ವಾಷಿಂಗ್ಟನ್: ಜನವರಿ 22ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ (ram mandir inauguration) ಹಿನ್ನೆಲೆಯಲ್ಲಿ ಉತ್ತರ ಅಮೆರಿಕದ (North America) ಎಲ್ಲ ದೇವಾಲಯಗಳಲ್ಲಿ (hindu Temples) ಒಂದು ವಾರ ಕಾಲ ಸಂಭ್ರಮಾಚರಣೆ ಮಾಡಲು ಅಮೆರಿಕದ ಹಿಂದುಗಳು ನಿರ್ಧರಿಸಿದ್ದಾರೆ ಎಂದು ಹಿಂದು ದೇಗುಲಗಳನ್ನು ಪ್ರತಿನಿಧಿಸುವ ಉನ್ನತ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶತಮಾನಗಳ ಕಾಯುವಿಕೆಯ ಬಳಿಕ ರಾಮ ಮಂದಿರ ಸಾಧ್ಯವಾಗುತ್ತಿದೆ. ಈ ಪ್ರಕ್ರಿಯೆಯೆ ಭಾಗವಾಗುತ್ತಿರುವ ನಾವು ಸುದೈವಿಗಳು ಮತ್ತು ಆಶೀರ್ವದಿತರು. ಅಮೆರಿಕ ಮತ್ತು ಕೆನಡಾದಲ್ಲಿರುವ ಪ್ರತಿಯೊಬ್ಬರಿಗೂ ಭಾವನಾತ್ಮವಕ ಕ್ಷಣಗಳು ಎದುರಾಗಿವೆ. ಭಕ್ತಿಯು ಪರಾಕಾಷ್ಠೆ ತಲುಪಿದ್ದು, ಪ್ರತಿಯೊಬ್ಬರು ಭಗವಾನ್ ಶ್ರೀ ರಾಮ ಮಂದಿರ ಉದ್ಘಾಟನೆಗಾಗಿ ಎದುರು ನೋಡುತ್ತಿದ್ದಾರೆ ಎಂದು ಅಮೆರಿಕದ ಹಿಂದೂ ದೇವಾಲಯಗಳ ಸಬಲೀಕರಣ ಸಮಿತಿಯಯ ತೇಜಲ್ ಶಾ ಹೇಳಿದ್ದಾರೆ.
ಹಿಂದೂ ಮಂದಿರಗಳ ಸಬಲೀಕರಣ ಸಮಿತಿಯು ಅಮೆರಿಕದಲ್ಲಿ 1,100 ಹಿಂದೂ ಮಂದಿರಗಳನ್ನು ಒಳಗೊಂಡಿರುವ ಪ್ರಮುಖ ಸಂಸ್ಥೆಯಾಗಿದೆ.
ಉತ್ತರ ಅಮೆರಿಕದಲ್ಲಿರುವ ಪ್ರತಿ ಸಣ್ಣ ಮತ್ತು ದೊಡ್ಡ ಹಿಂದೂ ಮಂದಿಗಳಲ್ಲಿ ಒಂದು ವಾರ ಕಾಲ ಸಂಭ್ರಮಾಚಾರಣೆಯನ್ನು ಆಯೋಜಿಸಲಾಗುತ್ತಿದೆ. ಜನವರಿ 15ರಿಂದಲೇ ಪ್ರಾರಂಭವಾಗಲಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ವರೆಗೂ ಇದು ಮುಂದುವರಿಯಲಿದೆ ಎಂದು ತೇಜಲ್ ಶಾ ಅವರು ಹೇಳಿದ್ದಾರೆ.
ಹಿಂದೂ ಮಂದಿರಗಳ ಸಬಲೀಕರಣದ ಸಮಿತಿಯ ಮುಖ್ಯಸ್ಥೆಯಾಗಿರುವ ತೇಜಲ್ ಶಾ ವರು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮದ ಲೈವ್ ಶೋವನ್ನು ಸಾವಿರಾರು ಜನರು ನೋಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಗೆ ನಾವು ಸಂಕಲ್ಪವನ್ನು ಕೂಡ ಮಾಡಲಿದ್ದೇವೆ. ಅಮೆರಿಕದಲ್ಲಿರುವ ನಮಗೆ ಜನವರಿ 21 ರಾತ್ರಿ 11 ಗಂಟೆಗೆ ಕಾರ್ಯಕ್ರಮ ನೋಡಲು ಸಿಗಲಿದೆ. ಹಾಗಾಗಿ ನಾವು ರಾತ್ರಿ ಪೂರ್ತಿ ನಾವು ಭಗವಾನ್ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ನೋಡಲಿದ್ದೇವೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಉದ್ಘಾಟನೆಗೆ ಆಡ್ವಾಣಿ, ಜೋಶಿಗೆ ವಿಹಿಂಪ ಆಹ್ವಾನ