Site icon Vistara News

ಎಎನ್​ಐ, ಎನ್​ಡಿಟಿವಿ ಸುದ್ದಿ ಸಂಸ್ಥೆಗಳ ಟ್ವಿಟರ್ ಖಾತೆ ಬ್ಲಾಕ್​; ಕಾರಣ ಏನು?

Deleted tweets appears on twitter, bug problem?

ಎಲಾನ್​ ಮಸ್ಕ್​ ಸಿಇಒ ಆದಾಗಿನಿಂದಲೂ ಟ್ವಿಟರ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇಂದು ದೇಶದ ಪ್ರಮುಖ ಸುದ್ದಿ ಸಂಸ್ಥೆಯಾದ ಏಷ್ಯನ್​ ನ್ಯೂಸ್ ಇಂಟರ್​ನ್ಯಾಶನಲ್ (ANI) ಮತ್ತು ಎನ್​ಡಿಟಿವಿ ಮೀಡಿಯಾಗಳ ಟ್ವಿಟರ್​ ಖಾತೆಗಳೇ ಬ್ಲಾಕ್​ ಆಗಿವೆ. ಎಎನ್​ಐ ಸುದ್ದಿ ಸಂಸ್ಥೆಯ ಟ್ವಿಟರ್ ಖಾತೆ ಬ್ಲಾಕ್ ಆಗಿರುವ ಫೋಟೋವನ್ನು, ಎಎನ್​ಐ ಸಂಪಾದಕರಾದ ಸ್ಮಿತಾ ಪ್ರಕಾಶ್ ಅವರು ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಈ ವಿಷಯ ತಿಳಿಸಿದ್ದಾರೆ.

‘ಯಾರೆಲ್ಲ ಎಎನ್​ಐ ಸುದ್ದಿ ಸಂಸ್ಥೆಯನ್ನು ಟ್ವಿಟರ್​ನಲ್ಲಿ ಫಾಲೋ ಮಾಡ್ತಿದ್ದೀರೋ, ಅವರಿಗೆ ಒಂದು ನಿರಾಸೆಯ ಸುದ್ದಿಯಿದೆ. 7.6 ಮಿಲಿಯನ್​ಗಳಷ್ಟು ಫಾಲೋವರ್ಸ್​​ನ್ನು ಹೊಂದಿರುವ, ದೇಶದ ಅತಿದೊಡ್ಡ ನ್ಯೂಸ್ ಏಜೆನ್ಸಿಯ ಟ್ವಿಟರ್ ಖಾತೆಯನ್ನು ಟ್ವಿಟರ್ ಕಂಪನಿ ಬ್ಲಾಕ್ ಮಾಡಿದೆ. ಟ್ವಿಟರ್ ಅಕೌಂಟ್​ ಕ್ರಿಯೇಟ್ ಮಾಡುವವರಿಗೆ ಕನಿಷ್ಠ 13ವರ್ಷವಾಗಿರಬೇಕು ಎಂಬ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಅಕೌಂಟ್ ಬ್ಲಾಕ್ ಮಾಡಿದ್ದಾಗಿ ನಮಗೆ ಇಮೇಲ್ ಸಂದೇಶ ಕಳಿಸಿದ್ದಾರೆ. ಮೊದಲು ನಮಗೆ ನೀಡಲಾಗಿದ್ದ ಗೋಲ್ಡ್​ ಟಿಕ್​​ನ್ನು ವಾಪಸ್​ ಪಡೆದು, ನೀಲಿ ಟಿಕ್ ಕೊಡಲಾಗಿತ್ತು. ಈಗ ಇಡೀ ಟ್ವಿಟರ್ ಖಾತೆಯನ್ನೇ ಲಾಕ್ ಮಾಡಲಾಗಿದೆ’ ಎಂದು ಸ್ಮಿತಾ ಪ್ರಕಾಶ್​ ಹೇಳಿದ್ದಾರೆ. ಹಾಗೇ, ಎಲಾನ್​ ಮಸ್ಕ್​ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಅದಾಗಿ ಕೆಲವೇ ಹೊತ್ತಿಗೆ ಎನ್​ಡಿಟಿವಿ ಮಾಧ್ಯಮದ ಟ್ವಿಟರ್ ಅಕೌಂಟ್ ಕೂಡ ಲಾಕ್​ ಆಗಿದೆ. ​ ಅದರ ಫೋಟೋವನ್ನೂ ಸ್ಮಿತಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

‘ಟ್ವಿಟರ್ ಖಾತೆ ತೆರೆಯಲು ಕಡ್ಡಾಯವಾಗಿ 13ವರ್ಷ ಆಗಿರಬೇಕು. ಆದರೆ ನಿಮಗೆ 13 ವರ್ಷ ಆಗಿಲ್ಲ, ನೀವು ಈ ನಿಯಮ ಪಾಲನೆ ಮಾಡಿಲ್ಲ. ಹೀಗಾಗಿ ನಿಮ್ಮ ಅಕೌಂಟ್​​ನ್ನು ಲಾಕ್ ಮಾಡಲಾಗಿದ್ದು, ಶೀಘ್ರದಲ್ಲೇ ಟ್ವಿಟರ್​ ಅಕೌಂಟ್​ನ್ನು ತೆಗೆದು ಹಾಕಲಾಗುವುದು’ ಎಂದು ಎಎನ್​ಐಗೆ ಕಳಿಸಿದ ಇಮೇಲ್​ನಲ್ಲಿ ಉಲ್ಲೇಖವಾಗಿದೆ. ಇನ್ನು ಎನ್​ಡಿಟಿವಿ ಮಾಧ್ಯಮದ ಅಕೌಂಟ್ ಕೂಡ ಲಾಕ್ ಆಗಿದೆ. ಆದರೆ ಆ ಸಂಸ್ಥೆ ಇನ್ನೂ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: Elon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ?

Exit mobile version