Site icon Vistara News

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ, ಸಿಕ್ಕಿಂನಲ್ಲಿ SKMಗೆ ಪ್ರಚಂಡ ಗೆಲುವು

Assembly election 2024

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಷ್ಟೇ ದೇಶದ ಗಮನ ಸೆಳೆದಿದ್ದ ಅರುಣಾಚಲ ಪ್ರದೇಶ(Aruchal Pradesh) ಮತ್ತು ಸಿಕ್ಕಿಂ(Sikkim) ವಿಧಾನಸಭೆ ಚುನಾವಣೆ(Assembly Election Results 2024) ಫಲಿತಾಂಶ ಹೊರಬಿದ್ದಿದೆ. ಅರುಣಾಚಲಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಮೂರನೇ ಬಾರಿ ಗದ್ದುಗೆ ಹಿಡಿದಿದೆ. ಮತ್ತೊಂದೆಡೆ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(SKM) 32 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಆಮೂಲಕ SKM ಈ ಬಾರಿ ಪ್ರಚಂಡ ಗೆಲುವಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇನ್ನು ದೇಶ ಅತಿ ಹೆಚ್ಚು ಅವಧಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪವನ್‌ ಕುಮಾರ್‌ ಚಾರ್ಮ್ಲಿಂಗ್‌ ಪೋಕ್ಲೋಕ್-ಕಮ್ರಾಂಗ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸೋಲುಂಡಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ 42ಸ್ಥಾನಗಳನ್ನು ಬಿಜೆಪಿ ಪಡೆದಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎರಡು ಸ್ಥಾನಗಳನ್ನು ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಎರಡು ಸ್ಥಾನಗಳನ್ನು ಗೆದ್ದಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಂದನ್ನು ಪಡೆದುಕೊಂಡು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳನ್ನು ಗೆದ್ದಿದ್ದಾರೆ.

ಸಿಕ್ಕಿಂನಲ್ಲಿ ಸಂಭ್ರಮಾಚರಣೆ

ಸಿಕ್ಕಿಂನ 32 ಸ್ಥಾನಗಳಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆಗಳು ಆರಂಭವಾಗಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇನ್ನು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಕ್ಲೀನ್‌ ಸ್ವೀಪ್‌ ಮಾಡೋದ್ರಲ್ಲಿ ಡೌಟೇ ಇಲ್ಲ.

ಅವಿರೋಧ ಆಯ್ಕೆ ಆದ ಬಿಜೆಪಿ ಶಾಸಕರು ಯಾರು?

ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Exit mobile version