ಗುವಾಹಟಿ: ಗುರುವಾರ ಅರುಣಾಚಲ ಪ್ರದೇಶದ ಮಂಡಲ್ ಬಳಿ ಸಂಭವಿಸಿದ ಭಾರತೀಯ ಸೇನೆಯ ಹೆಲಿಕಾಪ್ಟರ್ ದುರಂತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆಂದು ಸೇನಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಏತನ್ಮಧ್ಯೆ, ಹೆಲಿಕಾಪ್ಟರ್ ಪತನದ ಕುರಿತು ತನಿಖೆಗೆ ಸೇನೆ ಆದೇಶಿಸಿದೆ.
ಭಾರತೀಯ ಸೇನೆಯ (Indian Army) ಚೀತಾ ಹೆಲಿಕಾಪ್ಟರ್ (Cheetah helicopter) ಅರುಣಾಚಲ ಪ್ರದೇಶದ (Arunachal Pradesh) ಮಂಡಲ ಹಿಲ್ಸ್ ಪ್ರದೇಶದ ಬಳಿ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಪರ್ಕ ಕಳೆದುಕೊಂಡು ಪತನಗೊಂಡಿತ್ತು. ಘಟನೆ ನಡೆದ ಬಳಿಕ ಹೆಲಿಕಾಪ್ಟರ್ನಲ್ಲಿದ್ದ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದೀಗ ಬಂದ ಮಾಹಿತಿ ಪ್ರಕಾರ ಈ ಇಬ್ಬರು ಪೈಲಟ್‌ಗಳು ಅಸುನೀಗಿದ್ದಾರೆ.
ಗುರುವಾರ ಬೆಳಗ್ಗೆ ಏನಾಯ್ತು?
ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್(Cheetah Helicopter)ವೊಂದು ಅರುಣಾಚಲ ಪ್ರದೇಶದ ಮಂಡಲಾ ಬೆಟ್ಟಗಳ ಮಧ್ಯೆ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು, ಒಬ್ಬರು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬರು ಮೇಜರ್ ಇದ್ದರು. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಇವರಿಗಾಗಿ ಹುಡುಕಾಟ ನಡೆಸಿದ್ದವು.
ಗುರುವಾರ ಬೆಳಗ್ಗೆ ಟೇಕ್ಆಫ್ ಆದ ಚೀತಾ ಹೆಲಿಕಾಪ್ಟರ್ ಬೆಳಗ್ಗೆ 9.15ರ ಹೊತ್ತಿಗೆ ಏರ್ ಟ್ರಾಫಿಕ್ ಕಂಟ್ರೋಲ್ನ ಸಂಪರ್ಕ ಕಳೆದುಕೊಂಡಿತು. ರಾಜ್ಯದ ಬೊಮ್ಡಿಲಾ ಪಟ್ಟಣದ ಪಶ್ಚಿಮ ಭಾಗದಲ್ಲಿರುವ ಮಂಡಲ ಬೆಟ್ಟಗಳ ಬಳಿ ಇದು ಪತನಗೊಂಡಿದೆ ಎಂದು ಗುವಾಹಟಿ ರಕ್ಷಣಾ ಪಿಆರ್‌ಒ, ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದರು.
ಅರುಣಾಚಲ ಪ್ರದೇಶದ ಮಿಗ್ಗಿಂಗ್ ಎಂಬಲ್ಲಿ 2022ರ ಅಕ್ಟೋಬರ್ನಲ್ಲಿ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಪತನವಾಗಿತ್ತು. ಅದರಲ್ಲಿದ್ದ ಐವರು ಮೃತಪಟ್ಟಿದ್ದರು. ಈ ವಿಮಾನದಲ್ಲಿ ಇಬ್ಬರು ಪೈಲೆಟ್ಗಳು ಮತ್ತು ಮೂವರು ಸೇನಾ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಎಲ್ಲರ ಶವವೂ ಪತ್ತೆಯಾಗಿತ್ತು.