ಲಾಸ್ ಏಂಜಲೀಸ್, ಅಮೆರಿಕ: ಬೆಸ್ಟ್ ಡಾಕ್ಯುಮೆಂಟರಿ ಕೆಟಗರಿಯಲ್ಲಿ ನಾಮಿನೇಟ್ ಆಗಿದ್ದ ಆಲ್ ದಟ್ ಬ್ರೆತ್ಸ್(All that breathes) ಚಿತ್ರವು ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಯಿತು. ಈ ಕೆಟಗರಿಯಲ್ಲಿ ನಾವಲ್ನಿ ಚಿತ್ರವು ಗೆದ್ದಿದೆ. ರಷ್ಯಾದ ಪ್ರತಿಪಕ್ಷ ನಾಯ ನಾವಲ್ನಿ ಕುರಿತಾದ ಈ ಡಾಕ್ಯುಮೆಂಟರಿ ಇದಾಗಿದೆ(Oscar 2023).
ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ನಾಮಿನೇಟ್ ಆಗಿವೆ. ಜತೆಗೆ ಬೆಸ್ಟ್ ಒರಿಜನಲ್ ಸಾಂಗ್ ಕೆಟಗರಿಯಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ನಾಟು ನಾಟು ಸಾಂಗ್ ನಾಮಿನೇಟ್ ಆಗಿದೆ. ಇನ್ನಷ್ಟೇ ಪ್ರಶಸ್ತಿಗಳನ್ನು ಗೆಲ್ಲಬೇಕಿದೆ. ಆಸ್ಕರ್ ಪ್ರಶಸ್ತಿ (Oscar 2023) ಸಿನಿಮಾ ರಂಗದವರಿಗೆ ಅತಿ ದೊಡ್ಡ ಗೌರವ. ಆ ಪ್ರಶಸ್ತಿ ಪಡೆಯಬೇಕೆನ್ನುವುದು ಸಿನಿಮಾ ಕ್ಷೇತ್ರದ ಎಲ್ಲರ ಕನಸಾಗಿರುತ್ತದೆ. ಅದರಲ್ಲೂ ಈ ಬಾರಿಯ ಆಸ್ಕರ್ ಪ್ರಶಸ್ತಿಯಂತೂ ಇನ್ನೂ ವಿಶೇಷ. ಭಾರತ ಕೂಡ ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ನಮ್ಮ ಮುಡಿಗೆ ಪ್ರಶಸ್ತಿಯ ಗರಿ ಸಿಗುತ್ತದೆಯೇ ಎಂದು ನೋಡಲು ಭಾರತೀಯರು ಕಾದು ಕುಳಿತಿದ್ದಾರೆ.