ನವದೆಹಲಿ: ಗೃಹ ಸಚಿವ (home minister) ಅಮಿತ್ ಶಾ (Amit shah) ಮತ್ತು ಅವರ ಪತ್ನಿ ಸೋನಾಲ್ ಶಾ (sonal shah) ಅವರು ಕಳೆದ ಐದು ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ (share market) ಹೂಡಿಕೆ (investment) ಮಾಡಿದ್ದು. ಇದು ಶೇ. 71ರಷ್ಟು ಬೆಳೆದಿದೆ. 2024ರ ಏಪ್ರಿಲ್ 15 ರ ವೇಳೆಗೆ 37.4 ಕೋಟಿ ರೂ. ಆಗಿದೆ ಎಂದು ಭಾರತೀಯ ಚುನಾವಣಾ ಆಯೋಗ (Election Commission of India) ಮಾಹಿತಿ ನೀಡಿದೆ.
ಅಮಿತ್ ಶಾ, ಪತ್ನಿ ತಮ್ಮ ಸಂಪತ್ತಿನ ಸುಮಾರು ಶೇ. 60ರಷ್ಟನ್ನು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಅವರ ದೊಡ್ಡ ಸಂಪತ್ತಾಗಿದೆ. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ ಅಫಿಡವಿಟ್ ನಲ್ಲಿ ಈ ಘೋಷಣೆ ಮಾಡಿದ್ದಾರೆ. ಈಕ್ವಿಟಿ ಮಾರುಕಟ್ಟೆಯ ಹೊರತಾಗಿ, ಶಾ ಮತ್ತು ಅವರ ಪತ್ನಿ ಸಣ್ಣ ಉಳಿತಾಯ ಯೋಜನೆಗಳು, ಚಿನ್ನ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಅಮಿತ್ ಶಾ ಅವರ ಒಟ್ಟು ಆಸ್ತಿಯಲ್ಲಿ ಶೇ. 57ರಷ್ಟು ಮಾತ್ರ ನಿತ್ಯದ ವ್ಯವಹಾರಗಳಿಗೆ ಹೋಗುತ್ತದೆ. ಉಳಿದವು ಆಸ್ತಿ, ಉಳಿತಾಯ ಖಾತೆ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳು, ಚಿನ್ನ ಮತ್ತು ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯಂತಹ ಯೋಜನೆಗಳಲ್ಲಿ ಹೂಡಿಕೆಯ ರೂಪದಲ್ಲಿರುತ್ತದೆ.
ಇದನ್ನೂ ಓದಿ: Lok Sabha Election: ಬಿಜೆಪಿಗೆ 350 ಸೀಟು ಖಚಿತ ಎಂದ ಖ್ಯಾತ ಅರ್ಥಶಾಸ್ತ್ರಜ್ಞ; ಅವರ ಪ್ರಿಡಿಕ್ಷನ್ ಹೀಗಿದೆ
ಶಾ ಮತ್ತು ಅವರ ಪತ್ನಿ ತೆಗೆದುಕೊಂಡ ಹೂಡಿಕೆ ನಿರ್ಧಾರಗಳು ಸ್ಪಷ್ಟ ಮಾದರಿಯನ್ನು ಪ್ರದರ್ಶಿಸುವುದಿಲ್ಲ. ಏಕೆಂದರೆ ಅವರ ಹೂಡಿಕೆಗಳು ಬಹು ವಲಯಗಳಲ್ಲಿ ವ್ಯಾಪಿಸಿರುವ 242 ಕಂಪೆನಿಗಳಲ್ಲಿವೆ. ಗಮನಾರ್ಹ ಅಂಶವೆಂದರೆ ಅವರು ಕೇವಲ 10 ಕಂಪನಿಗಳಲ್ಲಿ 1 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಈ ದಂಪತಿಗಳು ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಮಾಡಿದ ಒಟ್ಟು ಹೂಡಿಕೆಯ ಶೇ. 43ರಷ್ಟಿದೆ.
ಸೋನಾಲ್ ಮತ್ತು ಅಮಿತ್ ಶಾ ಅವರ ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ಸ್ಟಾಕ್‌ಗಳ ಮೇಲಿನ ಇಕ್ವಿಟಿ ಹೂಡಿಕೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ಕೇವಲ ಎರಡು ಬ್ಯಾಂಕುಗಳಾದ ಕೆನರಾ ಬ್ಯಾಂಕ್ ನಲ್ಲಿ 2.96 ಕೋಟಿ ರೂ. ಮತ್ತು ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ನಲ್ಲಿ 1.89 ಕೋಟಿ ರೂ. ಅನ್ನು ಹೂಡಿಕೆ ಮಾಡಿದ್ದಾರೆ. ಇದು ತಮ್ಮ ಸಂಪೂರ್ಣ ಷೇರು ಮಾರುಕಟ್ಟೆ ಹಂಚಿಕೆಯಲ್ಲಿ ಸುಮಾರು ಶೇ. 13ರಷ್ಟು ಹೊಂದಿವೆ. ಇದಲ್ಲದೆ ಪತಿ ಪತ್ನಿ ಇಬ್ಬರೂ ಬಂಧನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಕೆಲವು ಅಂಗಸಂಸ್ಥೆಗಳಲ್ಲಿ ಸಣ್ಣ ಹೂಡಿಕೆಗಳನ್ನು ಮಾಡಿದ್ದಾರೆ.
ಇಬ್ಬರೂ ಸೇರಿ 1 ಕೋಟಿ ರೂ. ಗಿಂತ ಹೆಚ್ಚು ಹೂಡಿಕೆ ಮಾಡಿರುವ ಕಂಪೆನಿಗಳ ಪಟ್ಟಿಯಲ್ಲಿ ಹಲವಾರು ಪ್ರಮುಖ ಎಫ್‌ಎಂಸಿಜಿ ಕಾಣಿಸಿಕೊಂಡಿದೆ ಎಂದು ಅಫಿಡವಿಟ್ ತೋರಿಸುತ್ತದೆ.
ಅವರು ಪ್ರಾಕ್ಟರ್ & ಗ್ಯಾಂಬಲ್ ಹೈಜೀನ್ ಮತ್ತು ಹೆಲ್ತ್‌ಕೇರ್ ಲಿಮಿಟೆಡ್‌ನಲ್ಲಿ 1.9 ಕೋಟಿ ರೂ , ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನಲ್ಲಿ 1.35 ಕೋಟಿ ರೂ. ಮತ್ತು ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್‌ನಲ್ಲಿ 1.07 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಒಟ್ಟಾಗಿ, ಈ ಮೂರು ಕಂಪೆನಿಗಳಲ್ಲಿ ಇಬ್ಬರೂ ತಮ್ಮ ಸ್ಟಾಕ್ ಹೂಡಿಕೆಯ ಶೇ. 12ರಷ್ಟು ಹೊಂದಿದ್ದಾರೆ.
ಇದಲ್ಲದೇ ಗುಜರಾತ್ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ 1.79 ಕೋಟಿ ರೂ., ಲಕ್ಷ್ಮಿ ಮೆಷಿನ್ ವರ್ಕ್ಸ್ ಲಿಮಿಟೆಡ್ ನಲ್ಲಿ 1.75 ಕೋಟಿ ರೂ., ಎಂಆರ್‌ಎಫ್ ಲಿಮಿಟೆಡ್ ನಲ್ಲಿ 1.29 ಕೋಟಿ ರೂ., ಭಾರ್ತಿ ಏರ್‌ಟೆಲ್ ಲಿಮಿಟೆಡ್ ನಲ್ಲಿ 1.22 ಕೋಟಿ ರೂ., ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ 1.05 ಕೋಟಿ ರೂ. ಮತ್ತು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ 1.05 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಶಾ ಮತ್ತು ಅವರ ಪತ್ನಿ ಈ ಎಲ್ಲ ಕಂಪೆನಿಗಳು 1 ಕೋಟಿ ರೂ. ಗೂ ಹೆಚ್ಚು ಹೂಡಿಕೆ ಮಾಡಿರುವ ಇತರ ಕಂಪೆನಿಗಳಾಗಿವೆ.
ಒಟ್ಟಾರೆಯಾಗಿ ಶಾ ಮತ್ತು ಅವರ ಪತ್ನಿಯವರ ಒಟ್ಟು ಆಸ್ತಿಗಳು – ಚರ ಮತ್ತು ಸ್ಥಿರ ಎರಡೂ 2024 ರಲ್ಲಿ 65.7 ಕೋಟಿ ರೂ.ಗೆ ಹೆಚ್ಚಾಗಿದೆ. 2019 ರಲ್ಲಿ ಇವರ ಒಟ್ಟು ಅಸ್ತಿ 40.3 ಕೋಟಿ ರೂ. ಗಲಾಗಿತ್ತು. ಇದು ಈ ಬಾರಿ ಶೇ. 63ರಷ್ಟು ಏರಿಕೆಯಾಗಿದೆ. ಇವರಿಬ್ಬರು ಚರ ಆಸ್ತಿಗಳಲ್ಲಿನ ಹೂಡಿಕೆಯು ಶೇ. 82ರಷ್ಟಿದ್ದು, ಸ್ಥಿರ ಆಸ್ತಿಯ ಮೌಲ್ಯವು ಐದು ವರ್ಷಗಳಲ್ಲಿ ಕೇವಲ ಶೇ. 36ರಷ್ಟು ಏರಿಕೆಯಾಗಿದೆ.