ನವದೆಹಲಿ: ದೇಶದ ಯೋಧರು ಗಡಿಯಲ್ಲಿ ಇನ್ನೂ ಹೆಚ್ಚಿನ ದಕ್ಷತೆಯಿಂದ ಹಾಗೂ ಸುರಕ್ಷತೆಯಿಂದ ಕಾರ್ಯನಿರ್ವಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು 62ಕ್ಕೂ ಅಧಿಕ ಬುಲೆಟ್‌ಪ್ರೂಫ್ ಜಾಕೆಟ್‌ಗಳ (Bulletproof Jackets) ಖರೀದಿಗಾಗಿ ಎರಡು ಟೆಂಡರ್ ಕರೆದಿದೆ. ಅದರಲ್ಲೂ, ದೇಶೀಯವಾಗಿಯೇ ಬುಲೆಟ್‌ಪ್ರೂಫ್ ಜಾಕೆಟ್‌ಗಳ ಉತ್ಪಾದನೆಗೆ ಆದ್ಯತೆ ನೀಡಿದ್ದು, ಇದರಿಂದ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಬಲ ಬರಲಿದೆ.
“ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯ 47 ಸಾವಿರ ಬುಲೆಟ್ ಪ್ರೂಫ್ ಜಾಕೆಟ್‌ಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಒಂದು ಟೆಂಡರ್ ಕರೆದಿದೆ. ತುರ್ತು ಸಂಗ್ರಹ ಕಾರ್ಯವಿಧಾನದ ಅನ್ವಯ ಇನ್ನೂ 15 ಸಾವಿರ ಬುಲೆಟ್‌ಪ್ರೂಫ್‌ಗಳ ಖರೀದಿಗೆ ಮೂರ್ನಾಲ್ಕು ತಿಂಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹಂತ ಹಂತವಾಗಿ ಸೇನೆಗೆ ಇಷ್ಟೂ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ವಿನಿಯೋಗಿಸಲಾಗುತ್ತದೆ. ಒಂದೂವರೆ ವರ್ಷದಿಂದ ಎರಡು ವರ್ಷದೊಳಗೆ ಖರೀದಿ ಪ್ರಕ್ರಿಯೆ ಮುಗಿಸಲಾಗುತ್ತದೆ. ಈ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ಸೈನಿಕರು ಧರಿಸಿದರೆ 7.62 ಎಂಎಂ ಗನ್‌ನಿಂದ 10 ಮೀಟರ್ ದೂರದಿಂದ ಗುಂಡು ಹಾರಿಸಿದರೂ ಏನೂ ತೊಂದರೆಯಾಗುವುದಿಲ್ಲ.
ಇದನ್ನೂ ಓದಿ | Tejas Mk2 | ದೇಶೀಯ ತೇಜಸ್ ಯುದ್ಧ ವಿಮಾನಗಳಿಗೆ 16 ರಾಷ್ಟ್ರದಿಂದ ಬೇಡಿಕೆ, ಮೇಕ್ ಇನ್ ಇಂಡಿಯಾಗೆ ಬಲ