Site icon Vistara News

Anand Mahindra | ಜುಂಜುನ್‌ವಾಲಾ ಅವರ ಈ ಸಲಹೆ ಸಹಸ್ರಾರು ಕೋಟಿ ರೂ. ಮೌಲ್ಯದ್ದು ಎಂದು ಆನಂದ್‌ ಮಹೀಂದ್ರಾ ಹೇಳಿದ್ದೇಕೆ?

Anand Mahindra

ನವದೆಹಲಿ: ಷೇರು ಮಾರುಕಟ್ಟೆಯ ಬಿಗ್‌ ಬುಲ್‌ (Big Bull) ಎಂದೇ ಖ್ಯಾತಿಯಾಗಿದ್ದ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರು ಕೆಲವು ದಿನಗಳ ಹಿಂದಷ್ಟೇ ನಿಧನರಾದರೂ, ಹೂಡಿಕೆ ಕುರಿತು ಅವರು ನೀಡಿದ ಸಲಹೆ, ಷೇರು ಮಾರುಕಟ್ಟೆ ಕುರಿತು ಮಾಡಿದ ವಿಶ್ಲೇಷಣೆ ಸೇರಿ ವಿವಿಧ ವಿಷಯಗಳ ಕುರಿತು ಈಗಲೂ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಜುಂಜುನ್‌ವಾಲಾ ಅವರು ಆರೋಗ್ಯದ ಬಗ್ಗೆ ನೀಡಿದ ಸಲಹೆಯನ್ನು ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರಾ (Anand Mahindra) ಅವರು ಕೊಂಡಾಡಿದ್ದಾರೆ.

ರಾಕೇಶ್‌ ಜುಂಜುನ್‌ವಾಲಾ ಅವರು ಕೆಲ ವರ್ಷಗಳ ಹಿಂದೆ ನೀಡಿದ್ದ ಸಲಹೆಯ ಪೋಸ್ಟ್‌ ಈಗ ಶೇರ್‌ ಆಗುತ್ತಿದೆ. ಅದನ್ನು ಆನಂದ್‌ ಮಹೀಂದ್ರಾ ಕೂಡ ಹಂಚಿಕೊಂಡಿದ್ದಾರೆ. “ಈ ಪೋಸ್ಟ್‌ ಹೆಚ್ಚು ಶೇರ್‌ ಆಗುತ್ತಿದೆ. ಜುಂಜುನ್‌ವಾಲಾ ಅವರು ತಮ್ಮ ಕೊನೆಯ ದಿನಗಳಲ್ಲಿ ನೀಡಿದ ಸಲಹೆಯು ಉಪಯುಕ್ತವಾಗಿದ್ದು, ಸಹಸ್ರಾರು ಕೋಟಿ ರೂಪಾಯಿಯಷ್ಟು ಮೌಲ್ಯದ್ದು” ಎಂದು ಆನಂದ್‌ ಹೇಳಿದ್ದಾರೆ.

“ನನ್ನ ಕೆಟ್ಟ ಹೂಡಿಕೆ ಎಂದರೆ ಅದು ಆರೋಗ್ಯ. ಆದರೆ, ಬೇರೆಯವರು ಆರೋಗ್ಯದ ಮೇಲೆ ಹೆಚ್ಚು ಹೂಡಿಕೆ ಮಾಡುವಂತೆ ಸಲಹೆ ನೀಡುತ್ತೇನೆ” ಎಂಬುದಾಗಿ ಜುಂಜುನ್‌ವಾಲಾ ಹೇಳಿದ್ದರು. ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂಬುದು ಅವರ ಸಲಹೆಯ ಆಶಯವಾಗಿತ್ತು. ಸಾವಿರಾರು ಕೋಟಿ ರೂ. ಒಡೆಯರಾಗಿದ್ದರೂ ಅವರಿಗೆ ತಮ್ಮ ಆರೋಗ್ಯದ ಕುರಿತು ಅಸಮಾಧಾನ ಇತ್ತು.

ಇದನ್ನೂ ಓದಿ | Viral Video | ಅದೆಂಥ ಜೀವನೋತ್ಸಾಹಿಯಾಗಿದ್ದರು ರಾಕೇಶ್​ ಜುಂಜುನ್​ವಾಲಾ; ಅದ್ಭುತ ಡ್ಯಾನ್ಸ್ ಇಲ್ಲಿದೆ

Exit mobile version