ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಸುಮಾರು 98 ವಿವಿಧ ಭಾಷೆಗಳಲ್ಲಿ ಬಹುಭಾಷೆಯ ಎಐ ತಂತ್ರಜ್ಞಾನ(Artificial Intelligence) ಹನುಮಾನ್(Hanuman) ಅನ್ನು ಅನಾವರಣಗೊಳಿಸಿದೆ. 3AI ಹೋಲ್ಡಿಂಗ್ ಲಿಮಿಟೆಡ್(3AI Holding limited) ಮತ್ತು ಎಸ್‌ಎಂಎಲ್ ಭಾರತ ಜೊತೆಗೂಡಿಗೊಂಡು ಅನಾವರಣ ಮಾಡಿರುವ ಈ ಹನುಮಾನ್ AI ತಂತ್ರಜ್ಞಾನ 12 ಭಾರತೀಯ ಭಾಷೆಗಳಲ್ಲೂ ಲಭ್ಯವಿದೆ. ಈ ಹೊಸ ತಂತ್ರಜ್ಞಾನ ಎಲ್ಲಾ ಬಳಕೆದಾರರಿಗೆ ಲಭ್ಯವಿದ್ದು, ಮೊಬೈಲ್ ಫೋನ್ ಮೂಲಕ ನೀವು ನೋಂದಣಿ ಪಡೆಯಬಹುದಾಗಿದೆ. ಟೆಕ್ಸ್ಟ್ ಪ್ರತಿಕ್ರಿಯೆಗಳನ್ನು ಸೃಷ್ಟಿಸುವಷ್ಟಕ್ಕೆ ಮಾತ್ರ ಈ ತಂತ್ರಜ್ಞಾನ ಸದ್ಯಕ್ಕೆ ಸೀಮಿತವಾಗಿದೆ.
ಹನುಮಾನ್ AI ಇನ್ನೂ ಡೆವಲಪಿಂಗ್ ಹಂತದಲ್ಲಿದ್ದು, ಇದರ ಹೊಸ ಆವೃತಿ ಶೀಘ್ರದಲ್ಲೇ ಬರಲಿದೆ. ಪ್ಲಾಟ್‌ಫಾರ್ಮ್ ತನ್ನ ಮೊದಲ ವರ್ಷದಲ್ಲಿ 200 ಮಿಲಿಯನ್ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ. SML ಇಂಡಿಯಾ ಇದಕ್ಕಾಗಿ HP, NASSCOM ಮತ್ತು Yotta ನೊಂದಿಗೆ ಪಾಲುದಾರಿಕೆ ಹೊಂದಿದೆ. ಯೊಟ್ಟಾ ಸಂಸ್ಥೆ GPU ಕ್ಲೌಡ್ ಮೂಲಸೌಕರ್ಯವನ್ನು ಒದಗಿಸುತ್ತದೆ, NASSCOM ಜೊತೆಗಿನ ಪಾಲುದಾರಿಕೆಯು AI ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮತ್ತು 3000 ಕಾಲೇಜುಗಳೊಂದಿಗೆ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇಂಗ್ಲಿಷ್ ಮತ್ತು ತೆಲುಗು ನಡುವೆ ತಡೆರಹಿತ ಅನುವಾದಕ್ಕಾಗಿ ಕಂಪನಿಯು ತೆಲಂಗಾಣ ಸರ್ಕಾರ ಮತ್ತು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಯೊಂದಿಗೆ ಸಹ ಸಹಯೋಗ ಮಾಡಿಕೊಂಡಿದೆ.
ಇದನ್ನೂ ಓದಿ:K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್
ಈ ತಂತ್ರಜ್ಞಾನ ಪ್ರಸ್ತುತ 12 ಭಾರತೀಯ ಭಾಷೆಗಳಲ್ಲಿ ಮತ್ತು ಹಲವಾರು ಜಾಗತಿಕ ಭಾಷೆಗಳಲ್ಲಿ ಲಭ್ಯವಿದೆ. 3AI ಹೋಲ್ಡಿಂಗ್‌ನ ತಂತ್ರಜ್ಞಾನದಿಂದ ನಡೆಸಲ್ಪಡುವ ಪ್ಲಾಟ್‌ಫಾರ್ಮ್ ಸ್ಪಷ್ಟ, ಹೊಂದಾಣಿಕೆಯ ಒಳನೋಟಗಳನ್ನು ನೀಡುತ್ತದೆ ಮತ್ತು ಸಂಕೀರ್ಣ ಡೇಟಾವನ್ನು ಕೃತಕ ಬುದ್ದಿಮತ್ತೆ(AI) ಆಗಿ ಪರಿವರ್ತಿಸುತ್ತದೆ. ಆರೋಗ್ಯ, ಆಡಳಿತ, ಹಣಕಾಸು ಸೇವೆಗಳು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹನುಮಾನ್ AI ಪೂರೈಸುವ ಗುರಿಯನ್ನು ಹೊಂದಿದೆ. 3AI ಹೋಲ್ಡಿಂಗ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅರ್ಜುನ್ ಪ್ರಸಾದ್ ಪ್ರತಿಕ್ರಿಯಿಸಿದ್ದು, AI ಅನ್ನು ಪ್ರತಿಯೊಬ್ಬ ಭಾರತೀಯನಿಗೂ ಪರಿಚಯಿಸುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಎಂದರೇನು?
ಸಾಮಾನ್ಯವಾಗಿ ಬುದ್ಧಿಮತ್ತೆಯನ್ನು ಮಾನವನ ಮಿದುಳಿನ ಸಾಮರ್ಥ್ಯ ಮತ್ತು ಅದರ ಕಾರ್ಯಾಚರಣೆಗಳಿಗೆ ಸಂಬಂಧಿಸಿ ವ್ಯಾಖ್ಯಾನಿಸಲಾಗಿದೆ. ಮೂಲಭೂತವಾಗಿ ಬುದ್ಧಿಮತ್ತೆಯನ್ನು ವ್ಯಕ್ತಿಯ ಅಥೆìçಸಿಕೊಳ್ಳುವ ಸಾಮರ್ಥಯವೆಂದೂ ಪರಿಗಣಿಸಲಾಗಿದೆ. ಬುದ್ಧಿಮತ್ತೆಯಲ್ಲಿ ಹಲವು ವಿಧಗಳಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಅದು ಭಿನ್ನವಾಗಿದೆ. ಮಾನವ ಮಿದುಳಿನ ಬುದ್ಧಿಮತ್ತೆಯನ್ನು “ಸಾಮಾನ್ಯ ಬುದ್ಧಿಮತ್ತೆ’ (General intelligence) ಎನ್ನಲಾಗಿದೆ. ಇದು ದೇವರು ಮಾನವನಿಗೆ ನೀಡಿದ ವರವೂ ಹೌದು. ಕೃತಕ ಬುದ್ಧಿಮತ್ತೆಯ ಗುಣಲಕ್ಷಣ, ಸ್ವಭಾವ ಮತ್ತು ಕಾರ್ಯಚರಣೆಗಳು ಸಂಪೂರ್ಣವಾಗಿ ಭಿನ್ನವಾಗಿರುವುದು ಮಾತ್ರವಲ್ಲದೆ ಅದನ್ನು ಅರಗಿಸಿಕೊಳ್ಳಲು ಹರಸಾಹಸ ಪಡಬೇಕು. ತೀರಾ ಸರಳವಾಗಿ ಕೃತಕ ಬುದ್ಧಿಮತ್ತೆಯನ್ನು ಯಂತ್ರ ಕಲಿಕೆಗೆ (Machine Learning) ತತ್ಸಮಾನಗೊಳಿಸಲಾಗಿದೆ. ಕೃತಕ ಮಿದುಳಿನಿಂದ ನಿರ್ಮಿಸಿದ ಮಾನವ ಯಂತ್ರಗಳು ಮಾನವನ ಹಾಗೆ ಚಿಂತಿಸಿ, ಮಾನವ ರೀತಿಯ ಕಾರ್ಯ ಚಟುವಟಿಕೆಗಳನ್ನು ನಡೆಸುವುದನ್ನು ನೋಡಿದಾಗ ನಿಬ್ಬೆರಗಾಗುತ್ತೇವೆ.