Site icon Vistara News

Assembly Election Results 2024: ಇಂದು ಅರುಣಾಚಲ ಪ್ರದೇಶ & ಸಿಕ್ಕಿಂ ರಿಸಲ್ಟ್‌; 10 ಅಭ್ಯರ್ಥಿಗಳು ಅವಿರೋಧ ಆಯ್ಕೆ

Assembly Election Results 2024:

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ(Lok Sabha Election 2024) ಮುಕ್ತಾಯಗೊಂಡಿದ್ದು, ಜೂ. 4 ರಂದು ಹೊರ ಬೀಳಲಿರುವ ಚುನಾವಣೆಯ ಫಲಿತಾಂಶ(Result)ದತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾವ ಪಕ್ಷ ಎಷ್ಟು ಬಹುಮತದಲ್ಲಿ ಕೇಂದ್ರದಲ್ಲಿ ಗದ್ದುಗೆ ಏರಲಿದೆ ಎಂಬುದು ನಿನ್ನೆ ಹೊರಬಿದ್ದಿರುವ ಎಕ್ಸಿಟ್‌ ಪೋಲ್‌(Exit Poll) ಫಲಿತಾಂಶದಲ್ಲಿ ದೇಶದ ಜನರಿಗೆ ಬಹುತೇಕ ಖಚಿತವಾಗಿದೆ. ಆದರೂ ಜೂ. 4ರ ಫಲಿತಾಂಶ ಬಹಳ ಕುತೂಹಲ ಮೂಡಿದಿದೆ. ಇದಕ್ಕೂ ಮುನ್ನ ಎರಡು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ(Arunachala Pradesh) ಹಾಗೂ ಸಿಕ್ಕಿಂ(Sikkim) ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ(Assembly Election Results 2024) ಇಂದು ನಡೆಯುತ್ತಿದ್ದು, ಈಗಾಗಲೇ ಮತಏಣಿಕೆ ಪ್ರಕ್ರಿಯೆ ಬೆಳಗ್ಗೆ 6 ರಿಂದಲೇ ಪ್ರಾರಂಭವಾಗಿದೆ.

ಉಭಯ ರಾಜ್ಯಗಳ ಒಟ್ಟು 82 ಸ್ಥಾನಗಳ ಮತ ಎಣಿಕೆ ಈಗಾಗಲೇ ಆರಂಭಗೊಂಡಿದ್ದು, 60 ಸದಸ್ಯ ಬಲದ ಅರುಣಾಚಲದಲ್ಲಿ ಈಗಾಗಲೇ ಬಿಜೆಪಿ 10 ಶಾಸಕರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇನ್ನು ಉಳಿದ 50 ಸ್ಥಾನಗಳ ಫಲಿತಾಂಶ ಇಂದು ಹೊರ ಬೀಳಲಿದೆ. ಸಿಕ್ಕಿಂನ ಎಲ್ಲಾ 32 ಸ್ಥಾನ ಮತ ಏಣಿಕೆ ಪ್ರಕ್ರಿಯೆ ಶುರುವಾಗಿದ್ದು, ಎರಡೂ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರ ವಹಿಸಿಕೊಳ್ಳಲಿದೆ ಎಂಬುದು ಬಹಳ ಕುತೂಹಲ ಮೂಡಿಸಿದೆ.

ಅವಿರೋಧ ಆಯ್ಕೆ ಆದ ಬಿಜೆಪಿ ಶಾಸಕರು ಯಾರು?

ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಅರುಣಾಚಲ ಪ್ರದೇಶ & ಸಿಕ್ಕಿಂನಲ್ಲಿ ಮ್ಯಾಜಿಕ್‌ ನಂಬರ್‌ ಎಷ್ಟು?

ರಾಜ್ಯದಲ್ಲಿ ಸರ್ಕಾರ ರಚಿಸಲು ಪ್ರತಿ ಪಕ್ಷ ಅಥವಾ ಯಾವುದೇ ಒಕ್ಕೂಟವು ವಿಧಾನಸಭೆಯಲ್ಲಿ ಬಹುಮತದ ಅಂಕವನ್ನು ತಲುಪಬೇಕು. ಪ್ರತಿ ರಾಜ್ಯ ಅಸೆಂಬ್ಲಿಯಲ್ಲಿನ ಬಹುಮತದ ಗುರುತು ನಿರ್ದಿಷ್ಟ ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ರಾಜ್ಯದಲ್ಲಿ ಬಹುಮತವು ಒಟ್ಟು ಅಸೆಂಬ್ಲಿ ಸ್ಥಾನಗಳ ಅರ್ಧಕ್ಕಿಂತ ಹೆಚ್ಚಿನ ಸ್ಥಾನವಾಗಿದೆ. ಅರುಣಾಚಲ ಪ್ರದೇಶ ವಿಧಾನಸಭೆಯು 60 ಸ್ಥಾನಗಳನ್ನು ಹೊಂದಿದ್ದು, 31 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರ ರಚಿಸಲಿದೆ.ಸಿಕ್ಕಿಂ ಅಸೆಂಬ್ಲಿ 32 ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚಿಸಲು 17 ಸ್ಥಾನಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಸುಮಾರು 2000 ಜನ ಅಧಿಕಾರಿಗಳ ತಂಡದಿಂದ ಮತ ಏಣಿಕೆ ಕಾರ್ಯ ಅರುಣಾಚಲದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: Exit Poll 2024: ಗುಜರಾತ್‌ನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌, ಉತ್ತರ ಪ್ರದೇಶದಲ್ಲಿ ಮೇಲುಗೈ; ರಾಜ್ಯವಾರು ಎಕ್ಸಿಟ್‌ ಪೋಲ್‌ ವರದಿ ಇಲ್ಲಿದೆ

Exit mobile version