ನವದೆಹಲಿ: ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆಯೇ ಅಮಿತ್ ಶಾ (Amit Shah) ಅವರು ಉಗ್ರ ಪೋಷಣೆ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ನಡೆದ ‘ನೋ ಮನಿ ಫಾರ್ ಟೆರರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಗ್ರರ ಸ್ವರ್ಗಗಳಾಗಿರುವ ದೇಶಗಳ ವಿರುದ್ಧ ಆರ್ಥಿಕ ನಿರ್ಬಂಧದ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ” ಎಂದು ಹೇಳಿದರು.
“ಹಾಗೆ ನೋಡಿದರೆ, ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಗಡಿ ಇಲ್ಲ. ಆದರೆ, ಕೆಲವು ರಾಷ್ಟ್ರಗಳು ಉಗ್ರರ ಸ್ವರ್ಗಗಳಾಗಿ ಮಾರ್ಪಾಡಾಗಿವೆ. ಸರ್ಕಾರ ನೀತಿಯೇ ಭಯೋತ್ಪಾದನೆಗೆ ಬಂಬಲಿಸುವುದಾಗಿದೆ. ಅಂತಹ ರಾಷ್ಟ್ರಗಳ ವಿರುದ್ಧ ಜಗತ್ತಿನ ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು. ಆರ್ಥಿಕ ನಿರ್ಬಂಧ ಹೇರಬೇಕು. ಹಾಗಾದಾಗ ಮಾತ್ರ, ಭಯೋತ್ಪಾದನೆಯನ್ನು ದಮನ ಮಾಡಲು ಸಾಧ್ಯ” ಎಂದರು.
“ಭಯೋತ್ಪಾದನೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಜಾಗತಿಕ ಸಮಸ್ಯೆಯಾಗಿದೆ. ಇದೊಂದು ಜಾಗತಿಕ ರಾಜಕೀಯ ವಿಷಯವಾಗದೆ, ಪ್ರತಿಯೊಂದು ರಾಷ್ಟ್ರಗಳು ತಮ್ಮ ನಾಗರಿಕರ ರಕ್ಷಣೆಯ ಕರ್ತವ್ಯ ಎಂಬುದಾಗಿ ನೋಡಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಭಯೋತ್ಪಾದನೆಗೆ ಅಸಹಕಾರ ಅಂತಾರಾಷ್ಟ್ರೀಯ ನೀತಿಯಾಗಲಿ