ನವದೆಹಲಿ: ಗರ್ಭಪಾತದ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ವಿವಾಹಿತೆಯರು ಮಾತ್ರವಲ್ಲ, ಎಲ್ಲ ಅವಿವಾಹಿತೆಯರು ಸಹ ಸುರಕ್ಷತೆ ಹಾಗೂ ಕಾನೂನಿನ ಅಡಿಯಲ್ಲಿ (Legal Abortion) ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮಹಿಳೆಯ ಗರ್ಭಪಾತಕ್ಕೆ ಆಕೆಯು ವಿವಾಹಿತೆಯೋ, ಅಲ್ಲವೋ ಎಂಬುದು ಅಡ್ಡಿಯಾಗಬಾರದು ಎಂದೂ ಆದೇಶ ಹೊರಡಿಸಿದೆ.
“ಹೆಣ್ಣುಮಕ್ಕಳ ಒಪ್ಪಿಗೆ ಇಲ್ಲದೆ ನಡೆಸುವ ಸಂಭೋಗವೇ ಅತ್ಯಾಚಾರವಾಗಿದೆ. ಇಂತಹ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ಬಲವಂತವಾಗಿ ಗರ್ಭ ಧರಿಸುತ್ತಾರೆ. ಮದುವೆಯಾದವರು ಒತ್ತಾಯಪೂರ್ವಕವಾಗಿ ಗರ್ಭ ಧರಿಸಿದರೂ ಅದು ಅತ್ಯಾಚಾರವಾಗುತ್ತದೆ. ಕಾನೂನುಬದ್ಧ ಗರ್ಭಪಾತ ಕಾಯಿದೆ (MTP Act) ಅಡಿಯಲ್ಲಿ ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಹಾಗಾಗಿ, ವಿವಾಹಿತೆಯರ ಜತೆಗೆ ಅವಿವಾಹಿತೆಯರೂ ಕಾನೂನುಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದು” ಎಂದು ನ್ಯಾ.ಚಂದ್ರಚೂಡ್ ಹೇಳಿದ್ದಾರೆ.
ಅತ್ಯಾಚಾರಕ್ಕೀಡಾಗಿ ಗರ್ಭ ಧರಿಸಿದವರು, ಪತಿಯ ಒತ್ತಾಯದಿಂದಲೋ, ಮಕ್ಕಳು ಬೇಕು ಎಂಬ ಅತಿಯಾದ ಆಸೆಯಿಂದಲೋ ಗರ್ಭ ಧರಿಸಿದವರು ಕೂಡ ಕೋರ್ಟ್ ಆದೇಶದಿಂದಾಗಿ ಇನ್ನುಮುಂದೆ ಗರ್ಭಪಾತ ಮಾಡಿಸಿಕೊಳ್ಳಬಹುದಾಗಿದೆ. ಎಂಟಿಪಿ ಕಾಯಿದೆ ಅಡಿಯಲ್ಲಿ ಗರ್ಭ ಧರಿಸಿದ 24 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ | 24ನೇ ವಾರದಲ್ಲಿ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ಹೈಕೋರ್ಟ್, ಸುಪ್ರೀಂ ಮೆಟ್ಟಿಲು ಹತ್ತಿದ ಮಹಿಳೆ