ನವದೆಹಲಿ: ಈ ವರ್ಷ ಭಾರತದಲ್ಲಿ ನಡೆಯಲಿರುವ ವೈ20 ಶೃಂಗ ಭಾರತ(Y20 Summit India) ಹಿನ್ನೆಲೆಯಲ್ಲಿ ಸಮಾವೇಶದ ಥೀಮ್, ಲೋಗೋ, ವೆಬ್‌ಸೈಟ್ ಅನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ನಾಳೆ (ಜನವರಿ 6) ದಿಲ್ಲಿಯಲ್ಲಿ ಲಾಂಚ್ ಮಾಡಲಿದ್ದಾರೆ.
ಜನವರಿ 6ರಂದು ನಡೆಯುವ ಕಾರ್ಯಕ್ರಮವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಭಾಗದಲ್ಲಿ ಲೋಗೋ ಮತ್ತು ವೆಬ್‌ಲೈಟ್ ಲಾಂಚ್ ಮಾಡಲಾಗುತ್ತದೆ. ಜತೆಗೇ, ಕೇಂದ್ರ ವ್ಯವಹಾರ ಹಾಗೂ ಕ್ರೀಡಾ ಸಚಿವರಾಗಿರುವ ಅನುರಾಗ್ ಠಾಕೂರ್ ಅವರು ಥೀಮ್ ರಿಲೀಸ್ ಮಾಡಲಿದ್ದಾರೆ. ಎರಡನೇ ಭಾಗದಲ್ಲಿ ತರುಣ ಸಾಧಕರ ಪ್ಯಾನೆಲ್ ಡಿಸ್ಕಷನ್ ನಡೆಯಲಿದೆ.
ನಮ್ಮ ಜಿ20 ಅಧ್ಯಕ್ಷತೆಯ ವೈ20 ಕೈಗೊಳ್ಳಲಿರುವ ಚಟುವಟಿಕೆಗಳು ಜಾಗತಿಕ ಯುವ ನಾಯಕತ್ವ ಮತ್ತು ಪಾಲುದಾರಿಕೆಯ ಮೇಲೆ ಕೇಂದ್ರೀಕರಿಸುತ್ತವೆ. ಮುಂದಿನ 8 ತಿಂಗಳುಗಳ ಕಾಲ ಈ ಸಂಬಂಧ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ವೈ20 ಶೃಂಗಸಭೆಗೆ ಚಾಲನೆಯ ಮುಂಚೆ, ಭಾರತದ ರಾಜ್ಯಗಳಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಚರ್ಚೆಗಳು ಮತ್ತು ಸೆಮಿನಾರ್‌ಗಳ ಜೊತೆಗೆ ಐದು ವೈ20 ವಿಷಯಗಳ ಕುರಿತು ಪೂರ್ವ ಶೃಂಗಸಭೆಗಳು ನಡೆಯಲಿವೆ.
ಇದನ್ನೂ ಓದಿ | G20 Presidency | ಭಾರತದ ಜಿ20 ಕಾರುಬಾರು ಶುರು, ವಾರ ಕಾಲ ಬೆಳಗಲಿವೆ 100 ಪಾರಂಪರಿಕ ತಾಣಗಳು!