Site icon Vistara News

Article 370: 370ನೇ ವಿಧಿ ರದ್ದತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಆಗಸ್ಟ್ 2ರಿಂದ ಪ್ರತಿದಿನ

Supreme Court verdict on Article 370 and Know about this article

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu- Kashmir) ಸಂವಿಧಾನದ ಆರ್ಟಿಕಲ್‌ 370 (article 370) ಅನ್ನು ರದ್ದುಪಡಿಸಿದ್ದನ್ನು (article 370 abrogation) ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಆಗಸ್ಟ್‌ 2ರಿಂದ ಪ್ರತಿದಿನ ವಿಚಾರಣೆ ನಡೆಸಿ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ್‌ (supreme court) ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರಿರುವ ಪಂಚಸದಸ್ಯರ ಸಂವಿಧಾನ ಪೀಠವು ದಾಖಲೆಗಳನ್ನು ಸಲ್ಲಿಸಲು ಮತ್ತು ಕಕ್ಷಿದಾರರ ಲಿಖಿತ ಸಲ್ಲಿಕೆಗಳಿಗೆ ಜುಲೈ 27 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಿದೆ. ವಿಧಿ ರದ್ದತಿಗೆ ಸಾಂವಿಧಾನಿಕ ಸಿಂಧುತ್ವ ಇದೆಯೇ ಎಂಬುದು ಅರ್ಜಿಗಳ ಮುಖ್ಯ ಪ್ರಶ್ನೆಯಾಗಿದೆ. ವಿಧಿ ರದ್ದತಿಯ ಮೂರು ವರ್ಷಗಳ ನಂತರ ಅರ್ಜಿಗಳು ವಿಚಾರಣೆಗೆ ಬರುತ್ತಿವೆ. ಅರ್ಜಿ ಪ್ರಶ್ನಿಸಿದವರಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಸಂಸದರು ಸೇರಿದ್ದಾರೆ.

ಜಮ್ಮು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಿರ್ಧಾರವನ್ನು ಅಫಿಡವಿಟ್‌ನಲ್ಲಿ ಸರ್ಕಾರ ಸಮರ್ಥಿಸಿಕೊಂಡಿದೆ. 370ನೇ ವಿಧಿಯ ರದ್ದತಿಯು ಭಯೋತ್ಪಾದಕರನ್ನು ಮಟ್ಟಹಾಕಲು ಕಾರಣವಾಗಿದೆ; ಕಲ್ಲು ತೂರಾಟ ಮತ್ತು ಬೀದಿ ಹಿಂಸಾಚಾರದ ಘಟನೆಗಳು ಭೂತಕಾಲದ ವಿಷಯವಾಗಿದೆ. ಈ ಪ್ರದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿ, ಪ್ರಗತಿ, ಭದ್ರತೆ ಮತ್ತು ಸ್ಥಿರತೆಗೆ ಕಾರಣವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 15 ಪಿಎಎಫ್​ಎಫ್​ ಉಗ್ರರನ್ನು ಕೊಂದ ಭಾರತೀಯ ಸೇನೆ

Exit mobile version