ಅಮೆಜಾನ್ ನ (Amazon India) ಗೋದಾಮುಗಳಲ್ಲಿ (warehouse) ಕೆಲಸ ಮಾಡುವವರು ನೀರು ಕುಡಿಯಬಾರದು, ವಾಶ್ ರೂಮ್ ಗೆ ಹೋಗಬಾರದು (no toilet, water breaks) ಎಂದು ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣದ (Haryana) ಮಾನೇಸರ್‌ನಲ್ಲಿರುವ (Manesar) ಅಮೆಜಾನ್‌ನ ಐದು ಗೋದಾಮುಗಳ ಕೆಲಸ ಮಾಡುವವರಿಗೆ ಈ ಕಠಿಣ ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ.
ಆರು ಟ್ರಕ್‌ಗಳಿಂದ ಪ್ಯಾಕೇಜ್‌ಗಳನ್ನು ಇಳಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಒತ್ತಾಯಿಸಲಾಯಿತು.
ಶಿಫ್ಟ್ ಸಮಯದಲ್ಲಿ ಕಾರ್ಮಿಕರು ಸಮಯ ವ್ಯರ್ಥ ಮಾಡುತ್ತಿಲ್ಲವೇ ಎಂದು ಪರಿಶೀಲಿಸಲು ಹಿರಿಯರು ವಾಶ್‌ರೂಮ್‌ಗಳನ್ನು ಪರಿಶೀಲಿಸುತ್ತಾರೆ. ಹರಿಯಾಣದ ಮನೇಸರ್‌ನಲ್ಲಿರುವ ಅಮೆಜಾನ್ ಇಂಡಿಯಾದ ಐದು ಗೋದಾಮುಗಳಲ್ಲಿ ತಿಂಗಳಿಗೆ 10,088 ರೂ ಆದಾಯ ಪಡೆಯುವ 24 ವರ್ಷ ವಯಸ್ಸಿನವರು ವಾರದಲ್ಲಿ ಐದು ದಿನಗಳಲ್ಲಿ ದಿನಕ್ಕೆ ಹತ್ತು ಗಂಟೆ ಕೆಲಸ ಮಾಡುತ್ತಾರೆ.
ತಲಾ 30 ನಿಮಿಷಗಳ ಊಟ ಮತ್ತು ಚಹಾ ವಿರಾಮಗಳು ಸೇರಿ ಉಳಿದ ಯಾವುದೇ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದರೂ ದಿನಕ್ಕೆ ನಾಲ್ಕು ಟ್ರಕ್‌ಗಳಿಗಿಂತ ಹೆಚ್ಚು ಇಳಿಸಲು ಸಾಧ್ಯವಿಲ್ಲ. ಎರಡು ದಿನಗಳ ಹಿಂದೆ, ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಗುರಿಯನ್ನು ಸಾಧಿಸಲು ನಾವು ನೀರು ಮತ್ತು ವಾಶ್‌ರೂಮ್ ವಿರಾಮಗಳನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿಸಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ.
ಹರಿಯಾಣದ ಕೈಗಾರಿಕಾ ಕೇಂದ್ರವಾದ ಮನೇಸರ್‌ನಲ್ಲಿರುವ ಗೋದಾಮುಗಳಲ್ಲಿ ಕಾರ್ಮಿಕರಿಂದ ಆರೋಪ ಕೇಳಿ ಬಂದ ಬಳಿಕ ಅಮೆಜಾನ್ ಇಂಡಿಯಾದ ವಕ್ತಾರರು ಪರಿಶೀಲನೆ ನಡೆಸಿದರು.
ಕಾರ್ಮಿಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮೆಜಾನ್ ಇಂಡಿಯಾದ ವಕ್ತಾರರು, ನಾವು ಈ ಬಗ್ಗೆ ತನಿಖೆ ನಡೆಸಿದ್ದೇವೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ನಮ್ಮ ಉದ್ಯೋಗಿಗಳ ಮೇಲೆ ಈ ರೀತಿಯ ವಿನಂತಿಗಳನ್ನು ಎಂದಿಗೂ ಮಾಡುವುದಿಲ್ಲ. ಇಂತಹ ಘಟನೆ ಕಂಡುಬಂದರೆ ತಕ್ಷಣವೇ ಅದನ್ನು ನಿಲ್ಲಿಸುತ್ತೇವೆ. ತಂಡದ ಬೆಂಬಲ, ಆರೋಗ್ಯ ಮತ್ತು ಸುರಕ್ಷತೆಯ ಕುರಿತು ನಮ್ಮ ನಿರೀಕ್ಷೆಗಳು ಒಳಗೊಂಡಿರುತ್ತವೆ ಎಂದು ಹೇಳಿದ್ದಾರೆ.
ಕಂಪೆನಿಯು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಎಲ್ಲಾ ಕಟ್ಟಡಗಳು ಶಾಖ ಸೂಚ್ಯಂಕ ಮಾನಿಟರಿಂಗ್ ಸಾಧನಗಳನ್ನು ಹೊಂದಿವೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನದಲ್ಲಿನ ಬದಲಾವಣೆಗಳನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ರೆಸ್ಟ್ ರೂಂ ಅನ್ನು ಬಳಸಲು, ನೀರು ಪಡೆಯಲು ಅಥವಾ ಮ್ಯಾನೇಜರ್ ಅಥವಾ ಹೆಚ್ ಆರ್ ನೊಂದಿಗೆ ಮಾತನಾಡಲು ಉದ್ಯೋಗಿಗಳು ತಮ್ಮ ಪಾಳಿಗಳ ಉದ್ದಕ್ಕೂ ಅನೌಪಚಾರಿಕ ವಿರಾಮಗಳನ್ನು ತೆಗೆದುಕೊಳ್ಳಲು ಮುಕ್ತರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಅಮೆಜಾನ್ ವಿದೇಶದಲ್ಲಿ ಇಂತಹ ಆರೋಪಗಳನ್ನು ಎದುರಿಸಿದೆ. ಯುಎಸ್ ನಲ್ಲಿನ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತವು 2022 ಮತ್ತು 2023 ರಲ್ಲಿ ಕಂಪೆನಿಯ ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಆರು ಗೋದಾಮುಗಳಲ್ಲಿ ಕಾರ್ಮಿಕರಿಗೆ ಆದ ಗಾಯಗಳ ಕುರಿತು ಸರಿಯಾದ ವರದಿ ಮಾಡಲು ವಿಫಲವಾಗಿದೆ ಎನ್ನುವ ದೂರು ಕೇಳಿ ಬಂದಿತ್ತು.
ಇದನ್ನೂ ಓದಿ: Windfall Tax: ಕಚ್ಚಾ ತೈಲದ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ 3,250 ರೂ.ಗೆ ಇಳಿಸಿದ ಸರ್ಕಾರ
ಟ್ರಕ್‌ಗಳು ಹೊರಗೆ ನಿಲ್ಲಿಸುವುದರಿಂದ ಹೆಚ್ಚು ಬಿಸಿಯಾಗಿರುತ್ತವೆ. ಕಾರ್ಮಿಕರು ಅದರಿಂದ ವಸ್ತುಗಳನ್ನು ಇಳಿಸುವಾಗ ಬಹು ಬೇಗನೆ ದಣಿಯುತ್ತಾರೆ. ಇದು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹರಿಯಾಣದ ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳಿದ್ದಾರೆ.
ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಆದರೆ ಈ ಆವರಣದಲ್ಲಿ ವಿಶ್ರಾಂತಿ ಕೊಠಡಿ ಇಲ್ಲ. ನಾವು ಅಸ್ವಸ್ಥರಾಗಿದ್ದರೆ ವಾಶ್‌ರೂಮ್ ಅಥವಾ ಲಾಕರ್ ಕೋಣೆಗೆ ಹೋಗುವುದು ಒಂದೇ ಆಯ್ಕೆಯಾಗಿದೆ. ಹಾಸಿಗೆ ಇರುವ ಒಂದು ಕೋಣೆ ಇದೆ. ಆದರೆ ಇಲ್ಲಿ ಕಾರ್ಮಿಕರನ್ನು 10 ನಿಮಿಷಗಳ ಅನಂತರ ಹೊರಡಲು ಕೇಳಲಾಗುತ್ತದೆ. ನಾನು ದಿನಕ್ಕೆ ಒಂಬತ್ತು ಗಂಟೆಗಳ ಕಾಲ ನಿಲ್ಲುತ್ತೇನೆ ಮತ್ತು ಪ್ರತಿ ಗಂಟೆಗೆ 60 ಸಣ್ಣ ಉತ್ಪನ್ನ ಅಥವಾ 40 ಮಧ್ಯಮ ಗಾತ್ರದ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು ಎಂದು ದೂರಿದ್ದಾರೆ.