ ಹೆಚ್ಚಿನ ಸರಾಸರಿ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.