ವಡೋದರಾ, ಗುಜರಾತ್: ವಡೋದಾರದ ಕಲಾವಿದರೊಬ್ಬರು ವಿಶಿಷ್ಟ ಸಾಧನೆ ಮಾಡಿದ್ದಾರೆ. ಹಿಮಚ್ಛಾದಿತ 5,200 ಮೀಟರ್ ಎತ್ತರ ಪ್ರದೇಶದಲ್ಲಿ 37 ನಿಮಿಷ 40 ಸೆಕೆಂಡ್‌ನಲ್ಲಿ 108 ಸೂರ್ಯ ನಮಸ್ಕಾರ (Surya Namaskar) ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರು ಯಾವೇದ ಯೋಗ ಮ್ಯಾಟ್ ಕೂಡ ಬಳಸಿಲ್ಲ. 37 ವರ್ಷದ ಪ್ರವೀಣ್ ಮರಿಪೆಲ್ಲಿ ಅವರು ಸಾಧನೆ ಮಾಡಿದ ವ್ಯಕ್ತಿಯಾಗಿದ್ದಾರೆ. ಲಡಾಖ್‌ನ (Ladakh) ಕೊಂಗ್ಮಾರು ಲಾ ಪಾಸ್(Kongmaru La Pass)ನಲ್ಲಿ (ಮಾರ್ಖಾ ಕಣಿವೆ) ತಾಪಮಾನ ಮೈನಸ್ 3 ಡಿಗ್ರಿ ಸೆಲ್ಸಿಯಸ್, ಆಮ್ಲಜನಕದ ಮಟ್ಟ 11% ಮತ್ತು ಗಾಳಿಯು ಗಂಟೆಗೆ 25 ಕಿಮೀ ವೇಗದಲ್ಲಿ ಬೀಸುತ್ತಿದ್ದ ಪ್ರತಿಕೂಲ ಪರಿಸ್ಥಿತಿಯಲ್ಲೂ ಈ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ಈ ಅಪರೂದಪ ಸಾಧನೆಗಾಗಿ ಅವರು 64 ಕಿ.ಮೀ ಟ್ರೆಕ್ಕಿಂಗ್ ಮಾಡಿದ್ದಾರೆ. ಜುಲೈ 3ರಿಂದ 7ರವರೆಗೆ ಟ್ರೆಕ್ ಮಾಡಿದ್ದಾರೆ. ಟ್ರೆಕ್ ಸಂದರ್ಭದಲ್ಲಿ, 6,200 ಮೀಟರ್ ಎತ್ತರದಲ್ಲಿರುವ ಮೌಂಟ್ ಕಾಂಗ್ ಯೆಟ್ಸೆಯ ಸುಂದರವಾದ ಪರ್ವತ ನೋಟವನ್ನು ನಾನು ನೋಡಿದೆ ಎಂದು ಪ್ರವೀಣ್ ಹೇಳಿದ್ದಾರೆ. ವಿಶೇಷ ಎಂದರೆ, ಪ್ರವೀಣ್ ಅವರು ಪ್ರಪಂಚದ ವಿವಿಧೆಡೆ ಇರುವ 108 ಪರ್ವತಗಳಲ್ಲಿ 108 ಸೂರ್ಯ ನಮಸ್ಕಾರಗಳನ್ನು ಮಾಡುವ ಗುರಿಯನ್ನು ಹೊಂದಿದ್ದಾರೆ. ಈಗಾಗಲೇ 25 ಪರ್ವತಗಳಲ್ಲಿ 108 ಸೂರ್ಯ ನಮಸ್ಕಾರ ಮಾಡಿದ್ದಾರೆ.
ಈಗಾಗಲೇ ನಾನು ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ನಾನು ಸೂರ್ಯ ನಮಸ್ಕಾರ ಪ್ರದರ್ಶನ ಮಾಡಿದ್ದಾನೆ ಎಂದು ಪ್ರವೀಣ್ ಅವರು ಹೇಳಿ್ದದಾರೆ. ಪ್ರವೀಣ್ ಅವರು ಈವರೆಗೆ ಸೂರ್ಯ ನಮಸ್ಕಾರ ಮಾಡಿದ ಪರ್ವತಗಳ ಪೈಕಿ ಮಾರ್ಖಾ ಕಣಿವೆ ನಾಲ್ಕನೇ ಎತ್ತರದ ಪ್ರದೇಶವಾಗಿದೆ.
ಈ ಹಿಂದೆ ನಾನು, 2017ರಲ್ಲಿ ನೇಪಾಳದ 6,150 ಮೀಟರ್ ಎತ್ತರದ ಮೇರಾ ಸ್ಥಳದಲ್ಲಿ 108 ಸೂರ್ಯ ನಮಸ್ಕಾರ ಮಾಡಿದ್ದೇನೆ. ಇದು ಕೂಡ ಲಿಮ್ಕಾ ರೆಕಾರ್ಡ್ ಸೇರಿದೆ. 2018ರಲ್ಲಿ ನಾನು ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಸೂರ್ಯ ನಮಸ್ಕಾರ ಮಾಡಿದ್ದೇನೆ. ಅದು ಸುಮಾರು 5,364 ಮೀಟರ್ ಎತ್ತರವಿದೆ. ನಾನು ವಿಶ್ವದ ಏಳು ಶಿಖರಗಳಲ್ಲಿ ಒಂದಾದ ಕಿಲಿಮಂಜಾರೊದಲ್ಲಿ ಸೂರ್ಯ ನಮಸ್ಕಾರವನ್ನು ಮಾಡಿದ್ದೇನೆ ಮತ್ತು ತಾಂಜಾನಿಯಾದಲ್ಲಿ 5,800 ಮೀಟರ್ ಎತ್ತರದಲ್ಲಿರುವ ಆಫ್ರಿಕಾದ ಅತಿ ಎತ್ತರದ ಪರ್ವತ ಇದಾಗಿದೆ ಎಂದು ಪ್ರವೀಣ್ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Yoga Day 2023: ಸೂರ್ಯ ನಮಸ್ಕಾರ… ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ!