ನವದೆಹಲಿ: ಸಿಖ್ ಪ್ರತ್ಯೇಕತಾವಾದಿ (Sikh separatist) ಮತ್ತು ಅಮೆರಿಕನ್-ಕೆನಡಾದ ಪ್ರಜೆ ಗುರ್ಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಗೆ ಸಂಚು ರೂಪಿಸಿದ ಆರೋಪದ ಭಾರತೀಯ ಆರೋಪಿ ನಿಖಿಲ್ ಗುಪ್ತಾ (Nikhil Gupta) ಜೆಕ್‌ನ ಪ್ರೇಗ್ ವಕ್ಲಾವ್ ಹ್ಯಾವೆಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಅವರಿಗೆ ಚಿತ್ರ ಹಿಂಸೆ ನೀಡಲಾಗಿದೆ ಎಂದು ನಿಖಿಲ್ ಗುಪ್ತಾ ಅವರ ಕುಟುಂಬವು ಆರೋಪ ಮಾಡಿದೆ. ಈ ಪ್ರಕರಣದಲ್ಲಿ ಭಾರತ ಸರ್ಕಾರವು(Indian Government) ಮಧ್ಯ ಪ್ರವೇಶಿಸುವೆಂತೆ ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ನಿಖಿಲ್ ಗುಪ್ತಾ ಕುಟುಂಬಸ್ಥರು ಅರ್ಜಿ ದಾಖಲಿಸಿದ್ದಾರೆ.
ವಿಮಾನದಲ್ಲಿ ಬಂದಿಳಿದ ನಂತರ ನಿಖಿಲ್ ಗುಪ್ತಾನನ್ನು ಅಮೆರಿಕದ ಏಜೆಂಟರು ಕಪ್ಪು ಎಸ್‌ಯುವಿಯಲ್ಲಿ ಕೂಡಿಸಿದ್ದಾರೆ ಮತ್ತು ವಿದೇಶಿ ನಗರದಲ್ಲಿ ಸುತ್ತಾಡಿಸಿದ್ದಾರೆ. ಇದೇ ವೇಳೆ, ಮೂರು ಗಂಟೆಗಳ ಕಾಲ ಹೀಗೆಯೇ ಆತನನ್ನು ವಿಚಾರಣೆ ಮಾಡಲಾಗಿದೆ. ಕೊನೆಗೆ ಗುಪ್ತಾ ಕೈಯಲ್ಲಿದ್ದ ಮೊಬೈಲ್ ಫೋನ್ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರ ಕುಟುಂಬವು ಆರೋಪಿಸಿದೆ.
52 ವರ್ಷದ ಗುಪ್ತಾ ಕುಟುಂಬದ ಸದಸ್ಯರು ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ದಾಖಲಿಸಿದ್ದಾರೆ. ನಿಖಲ್ ಗುಪ್ತಾ ಬಂಧನ ಪ್ರಕರಣದಲ್ಲಿ ಸಾಕಷ್ಟು ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ನಿಖಿಲ್ ಗುಪ್ತಾ ಮತ್ತು ಅವರು ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ. ಕೊಲೆ ಯತ್ನ ಆರೋಪದ ಮೇಲೆ ಅವರನ್ನು ಯುನೈಟೆಡ್ ಸ್ಟೇಟ್ಸ್‌ಗೆ ಹಸ್ತಾಂತರಿಸಲಾಗುತ್ತಿತ್ತು, ಈ ಹಂತದಲ್ಲಿ ಭಾರತ ಸರ್ಕಾರಕ್ಕೆ ಮಧ್ಯ ಪ್ರವೇಶಿಸುಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ನಿಖಿಲ್ ಗುಪ್ತಾ ಅವರನ್ನು ಕಾನೂನು ಜಾರಿಗೊಳಿಸುವವರೆಂದು ಗುರುತಿಸಿಕೊಂಡ ಕೆಲವು ವ್ಯಕ್ತಿಗಳು ಸಂಪರ್ಕಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಪ್ರೇಗ್ ವಿಮಾನ ನಿಲ್ದಾಣದ ಹೊರಗೆ ಅವರನ್ನು ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಾಯಶಃ ಅರ್ಜಿಯಲ್ಲಿನ ಅತ್ಯಂತ ಮಹತ್ವದ ಅಂಶವೆಂದರೆ, ಜೆಕ್ ಅಧಿಕಾರಿಗಳು ಅರ್ಜಿದಾರರ ವಶ/ಬಂಧನ ಅಥವಾ ಎಲ್ಲಿದ್ದಾರೆ ಎಂಬ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿಲ್ಲ. ಒಂದು ವೇಳೆ ವ್ಯಕ್ತಿಯು ವಿದೇಶಿ ಪ್ರಜೆಯಾಗಿದ್ದರೆ ಮತ್ತು 20 ದಿನಗಳಷ್ಟು ವಿಳಂಬವಾದರೆ ಆ ಕುರಿತು ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಗುರುಪತ್ವಂತ್ ಪನ್ನುನ್ ಕೊಲೆಗೆ ಸ್ಕೆಚ್, ಭಾರತದ ಪ್ರಜೆ ವಿರುದ್ಧ ಅಮೆರಿಕ ಆರೋಪ