ಕ್ಯಾಲಿಫೋರ್ನಿಯಾ: ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಆ್ಯಪಲ್ (Apple) ಕಂಪನಿಯ ಷೇರುಗಳು ಮೌಲ್ಯ ದಿಢೀರನೇ ಕುಸಿದ ಪರಿಣಾಮ ಕಂಪನಿಯ ಒಟ್ಟು ಬಂಡವಾಳ ಮೌಲ್ಯವೂ ಕುಸಿತ ಕಂಡಿದೆ. ಆ್ಯಪಲ್ ಷೇರುಗಳಲ್ಲಿ ಶೇ.4.9 ಕುಸಿತ ದಾಖಲಾಗಿದೆ. ಪರಿಣಾಮ, ಮಾರುಕಟ್ಟೆಯಲ್ಲಿ ಆ್ಯಪಲ್ ಕಂಪನಿಯ ಮೌಲ್ಯ ಒಂದೇ ದಿನದಲ್ಲಿ 120 ಶತಕೋಟಿ ಡಾಲರ್ ಕಡಿಮೆಯಾಗಿದೆ. ಇದು ಅಮೆರಿಕ ಅತಿದೊಡ್ಡ ಟೆಕ್ ಕಂಪನಿಯಾಗಿದ್ದು, ಮಾರುಕಟ್ಟೆಯಲ್ಲಿ ಮೌಲ್ಯಯುತ ಕಂಪನಿಯಾಗಿದೆ.
ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಸೆಂಟ್ರಲ್ ಬ್ಯಾಂಕ್ ಪ್ರಯತ್ನಿಸುತ್ತಿದೆ. ಹಾಗಾಗಿ, ಬಡ್ಡಿ ದರ ಹೆಚ್ಚಿಸುವ ಬಗ್ಗೆ ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಪರಿಣಾಮ ಹೂಡಿಕೆದಾರರು ತಮ್ಮ ಷೇರುಗಳ ಮಾರಾಟಕ್ಕೆ ಮುಂದಾದ್ದರಿಂದ ಕುಸಿತವಾಗಿದೆ. ಸದ್ಯಕ್ಕೆ ನಾಸ್ಡಾಕ್‌ನಲ್ಲಿ ಕೇವಲ ಮೂರು ಕಂಪನಿಗಳು ಮಾತ್ರ ಏರಿಕೆಯಲ್ಲಿವೆ. ಅಮೆಜಾನ್, ಅಲ್ಫಾಬೆಟ್(ಗೂಗಲ್) ಷೇರುಗಳು ಆಲ್ಮೋಸ್ಟ್ ಶೇ. 3 ಮತ್ತು ಮೈಕ್ರೋಸಾಫ್ಟ್ ಕಾರ್ಪೊ ಶೇ.1.5ರಷ್ಟು ಕುಸಿತ ದಾಖಲಿಸಿವೆ.
ಮತ್ತೊಂದೆಡೆ, ಸಿಇಒ ಮಾರ್ಕ್ ಝುಕರ್‌ಬರ್ಗ್ ವೆಚ್ಚವನ್ನು ತಗ್ಗಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಮೆಟಾ ಷೇರುಗಳು ಮತ್ತೆ ಶೇ.3.7 ಕುಸಿತ ದಾಖಲಿಸಿವೆ. ಈ ವರ್ಷ ಫೇಸ್‌ಬುಕ್ ಷೇರ್ ಆಲ್ಮೋಸ್ಟ್ ಶೇ.59ರಷ್ಟು ಕುಸಿತ ಕಂಡಿವೆ. ಹಾಗೆ ನೋಡಿದರೆ, ಆ್ಯಪಲ್ ಷೇರುಗಳು ಹೂಡಿಕೆದಾರರಿಗೆ ಸ್ವರ್ಗ ಎಂದು ಭಾವಿಸಲಾಗಿತ್ತು. ಆದರೆ, ದಿಢೀರ್ ಕುಸಿತದಿಂದ ಲೆಕ್ಕಾಚಾರ ತಪ್ಪಾಗಿದೆ. ಜಗತ್ತಿನ ಅತಿ ಹೆಚ್ಚುಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ಆ್ಯಪಲ್‌ನ ಒಟ್ಟು ಬಂಡವಾಳ ಮೌಲ್ಯದಲ್ಲಿ ಈಗ ಶೇ.20 ಕುಸಿತವಾಗಿದೆ. ಅಂದರೆ, ಆ್ಯಪಲ್ 2.3 ಲಕ್ಷ ಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿತ್ತು. ಈಗ ಶೇ.20 ಅದರಲ್ಲಿ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | RBI interest rate hike | ಬಡ್ಡಿ ದರ ಏರಿಸಿದರೂ, 700 ಅಂಕ ಜಿಗಿದ ಸೆನ್ಸೆಕ್ಸ್, ಸೂಕ್ಷ್ಮ ಪರಿಸ್ಥಿತಿ ನಿಭಾಯಿಸಿದ ಆರ್‌ಬಿಐ ಬಾಸ್ !