Site icon Vistara News

Amitabh Bachchan: ಭಾರತ್ ಮಾತಾ ಕಿ ಜೈ ಎಂದು ಅಮಿತಾಭ್ ಬಚ್ಚನ್ ಪೋಸ್ಟ್ ಮಾಡಿದ್ದೇಕೆ?

Amitabh Bachchan

ನವದೆಹಲಿ: ಕೇಂದ್ರ ಸರ್ಕಾರವು, ಸಂವಿಧಾನದಲ್ಲಿ ‘ಇಂಡಿಯಾ’ (India) ಎಂಬ ಪದ ಇರುವೆಡೆ ‘ಭಾರತ’ (Bharat) ಎಂದು ಬದಲಿಸುವ ಸಂಬಂಧ ವಿಶೇಷ ಸಂಸತ್ ಅಧಿವೇಶನ (Parliament Special Session) ವೇಳೆ ವಿಧೇಯಕವನ್ನು ಮಂಡಿಸಲಿದೆ ಎಂಬ ಸುದ್ದಿ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿ20 ರಾಷ್ಟ್ರಗಳ ನಾಯಕರಿಗೆ ರಾಷ್ಟ್ರಪತಿ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ (President of Bharat) ಎಂದು ಬರೆಯಲಾಗಿದೆ. ಇದು ರಾಜಕೀಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿರುವ ಬೆನ್ನಲ್ಲೇ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಕೇವಲ ಭಾರತ್ ಮಾತಾ ಕಿ ಜಯ ಎಂದು ಟ್ವೀಟ್ ಮಾಡಿದ್ದಾರೆ. ಹಲವರು ನಾನಾ ಅರ್ಥಗಳನ್ನು ಕಲ್ಪಿಸುತ್ತಿದ್ದಾರೆ.

ಜಿ20 ಶೃಂಗಸಭೆಯು ಈ ವರ್ಷ ಸೆಪ್ಟೆಂಬರ್ 9 ಮತ್ತು 10ರಂದು ನಡುವೆ ನಡೆಯಲಿದೆ. ರಾಷ್ಟ್ರಪತಿ ಭೋಜನವು ಸೆಪ್ಟೆಂಬರ್ 9 ರಂದು ರಾತ್ರಿ 8 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಹಿಂದಿನ ಆಹ್ವಾನಗಳಲ್ಲಿ ರಾಷ್ಟ್ರಪತಿಯನ್ನು ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಉಲ್ಲೇಖಿಸಲಾಗಿದೆ. ಆದರೆ ಈಗ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಎಂದು ಬದಲಾವಣೆ ಮಾಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಈ ಸುದ್ದಿಯನ್ನೂ ಓದಿ: ಇಂಡಿಯಾ ಅಲ್ಲ ಭಾರತ! ವಿಶೇಷ ಅಧಿವೇಶನದಲ್ಲಿ ದೇಶ ಮರುನಾಮಕರಣಕ್ಕೆ ವಿಧೇಯಕ! INDIA blocಗೆ ಕೇಂದ್ರ ಟಕ್ಕರ್

ಈ ಮಧ್ಯೆ ಅನೇಕ ರಾಜಕೀಯ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ರಿಪಬ್ಲಿಕ್ ಆಫ್ ಭಾರತ್- ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ ಎಂದು ಹೇಳಿದ್ದಾರೆ. ಆದರೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಈ ಬೇಡಿಕೆಯನ್ನು ವಿರೋಧಿಸಿದ್ದಾರೆ.

ಭಾರತ ಮಾತಾ ಕಿ ಜಯ ಎಂದು ನಿಗೂಢವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತಾಭ್ ಬಚ್ಚನ್ ಅವರು ಸದ್ಯ ಕೌನ್ ಬನೇಗಾ ಕರೋಡ್‌ಪತಿ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಗಣಪತ್, ಕಲ್ಕಿ 2898 ಎಡಿ, ಸೆಕ್ಷನ್ 84 ಮತ್ತು ಇಂಟರ್ನ್ ರಿಮೇಕ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version