Site icon Vistara News

Baba Vanga Predictions | 2023ರಲ್ಲಿ ಸೌರ ಸುನಾಮಿ, ಅಣ್ವಸ್ತ್ರ ಸ್ಫೋಟ, ಏಲಿಯನ್ಸ್‌ ದಾಳಿ, ಲ್ಯಾಬ್‌ನಲ್ಲಿ ಶಿಶು, ಬಾಬಾ ವಂಗಾ ಭವಿಷ್ಯದಲ್ಲೇನಿದೆ?

Baba Vanga Predictions

Rise In Terror Attacks, Putin's Assasination: Baba Vanga's Predictions For 2024

ನವದೆಹಲಿ: ಬಲ್ಗೇರಿಯಾದ ಬಾಬಾ ವಂಗಾ (84) (Baba Vanga Predictions) ಎಂಬ ಅಂಧ ಮಹಿಳೆ ಭವಿಷ್ಯ ನುಡಿದಳು ಎಂದರೆ ಇಡೀ ಜಗತ್ತೇ ಕಿವಿಯಾಗುತ್ತದೆ. ಅಷ್ಟರಮಟ್ಟಿಗೆ ಬಾಬಾ ವಂಗಾ ಭವಿಷ್ಯ ನುಡಿಯುವಲ್ಲಿ ಹೆಸರು ಗಳಿಸಿದ್ದಾರೆ. ಇದೇ ಮಹಿಳೆ ಈಗ ೨೦೨೩ರಲ್ಲಿ ಜಗತ್ತಿನಾದ್ಯಂತ ಏನೇನು ಘಟಿಸಲಿವೆ ಎಂಬುದರ ಕುರಿತು ಭವಿಷ್ಯ ನುಡಿದಿದ್ದು, ಆತಂಕ ಮೂಡಿದೆ. ಇವರು ನುಡಿದ ಭವಿಷ್ಯವು ಇದುವರೆಗೆ ಶೇ.೮೫ರಷ್ಟು ನಿಜವಾಗಿದೆ. ಹಾಗಾದರೆ, ಬಾಬಾ ವಂಗಾ ನುಡಿದ ಭವಿಷ್ಯದಲ್ಲಿ ಏನೆಲ್ಲ ಅಂಶಗಳಿವೆ? ಇಲ್ಲಿದೆ ಮಾಹಿತಿ.

೧. ಜಾಗತಿಕ ತಾಪಮಾನದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮುಂದಿನ ವರ್ಷ ಜಗತ್ತಿನಾದ್ಯಂತ ಸೌರ ಸುನಾಮಿ ಭೂಮಿಗೆ ಅಪ್ಪಳಿಸಲಿದೆ. ಇದರಿಂದ ಭೂಮಿ ಮೇಲಿನ ಮರಗಳು ಕರಕಲಾಗುತ್ತವೆ ಎಂದು ಬಾಬಾ ವಂಗಾ ಹೇಳಿದ್ದಾರೆ.

೨. ಭೂಮಿಗೆ ಏಲಿಯನ್‌ಗಳು ಅಪ್ಪಳಿಸಲಿವೆ. ಇದರಿಂದ ಕೋಟ್ಯಂತರ ಜನ ಸಾವಿಗೀಡಾಗುತ್ತಾರೆ. ಭೂಮಿ ನರಕಸದೃಶವಾಗುತ್ತದೆ.

೩. ಹವಾಮಾನ ಬದಲಾವಣೆಯಿಂದ ಬ್ರಹ್ಮಾಂಡದಲ್ಲಿ ಭಾರಿ ಬದಲಾವಣೆ ಆಗಲಿವೆ. ಅತಿವೃಷ್ಟಿ, ಅನಾವೃಷ್ಟಿಯು ಭೂಮಿ ಮೇಲಿನ ಜನರನ್ನು ಪರಿತಪಿಸುವಂತೆ ಮಾಡಲಿವೆ.

೪. ನೈಸರ್ಗಿಕವಾಗಿ ಮಕ್ಕಳು ಹುಟ್ಟುವುದಿಲ್ಲ. ಬಾಡಿಗೆ ತಾಯ್ತನದ ಸಮಸ್ಯೆ ಅಂತ್ಯವಾಗುತ್ತದೆ. ಲ್ಯಾಬ್‌ಗಳಲ್ಲಿಯೇ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯ ಮನುಷ್ಯನದ್ದಾಗುತ್ತದೆ.

೫. ಏಷ್ಯಾದಲ್ಲಿ ಭಾರಿ ಪ್ರಮಾಣದ ಅಣ್ವಸ್ತ್ರಗಳ ಸ್ಫೋಟವಾಗುತ್ತದೆ. ಇದರಿಂದ ದಟ್ಟವಾದ ಹೊಗೆಯು ಮೋಡಗಳನ್ನೇ ಮರೆಮಾಚಿದಂತಾಗುತ್ತದೆ. ಮನು ಸಂಕುಲಕ್ಕೂ ಇದರಿಂದ ಭಾರಿ ಪರಿಣಾಮ ಉಂಟಾಗುತ್ತದೆ.

ಇದನ್ನೂ ಓದಿ | Business success | ಜ್ಯೋತಿಷ್ಯ ನಂಬಿರದ ಯುವಕನ ಭವಿಷ್ಯ ರೂಪಿಸಿದ ಆನ್‌ಲೈನ್‌ ಆಸ್ಟ್ರಾಲಜಿ ಸ್ಟಾರ್ಟಪ್!

Exit mobile version