Site icon Vistara News

ವಿಮಲ್‌ಗಾಗಿ ಫ್ಯಾನ್ಸ್‌ ಕ್ಷಮೆ ಯಾಚಿಸಿದ ಅಕ್ಷಯ್‌ ಕುಮಾರ್

ನವದೆಹಲಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ವಿಮಲ್‌ ಬ್ರಾಂಡ್‌ ರಾಯಭಾರಿ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ವಿಮಲ್‌ ಬ್ರಾಂಡ್‌ ರಾಯಭಾರಿಯಾಗಿ ಜಾಹಿರಾತಿನಲ್ಲಿ ಪ್ರಚಾರ ಮಾಡಿದ್ದಕ್ಕೆ ಫ್ಯಾನ್ಸ್‌ಗೆ ತಮ್ಮ ಇನ್ಸ್‌ಟಾಗ್ರಾಂ, ಟ್ವಿಟರ್ ಖಾತೆಯಲ್ಲಿ ಪೋಸ್ಟ್‌‌ ಮೂಲಕ ಕ್ಷಮೆಯಾಚಿಸಿದ್ದಾರೆ.

ವಿಮಲ್‌ ಎಂಬ ಬ್ರಾಂಡ್‌ ಗುಟ್ಕಾ ತಯಾರಿಸುವ ಕಂಪೆನಿಯಾಗಿದ್ದು, ತಂಬಾಕು ಕೂಡ ತಯಾರಿಸುತ್ತದೆ. ಈ ರೀತಿಯ ತಂಬಾಕು ತಯಾರಿಕಾ ಸಂಸ್ಥೆಗೆ ಅಕ್ಷಯ್‌ ಕುಮಾರ್‌ ಬ್ರಾಂಡ್‌ ಪ್ರಚಾರ ರಾಯಭಾರಿಗಿದ್ದು, ನಟ ಅಕ್ಷಯ್‌ ಕುಮಾರ್‌ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ನಟ ಅಕ್ಷಯ್‌ ಕುಮಾರ್‌ ಅವರ ಈ ನಡೆಗೆ ಅಭಿಮಾನಿಗಳು ತೀವ್ರ ವಿರೊಧ ವ್ಯಕ್ತಪಡಿಸಿದ್ದರು. ಸಮಾಜಿಕ ಜಾಲತಾಣದಲ್ಲಿ ನಟ ಅಕ್ಷಯ್‌ ಅವರ ಈ ನಿರ್ಧಾರವನ್ನು ಅನೇಕರು ಪ್ರಶ್ನಿಸಿದ್ದರು. ಈ ಹಿಂದೆ ಅಕ್ಚಯ್‌ ಕುಮಾರ್‌ ಮದ್ಯಪಾನ, ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಂಬಾಕು ಸೇವನೆಯನ್ನು ವಿರೋಧಿಸಿ ಮಾತನಾಡಿದ್ದರು. ಅದೇ ಅಕ್ಷಯ್‌ ಕುಮಾರ್‌ ವಿಮಲ್‌ ಪಾನ್‌ಮಸಾಲಾವನ್ನು ಪ್ರಚಾರ ಮಾಡುತ್ತಿದ್ದರು. ಈಗ ಅಕ್ಷಯ್‌ ಕುಮಾರ್‌ ಅಭಿಮಾನಿಗಳು ಮತ್ತೊಮ್ಮೆ ಆ ವೀಡಿಯೋಗಳನ್ನು ವೈರಲ್‌ ಮಾಡುವ ಜತೆಗೆ ಅಕ್ಷಯ್‌ ಅವರಿಗೆ ತಾವು ಹಿಂದೆ ಹೇಳಿದ ಮಾತುಗಳನ್ನು ನೆನಪಿಸಿದ್ದಾರೆ.

ಅಭಿಮಾನಿಗಳ ಪ್ರಶ್ನೆ ಪ್ರತಿಕ್ರಿಯಿಸಿ ಅಕ್ಷಯ್‌ ಕುಮಾರ ಕ್ಷಮೆಯಾಚಿಸಿದ್ದು ಅಲ್ಲದೆ, ವಿಮಲ್‌ ಬ್ರಾಂಡ್‌ ಪ್ರಚಾರ ರಾಯಭಾರಿ ಸ್ಥಾನದಿಂದ ಕೆಳಿಗಿಳಿಯುವುದಾಗಿ ಹೇಳಿದ್ದಾರೆ.

ನಟ ಅಕ್ಷಯ್‌ ತಮ್ಮ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ

ʼನಾನು ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನನ್ನು ಕ್ಷಮಿಸಿ. ನಾನು ವಿಮಲ್‌ ಬ್ರಾಂಡ್‌ನ ರಾಯಭಾರಿಯಾಗಿರುವ ನಿರ್ಧಾರದಿಂದ ನನ್ನ ಅಭಿಮಾನಿಗಳಿಗೆ ನೋವುಂಟಾಗಿರುವುದು ನನಗೂ ಬೇಸರಮೂಡಿಸಿದೆ. ಅವರೆಲ್ಲರ ಪ್ರತಿಕ್ರಿಯೆಯನ್ನು ನಾನು ಗೌರವಿಸುತ್ತೇನೆ. ಹಾಗಾಗಿ ನಾನು ವಿಮಲ್‌ ಬ್ರಾಂಡ್‌ ರಾಯಭಾರಿಯ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಅಲ್ಲದೆ, ನಾನು ಪಡೆದ ಸಂಪೂರ್ಣ ವೇತನವನ್ನು ಸತ್ಕಾರ್ಯಕ್ಕೆ ಉಪಯೋಗಿಸುತ್ತೇನೆ. ಈಗಾಗಲೆ, ವಿಮಲ್‌ ವಿಮಲ್‌ ಸಂಸ್ಥೆ ಹಾಗೂ ನನ್ನ ನಡುವೆ ಕಾನೂನು ಬದ್ಧ ಒಪ್ಪಂದ ಇರುವ ಕಾರಣದಿಂದ ಜಾಹಿರಾತು ಕೆಲ ಕಾಲ ಪ್ರಸಾರವಾಗುತ್ತದೆ. ಮುಂದಿನ ದಿನಗಳಲ್ಲಿ ನಾನು ನಿರ್ಧಾರವನ್ನು ಜವಾಬ್ದಾರಿಯುತವಾಗಿ ಮಾಡುವುದಾಗಿ ಮಾತು ನೀಡುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನನ್ನ ಮೇಲೆ ಹೀಗೆಯೇ ಇರಲಿ.ʼ

ಈಗಾಗಲೇ, ವಿಮಲ್‌ ಪಾನ್‌ ಮಸಾಲ ಜಾಹಿರಾತಿನಲ್ಲಿ ಅಜಯ್‌ ದೇವಗನ್‌ ಹಾಗೂ ಶಾರೂಖ್‌ ಖಾನ್‌ ಭಾಗಿಯಾಗಿದ್ದರು. ಇತ್ತೀಚೆಗೆ ಅಜಯ್‌‌ ದೇವಗನ್ ಹಾಗೂ ಶಾರೂಖ್‌ ಖಾನ್‌ ಸೇರಿ ಅಕ್ಷಯ್‌ ಕುಮಾರ್‌ ಅವರನ್ನು ತಮ್ಮ್‌ ಗುಂಪಿಗೆ ಸ್ವಾಗಿತಿಸುವ ವೀಡಿಯೋ ವೈರಲ್‌ ಅಗಿತ್ತು.

ಹೆಚ್ಚಿನ ಓದಿಗಾಗಿ:

ಹೆಚ್ಚಿನ ಓದಿಗಾಗಿ: ಈಜಿ ಚಿನ್ನ ಗೆದ್ದ ಮಾಧವನ್‌ ಪುತ್ರ: ವೇದಾಂತ್‌ ಸಾಧನೆಗೆ ಮೆಚ್ಚುಗೆಯ ಸುರಿಮಳೆ

Exit mobile version