Site icon Vistara News

Asaduddin Owaisi: ಅಸಾದುದ್ದೀನ್‌ ಓವೈಸಿಯ ಭರ್ಜರಿ ಬೈಕ್‌ ರೈಡ್‌;ವಿಡಿಯೋ ವೈರಲ್‌

Asaduddin Owaisi

ಹೈದರಾಬಾದ್‌: ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಓವೈಸಿ(Asaduddin Owaisi) ಭರ್ಜರಿಯಾಗಿ ಬೈಕ್‌ ರೈಡಿಂಗ್‌(Bike ride) ಮಾಡುತ್ತಾ ಪ್ರಚಾರ ನಡೆಸಿದ್ದಾರೆ. ಹೈದರಾಬಾದ್‌(Hyderabad) ಕ್ಷೇತ್ರದಲ್ಲಿ ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮಾ ಧರಿಸಿ ತಮ್ಮ ಟ್ರಿಯಂಫ್‌ ಬೊನ್ನೆವಿಲ್ಲೆ(Triumph Bonneville) ಬೈಕ್‌ನಲ್ಲಿ ಸಾರ್ವಜನಿಕ ಸಭೆಗೆ ಆಗಮಿಸುವ ಮೂಲಕ ಓವೈಸಿ ಎಲ್ಲರ ಗಮನ ಸೆಳೆದಿದ್ದಾರೆ. ಓವೈಸಿ ಅವರು ತಮ್ಮ ಬೆಂಬಲಿಗರೊಂದಿಗೆ ಬೈಕ್‌ ರೈಡ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಬರೋಬ್ಬರಿ ನಾಲ್ಕು ಬಾರಿ ಹೈದರಾಬಾದ್‌ ಕ್ಷೇತ್ರವನ್ನು ಪ್ರತಿನಿಧಿಸಿರುವ ಓವೈಸಿ, ಮೇ 13ರಂದು ನಡೆಯಲಿರುವ ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಗೆ ಮನೆ ಮನೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ನಾಲ್ಕನೇ ಹಂತದಲ್ಲಿ ತೆಲಂಗಾಣದ ಎಲ್ಲಾ 17ಲೋಕಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. ಇನ್ನು ಓವೈಸಿ ಎದುರು ಬಿಜೆಪಿಯ ಮಾಧವಿ ಲತಾ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ಓವೈಸಿ ಬಿಜೆಪಿಯ ಭಗವಂತ್‌ ರಾವ್‌ ಅವರನ್ನು 2.5 ಲಕ್ಷ ಮತಗಳಿಂದ ಸೋಲಿಸಿದ್ದರು. ಹೈದರಾಬಾದ್‌ ಲೋಕಭಾ ಕ್ಷೇತ್ರ ಬಹದ್ದೂರ್‌ಪುರ, ಚಂದ್ರಯಾನ್‌ಗುಟ್ಟಾ. ಚಾರ್‌ಮಿನಾರ್‌, ಘೋಷಮಹಲ್‌, ಕಾರ್ವಾನ್‌, ಮಲಕಪೇಟೆ ಮತ್ತು ಯಾಕತ್‌ಪುರ ಸೇರಿದ್ದಂತೆ ಒಟ್ಟು 7ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ.

ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಸ್ಕೂಟರ್‌ನಲ್ಲಿ ತೆರಳಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಸ್ಕೂಟರ್‌ ರೈಡ್‌ ಮಾಡಿಕೊಂಡು ತಮ್ಮ ಕ್ಷೇತ್ರಕ್ಕೆ ಬಂದಿದ್ದ ತಮ್ಮ ನೆಚ್ಚಿನ ನಾಯಕಿಯನ್ನು ಕಂಡು ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದರು. ಅವರ ಜೊತೆ ಸೆಲ್ಫಿ, ಫೊಟೋಗೆ ಪೋಸ್‌ ಕೊಟ್ಟರು. ಅಲ್ಲದೇ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಪ್ರಸ್ತು ಸ್ಥಿತಿಗತಿ ಬಗ್ಗೆ ಚರ್ಚಿಸಿದ್ದರು.

ಇದನ್ನೂ ಓದಿ:SSLC Result 2024: ಕರ್ನಾಟಕದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ದಿನ ಫಿಕ್ಸ್

ಕಾಂಡೋಮ್‌ಗಳನ್ನು ಮುಸ್ಲಿಮರೇ ಹೆಚ್ಚು ಬಳಸ್ತಾರೆ

ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಓವೈಸಿ,ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಮುಸ್ಲಿಮರು ಶೀಘ್ರದಲ್ಲೇ ಬಹುಸಂಖ್ಯಾತರಾಗುತ್ತಾರೆ ಎಂಬ ಭಯವನ್ನು ನರೇಂದ್ರ ಮೋದಿ ಇನ್ನೂ ಹಿಂದೂಗಳಲ್ಲಿ ಹರಡಲು ಪ್ರಯತ್ನಿಸುತ್ತಿದ್ದಾರೆ. ಎಷ್ಟು ದಿನ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುತ್ತೀರಿ. ನಮ್ಮ ಧರ್ಮ ಬೇರೆ ಆಗಿರಬಹುದು ಆದರೆ, ನಾವು ಕೂಡ ಈ ದೇಶದ ನಿವಾಸಿಗಳು ಎಂದಿದ್ದಾರೆ.
ಯಾಕೆ ದ್ವೇಷದ ಗೋಡೆ ಕಟ್ಟುತ್ತಿದ್ದೀರಿ?. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ ಎಂಬ ಭಯವನ್ನು ಏಕೆ ಹರಡಲು ಪ್ರಯತ್ನಿಸುತ್ತಿದ್ದೀರಿ? ಮೋದಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಮುಸ್ಲಿಮರ ಜನಸಂಖ್ಯೆಯ ಬೆಳವಣಿಗೆ ದರ ಕುಸಿದಿದೆ ಎಂದಿದೆ. ಯಾಕೆಂದರೆ ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಹೇಳಲು ನನಗೆ ಮುಜುಗರವಿಲ್ಲ ಎಂದು ಕಿಡಿಕಾರಿದರು.

Exit mobile version