ನವದೆಹಲಿ: ದೆಹಲಿ ಅಬಕಾರಿ ನೀತಿ (Delhi Excise policy) ಹಗರಣದಲ್ಲಿ ಅರೆಸ್ಟ್ ಆಗಿ, ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ (Aam Admi Party) ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮರ ಸಾರಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ಒಬ್ಬರಾದ ಮೇಲೊಬ್ಬರಂತೆ ಜೈಲಿಗೆ ತಳ್ಳಿ ಆಪ್ ಪಕ್ಷದ ಧ್ವನಿ ಅಡಗಿಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, ಇಂದು ದೆಹಲಿಯ ಬಿಜೆಪಿ ಕಚೇರಿ ಎದುರು ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ನಿನ್ನೆ ರಾತ್ರಿ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿರುವ ಕೇಜ್ರಿವಾಲ್, ನಾಳೆ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಹೇಳಿದ್ದು, ಸಾಧ್ಯವಾದರೆ ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಸವಾಲೆಸೆದಿದ್ದಾರೆ. ಒಬ್ಬರ ನಂತರ ಒಬ್ಬರನ್ನು ನೀವು ಜೈಲಿಗೆ ತಳ್ಳುತ್ತಿದ್ದೀರಿ. ಮಾನ್ಯ ಪ್ರಧಾನಮಂತ್ರಿಗಳೇ, ನೀವು ಆಪ್ ನಾಯಕರನ್ನು ಅರೆಸ್ಟ್ ಮಾಡಿಸುವ ಆಟ ಆಡುತ್ತಿದ್ದೀರಿ. ನಾಳೆ ಮಧ್ಯಾಹ್ನ ನಾನು ಪಕ್ಷದ ಎಲ್ಲಾ ಮುಖಂಡರು, ಶಾಸಕರು, ಸಂಸದರ ಜೊತೆಗೆ ಬಿಜೆಪಿ ಪ್ರಧಾನ ಕಚೇರಿಎ ಹೋಗುತ್ತಿದ್ದೇನೆ. ನಿಮಗೆ ಯಾರನ್ನು ಅರೆಸ್ಟ್ ಮಾಡಬೇಕು ಅಂತಾ ಅನಿಸುತ್ತದೆಯೋ ಅವರನ್ನು ಅರೆಸ್ಟ್ ಮಾಡಿ. ಇಲ್ಲ ಎಲ್ಲರನ್ನೂ ಅರೆಸ್ಟ್ ಮಾಡೋವುದಾದರೆ ಮಾಡಿ ಎಂದು ಹೇಳಿದ್ದಾರೆ.
प्रधानमंत्री जी, ये एक-एक करके क्या आप हम लोगों को गिरफ़्तार कर रहे हैं? एक साथ सभी को गिरफ़्तार कर लीजिए – CM @ArvindKejriwal l LIVE https://t.co/0LIUQdK9PZ
— AAP (@AamAadmiParty) May 18, 2024
ಆಪ್ ಪಕ್ಷದ ಹಿರಿಯ ನಾಯಕರಾದ ಸತ್ಯೇಂದ್ರ ಜೈನ್, ಮನೀಷ್ ಸಿಸೋಡಿಯಾ, ಅದಾದ ಬಳಿಕ ನನ್ನನ್ನು ಬಿಜೆಪಿ ಟಾರ್ಗೆಟ್ ಮಾಡಿ ಜೈಲಿಗೆ ಕಳುಹಿಸಿದೆ. ಇದೀಗ ಇತರ ನಾಯಕರೂ ಅವರ ಪಟ್ಟಿಯಲ್ಲಿದ್ದಾರೆ. ಬಿಜೆಪಿ ಹೀಗೆಲ್ಲಾ ಮಾಡಲು ಕಾರಣವೇನು? ಕಾರಣ ಇಷ್ಟೇ ನಾವು ದಿಲ್ಲಿಯಲ್ಲಿ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಅದು ಅವರಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ನಮ್ಮನ್ನು ಈ ರೀತಿಯಾಗಿ ಹತ್ತಿಕ್ಕುತ್ತಿದೆ ಎಂದು ಅವರು ಕಿಡಿ ಕಾಡಿದ್ದಾರೆ.
ಇದನ್ನೂ ಓದಿ:Swati Maliwal case: ಸ್ವಾತಿ ಮಲಿವಾಲ್ ಹಲ್ಲೆ ಕೇಸ್; ಕೇಜ್ರಿವಾಲ್ ಆಪ್ತ 5ದಿನ ಪೊಲೀಸ್ ಕಸ್ಟಡಿಗೆ
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ರಿಲೀಫ್ ಸಿಕ್ಕಿದೆ.