Site icon Vistara News

Supreme Court: ಅಸ್ಸಾಮ್ ಭಾರತದಲ್ಲ! ನ್ಯಾಯವಾದಿ ಕಪಿಲ್ ಸಿಬಲ್ ವಾದ

Assam was originally not part of india, it is belongs to Myanmar Says Kapil Sibal

ನವದೆಹಲಿ: ಅಸ್ಸಾಮ್ (Assam State) ಮೂಲತಃ ಮ್ಯಾನ್ಮಾರ್‌(Myanmar)‌ಗೆ ಸೇರಿತ್ತು ಎಂದು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ (Lawyer Kapil Sibal) ಅವರು ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದ್ದಾರೆ. 1955 ಪೌರತ್ವ ಕಾಯ್ದೆ 6A (Citizenship Act of 1955) ನಿಯಮ ಪ್ರಶ್ನಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠವು ವಿಚಾರಣೆಯನ್ನು ಆರಂಭಿಸಿದೆ. ಈ ವೇಳೆ, ಕಪಿಲ್ ಸಿಬಲ್ ಅವರು ತಮ್ಮ ಈ ವಾದವನ್ನು ಮಂಡಿಸಿದ್ದಾರೆ. 1971 ಮಾರ್ಚ್ 25 ನಂತರ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಅಕ್ರಮ ವಲಸಿಗರ ಪ್ರವೇಶದ ಬಗ್ಗೆ ವಿವರವಾದ ದತ್ತಾಂಶವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ನಿರ್ದೇಶನವು ವಿವಾದಾತ್ಮಕ ಸೆಕ್ಷನ್ 6ಎ ಗೆ ಸಂಬಂಧಿಸಿದ ಸಮಗ್ರ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು ಒಳಗೊಂಡಿರುವ ಉನ್ನತ ನ್ಯಾಯಾಲಯವು 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6Aಯ ಸಿಂಧುತ್ವವನ್ನು ಪ್ರಶ್ನಿಸುವ ಬಹು ಅರ್ಜಿಗಳನ್ನು ವಿಚಾರಣೆಯನ್ನು ಆರಂಭಿಸಿದೆ. ಈ ಕಾಯ್ದೆಯು ಅಸ್ಸಾಂ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದಂತೆ 1966 ಜನವರಿ 1 ಮತ್ತು 1971 ಮಾರ್ಚ್ 25ರ ನಡುವೆ ಅಸ್ಸಾಂಗೆ ಪ್ರವೇಶಿಸಿದ ನಿರ್ದಿಷ್ಟ ವಿದೇಶಿ ವಲಸಿಗರಿಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ.

ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿವಾದಿಗಳ ಪರ ವಾದ ಮಂಡಿಸಿದರು. ಇತಿಹಾಸದಾದ್ಯಂತ ಜನಸಂಖ್ಯೆಯ ವಲಸೆಯನ್ನು ಪತ್ತೆಹಚ್ಚುವ ಸಂಕೀರ್ಣತೆಯನ್ನು ಒತ್ತಿಹೇಳಿದರು. ಅಸ್ಸಾಂನ ಐತಿಹಾಸಿಕ ವಿಕಸನವನ್ನು ಮ್ಯಾನ್ಮಾರ್‌ನ ಭಾಗವಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ಅದರ ನಂತರದ ಆಡಳಿತ ಮತ್ತು ವಿಭಜನೆಯ ನಂತರದ ಪೂರ್ವ ಬಂಗಾಳದೊಂದಿಗಿನ ಒಡನಾಟವನ್ನು ಎತ್ತಿ ತೋರಿಸಿದರು. ಅವರು ಅಸ್ಸಾಂನಲ್ಲಿ ಬಂಗಾಳಿ ಜನಸಂಖ್ಯೆಯ ಸಮೀಕರಣವನ್ನೂ ಕೋರ್ಟ್ ಗಮನಕ್ಕೆ ತಂದರು.

ಜನ ವಲಸೆಯು ಇತಿಹಾಸದಲ್ಲಿ ಸೇರಿ ಹೋಗಿದೆ ಮತ್ತು ಈ ವಲಸೆಯನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ನೀವು ಅಸ್ಸಾಂನ ಇತಿಹಾಸವನ್ನು ನೋಡಿದರೆ, ಯಾರು ಯಾವಾಗ ಬಂದರು ಎಂದು ಕಂಡುಹಿಡಿಯುವುದು ಅಸಾಧ್ಯವೆಂದು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಕಪಿಲ್ ಸಿಬಲ್ ಹೇಳಿದರು.

ಅಸ್ಸಾಂ ಮೂಲತಃ ಮ್ಯಾನ್ಮಾರ್‌ನ ಒಂದು ಭಾಗವಾಗಿತ್ತು. ಇದು 1824ರಲ್ಲಿ ಬ್ರಿಟಿಷರು ಭೂಪ್ರದೇಶದ ಭಾಗವನ್ನು ವಶಪಡಿಸಿಕೊಂಡ ನಂತರ ಒಪ್ಪಂದವನ್ನು ಮಾಡಿಕೊಂಡರು, ಅದರ ಮೂಲಕ ಅಸ್ಸಾಂ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ಆಗಿನ ಬ್ರಿಟಿಷ್ ಸಾಮ್ರಾಜ್ಯದ ಸಂದರ್ಭದಲ್ಲಿ ಯಾವ ರೀತಿಯ ಜನರ ವಲಸೆ ನಡೆದಿತ್ತು ಎಂಬುದನ್ನು ನೀವು ಊಹಿಸಬಹುದು ಎಂದು ಸುಪ್ರೀಂ ಕೋರ್ಟ್‌ಗೆ ಕಪಿಲ್ ಸಿಬಲ್ ಹೇಳಿದರು.

ಪೌರತ್ವ ಕಾಯ್ದೆಯ 6ಎ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ಪ್ರವೇಶವನ್ನು ಕಾನೂನುಬದ್ಧಗೊಳಿಸಿತ್ತದೆ ಎಂಬ ಸ್ಥಳೀಯ ಗುಂಪುಗಳ ಗ್ರಹಿಕೆಯೇ ವಿವಾದ ಮೂಲ ತಿರುಳಾಗಿದೆ. ಇದರಿಂದಾಗಿ ಅಸ್ಸಾಮ್ ರಾಜ್ಯದ ಜನಸಂಖ್ಯೆ ಮತ್ತು ಸಾಂಸ್ಕೃತಿಕ ರಚನೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂಬುದು ಸ್ಥಳೀಯ ಗುಂಪುಗಳ ವಾದವಾಗಿದೆ.

ಸಿಜೆಐ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ, ಎಂಎಂ ಸುಂದ್ರೇಶ್, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸೆಕ್ಷನ್ 6 ಎ ಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ನಿಬಂಧನೆಯ ಪೀಠದ ಪರಿಶೀಲನೆಯು ಅಸ್ಸಾಂನ ಸಾಮಾಜಿಕ-ರಾಜಕೀಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದಾಗಿದೆ.

ಈ ಸುದ್ದಿಯನ್ನೂ ಓದಿ: ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Exit mobile version