Site icon Vistara News

Anti Hindu HDFC: ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಹಿಂದೂ ವಿರೋಧಿ ಜಾಹೀರಾತು! ನೆಟ್ಟಿಗರು ಫುಲ್ ಗರಂ

Anti Hindu HDFC trending on social media over its advertisement campaign

ನವದೆಹಲಿ: ಸೈಬರ್ ವಂಚನೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಲು ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಆರಂಭಿಸಿರುವ ಅಭಿಯಾನದ ಜಾಹೀರಾತು (advertisement campaign) ಈಗ ವಿವಾದಕ್ಕೆ ಕಾರಣವಾಗಿದೆ. ಹಣಕಾಸು ವಂಚನೆಗಳ ಕುರಿತು ಜಾಗೃತಿ ಮೂಡಿಸುವ ಜಾಹೀರಾತನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಕಟಿಸಿದೆ. ಆದರೆ, ಕೆಲವು ನೆಟ್ಟಿಗರಿಗೆ ಈ ಜಾಹೀರಾತು ಹಿಂದೂ ವಿರೋಧಿಯಂತೆ ಕಂಡಿದೆ. ಜಾಹೀರಾತಿನಲ್ಲಿ ತೋರಿಸಲಾಗಿರುವ ‘ವಿಜಿಲ್ ಆಂಟಿ’ಯ (Vigil Aunty) ಹಣೆಯಲ್ಲಿ ಬಿಂದಿಯ ಬದಲು ಸಾರ್ವತ್ರಿಕ ‘ನಿಷೇಧ ಚಿಹ್ನೆ’ಯನ್ನು ಬಳಸಲಾಗಿದೆ. ಈ ಸಂಗತಿಯೇ ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ನೆಟ್ಟಿಗರ ಪ್ರಕಾರ, ಹಿಂದೂ ಸಂಸ್ಕೃತಿಯಲ್ಲಿ ಬಿಂದಿಗೆ(Bindi), ಕುಂಕುಮಕ್ಕೆ ವಿಶೇಷ ಮಹತ್ವದ ಸ್ಥಾನವಿದೆ. ಎಚ್‌ಡಿಪಿಸಿ ಬ್ಯಾಂಕ್ ಬಿಂದಿ ಬದಲಿಗೆ ನಿಷೇಧ ಚಿಹ್ನೆಯನ್ನು (No Signal) ಬಳಸಿ ಅವಮಾನ ಮಾಡಿದೆ ಎಂದು ಆರೋಪಿಸಲಾಗಿದೆ(Anti Hindu HDFC).

2022ರಲ್ಲಿ ಪ್ರಾರಂಭವಾದ ವಿಜಿಲ್ ಆಂಟಿ ಅಭಿಯಾನವು ಸುರಕ್ಷಿತ ಬ್ಯಾಂಕಿಂಗ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ರಾಷ್ಟ್ರದಾದ್ಯಂತ ನಾಗರಿಕರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದೆ. ಸೈಬರ್ ವಂಚನೆ ಜಾಗೃತಿ ಅಭಿಯಾನಕ್ಕಾಗಿ ಬ್ಯಾಂಕ್, ನಟಿ ಅನುರಾಧಾ ಮೆನನ್ ಅವರನ್ನು ವಿಜಿಲ್ ಆಂಟಿಯಾಗಿ ನೇಮಿಸಿಕೊಂಡಿದೆ.

ಉಜ್ವಲಾ ರೈ ಎಂಬುವವರು, ಹಿಂದೂ ವಿರೋಧಿ ಜಾಹೀರಾತಿಗಾಗಿ ಕ್ಷಮೆ ಕೋರದ ಎಚ್‌ಡಿಎಫ್‌ಸಿ ಬ್ಯಾಂಕ್ ವಿರುದ್ದ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಸಮಯ ಬಂದಿದೆ. ಏಕೆಂದರೆ ಅವರು ಹಿಂದೂಗಳನ್ನು ತುಂಬಾ ದ್ವೇಷಿಸುತ್ತಾರೆ. ಸಾಕಷ್ಟು ವಿರೋಧದ ನಡುವೆಯೂ ಅವರು ಕ್ಷಮೆ ಕೋರಿಲ್ಲ. ಈ ಕಂಪನಿಯು ಗುಜರಾತಿ ಜೈನ್ ಒಡೆತನದಲ್ಲಿದೆ. ಅವರು ಕ್ಷಮೆಯಾಚಿಸಿದರೂ ನಾವು ಅವರನ್ನು ಬಹಿಷ್ಕರಿಸಬೇಕು ಮತ್ತು ಎಚ್‌ಡಿಎಫ್‌ಸಿಯ ಯಾವುದೇ ಸೇವೆಯನ್ನು ಎಂದಿಗೂ ಬಳಸಬಾರದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ICC World Cup 2023 : ಹಿಂದೂ ವಿರೋಧಿ ಹೇಳಿಕೆ; ಪಾಕ್​ನ ಸುಂದರಿ ಆ್ಯಂಕರ್​ಳನ್ನು ಒದ್ದೋಡಿಸಿದ ಭಾರತ

ಹಿಂದೂಗಳಲ್ಲಿ ಬಿಂದಿಗೆ ಪವಿತ್ರ ಸ್ಥಾನವಿದೆ. ಜಾಹೀರಾತಿನಲ್ಲಿ ಪ್ರದರ್ಶಿಶಿತವಾಗಿರುವ ರೂಪದರ್ಶಿಯ ಹಣೆಗೆ ಬಿಂದಿಯ ಜಾಗಕ್ಕೆ ಜಾಗತಿಕ ನೋ ಸಿಂಬಲ್ ಬಳಸಿರುವುದು ಅಕ್ಷಮ್ಯ ಅಪರಾಧ ಮತ್ತು ಸಂಪೂರ್ಣವಾಗಿ ಅನುಚಿತ ವರ್ತನೆಯಾಗಿದೆ. ಎಲ್ಲ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕಿನ ರಿಲೇಷನ್‌ಶಿಪ್ ಮ್ಯಾನೇಜರ್‌ನನ್ನು ಭೇಟಿಯಾಗಿ ಮತ್ತು ಈ ಜಾಹೀರಾತು ಕುರಿತು ವಿರೋಧ ವ್ಯಕ್ತಪಡಿಸಿ. ಅಲ್ಲದೇ, ಈ ಜಾಹೀರಾತನ್ನು ಕೈ ಬಿಟ್ಟು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಎಂದು ಮತ್ತೊಬ್ಬ ಬಳಕೆದಾರರು ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಬಳೆಕದಾರರು ಎಚ್‌ಡಿಎಫ್‌ಸಿ ಬ್ಯಾಂಕಿನ ಈ ಜಾಹೀರಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬ್ಯಾಂಕ್ ಈ ಜಾಹೀರಾತನ್ನು ಹಿಂಪಡೆದುಕೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಬ್ಯಾಂಕ್ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version