ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಜತೆಗೆ ದೇಶದ ಗಮನ ಸೆಳೆದಿದ್ದ ಅರುಣಾಚಲ ಪ್ರದೇಶ (Aruchal Pradesh) ಮತ್ತು ಸಿಕ್ಕಿಂ(Sikkim) ವಿಧಾನಸಭೆ ಚುನಾವಣೆ (Assembly Election Results 2024) ಫಲಿತಾಂಶ ಹೊರ ಬಿದ್ದಿದೆ. ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ ಬಿಜೆಪಿ 42 ಸ್ಥಾನಗಳನ್ನು ಗೆದ್ದುಕೊಂಡಿದೆ. ಇತ್ತ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) 32 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಎಸ್‌ಕೆಎಂ ಈ ಬಾರಿ ಪ್ರಚಂಡ ಗೆಲುವು ದಾಖಲಿಸಿದೆ. ಒಂದು ಕಡೆ ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್ (SDF) ಗೆಲುವು ಪಡೆದಿದೆ. 2019ರ ಚುನಾವಣೆಯಲ್ಲಿ ಎಸ್‌ಕೆಎಂಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಬಿಜೆಪಿ ರಾಜ್ಯದ ಯಾವುದೇ ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ.
ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅಗತ್ಯವಾದ ಮ್ಯಾಜಿಕ್ ನಂಬರ್ 16. ಇನ್ನು ಎಸ್‌ಕೆಎಂನ ನಾಯಕ, ಹಾಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಪ್ರಚಂಡ ಗೆಲುವು ದಾಖಲಿಸಿದ್ದಾರೆ. ಅವರು ರೆನಾಕ್ ವಿಧಾನಸಭಾ ಕ್ಷೇತ್ರದಿಂದ ಸೋಮ್ ನಾಥ್ ಪೌಡ್ಯಾಲ್ ಅವರನ್ನು 7,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
Counting of votes for the Sikkim Assembly Elections concludes; Sikkim Krantikari Morcha (SKM) led by CM Prem Singh Tamang sweeps the elections, bags 31 seats out of 32 Assembly seats. Sikkim Democratic Front gets 1 seat. pic.twitter.com/qLleouDiPz
— ANI (@ANI) June 2, 2024
ರಾಜ್ಯಾದ್ಯಂತ ಎಸ್‌ಕೆಎಂ ಕಾರ್ಯಕರ್ತರ ಸಂಭ್ರಮಾಚರಣೆ ಆರಂಭವಾಗಿದೆ. ಪ್ರಚಂಡ ಗೆಲುವಿಗಾಗಿ ಪ್ರೇಮ್ ಸಿಂಗ್ ತಮಾಂಗ್ ಅವರು ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ʼʼಜನರ ಪ್ರೀತಿ ಮತ್ತು ವಿಶ್ವಾಸದಿಂದಾಗಿ ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಆಡಳಿತ ನಡೆಸಿದೆ. ಈ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ತುಂಬಾ ಶ್ರಮಿಸಿದ್ದಾರೆ. ಈಗ ಸಿಕ್ಕಿಂನ ಜನರಿಗೆ ನಮ್ಮ ಸೇವೆಯನ್ನು ನೀಡಲು ಮುಂದಿನ ಐದು ವರ್ಷಗಳು ಸಿಕ್ಕಿವೆ” ಎಂದು ಅವರು ಗ್ಯಾಂಗ್ಟಾಕ್‌ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆದ ಸಭೆಯಲ್ಲಿ ಹೇಳಿದರು.
2019ರಲ್ಲಿ ಎಸ್‌ಕೆಎಂ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಮೂಲಕ ಸತತ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಪಕ್ಷದಿಂದ ಅಧಿಕಾರ ಪಡೆದುಕೊಂಡಿತ್ತು. ಪ್ರೇಮ್ ಸಿಂಗ್ ತಮಾಂಗ್ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುವ ನಿರೀಕ್ಷೆ ಇದೆ.
ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ
ಚುನಾವಣಾ ಆಯೋಗದ ಪ್ರಕಾರ ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರಗಳ ಪೈಕಿ 42 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎರಡು ಸ್ಥಾನಗಳನ್ನು ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಎರಡು ಸ್ಥಾನಗಳನ್ನು ಗೆದ್ದಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಂದನ್ನು ಪಡೆದುಕೊಂಡು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳನ್ನು ಗೆದ್ದಿದ್ದಾರೆ.
ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅರುಣಾಚಲ ಪ್ರದೇಶದಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: West Bengal: ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ; ಗುಂಡಿಕ್ಕಿ ಕೊಂದು, ರುಂಡ ಕಡಿದು ಒಯ್ದ ದುಷ್ಕರ್ಮಿಗಳು