ಶ್ರೀನಗರ: ಭಾರತೀಯ ಸೇನೆಯ ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಇಂದು ಜಮ್ಮು-ಕಾಶ್ಮಿರದ ಕಿಶ್ತಾವರ್ ಜಿಲ್ಲೆಯಲ್ಲಿ ಪತನಗೊಂಡಿದೆ (Army Helicopter Crash). ಈ ಹೆಲಿಕಾಪ್ಟರ್ನಲ್ಲಿ ಮೂವರು ಇದ್ದರು ಎಂದು ವರದಿಯಾಗಿದೆ. ಈ ಮೂವರಲ್ಲಿ ಇಬ್ಬರು ಪೈಲೆಟ್ಗಳಿಗೆ ಗಾಯವಾಗಿದ್ದು, ಜೀವಕ್ಕೇನೂ ಅಪಾಯವಾಗಿಲ್ಲ. ಇನ್ನೊಬ್ಬರು ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಿಶ್ತಾವರ್ನ ಮಾರ್ವಾ ತಹಸಿಲ್‌ನಲ್ಲಿರುವ ಮಚ್ನಾ ಎಂಬ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಹೆಲಿಕಾಪ್ಟರ್ನ ಅವಶೇಷಗಳು ಮರುಸುದರ್ ನದಿ ಬಳಿ ಪತ್ತೆಯಾಗಿವೆ.
ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಬೆಟ್ಟಗಳ ಬಳಿ ಪತನಗೊಂಡಿತ್ತು. ಅದರಲ್ಲಿದ್ದ ಇಬ್ಬರೂ ಪೈಲೆಟ್ಗಳು ಮೃತಪಟ್ಟಿದ್ದರು. ಈ ಸಲ ಪತನಗೊಂಡ ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಎರಡು ಎಂಜಿನ್ಗಳಿರುವ ಯುಟಿಲಿಟಿ ಪ್ಲೇನ್ ಆಗಿದೆ. ಇದನ್ನು ಅಭಿವೃದ್ಧಿ ಪಡಿಸಿದ್ದು ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ (HAL). ಹಲಿಕಾಪ್ಟರ್ ಎಲ್ಲಿಂದ-ಎಲ್ಲಿಗೆ ಹೋಗುತ್ತಿತ್ತು, ತರಬೇತಿ ಹಾರಾಟ ನಡೆಸುತ್ತಿತ್ತಾ ಎಂಬಿತ್ಯಾದಿ ಮಾಹಿತಿಗಳಿನ್ನೂ ಲಭ್ಯವಾಗಿಲ್ಲ. ಕಿಶ್ತ್ವಾರಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು-ಮೂರು ದಿನಗಳಿಂದಲೂ ಮೋಡ ಕವಿದ ವಾತಾವರಣ ಇದೆ. ಮಳೆ, ಹಿಮಪಾತ ಆಗುತ್ತಿದೆ. ಹೆಲಿಕಾಪ್ಟರ್ ಪತನಕ್ಕೆ ಕೆಟ್ಟ ವಾತಾವರಣವೇ ಕಾರಣ ಆಗಿರಬಹುದು ಎಂದು ಕಿಶ್ತ್ವಾರಾ ಎಸ್ಎಸ್ಪಿ ಖಲಿ ಪೋಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Army Helicopter Crash: ಭಾರತೀಯ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಇಬ್ಬರು ಪೈಲಟ್‌ಗಳ ಸಾವು, ತನಿಖೆಗೆ ಸೇನೆ ಆದೇಶ