Site icon Vistara News

Assembly Polls: ಪಂಚರಾಜ್ಯ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಇಂದು ಘೋಷಣೆ

voting machine

ಹೊಸದಿಲ್ಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ (assembly polls in five states) ದಿನಾಂಕವನ್ನು ಚುನಾವಣಾ ಆಯೋಗ (Election Commission) ಇಂದು ಘೋಷಿಸಲಿದೆ.

ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ, ಮಿಜೋರಾಂಗಳ ಚುನಾವಣೆಯ ದಿನಾಂಕವನ್ನು ಇಂದು ಆಯೋಗ ಪ್ರಕಟಿಸಲಿದೆ. ಮೂಲಗಳ ಪ್ರಕಾರ, ನವೆಂಬರ್ ಎರಡನೇ ವಾರದಿಂದ ಡಿಸೆಂಬರ್ ಮೊದಲ ವಾರದ ನಡುವೆ ಯಾವುದೇ ಸಮಯದಲ್ಲಿ ಮತದಾನ ನಡೆಯಲಿದೆ.

ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 5ರಂದು ತನ್ನ ವೀಕ್ಷಕರ ಸಭೆಯನ್ನು ಕರೆದಿದ್ದ ಚುನಾವಣಾ ಆಯೋಗ, ಮತದಾನ ಪ್ರಕ್ರಿಯೆಯ ಸುಗಮ ನಡೆಗಾಗಿ ಕಾರ್ಯತಂತ್ರವನ್ನು ಅಂತಿಮಗೊಳಿಸಿತ್ತು.

ಈ 5 ರಾಜ್ಯಗಳಲ್ಲಿ, ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಡಳಿತವಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದೆ ಮತ್ತು ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರ ರಚಿಸಿದೆ. ಮಿಜೋರಾಂ ಸರ್ಕಾರದಲ್ಲಿರುವ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಬಿಜೆಪಿಯ ಮಿತ್ರಪಕ್ಷವಾಗಿದೆ.

ಪ್ರಸ್ತುತ ಸರ್ಕಾರಗಳ ಅವಧಿ ಮಿಜೋರಾಂನಲ್ಲಿ ಡಿಸೆಂಬರ್ 17, 2023, ಮಧ್ಯಪ್ರದೇಶದಲ್ಲಿ ಜನವರಿ 6, ಛತ್ತೀಸ್‌ಗಢದಲ್ಲಿ ಜನವರಿ 3, ರಾಜಸ್ಥಾನದಲ್ಲಿ ಜನವರಿ 14, ತೆಲಂಗಾಣದಲ್ಲಿ ಜನವರಿ 16ಕ್ಕೆ ಮುಗಿಯಲಿವೆ.

ಇದನ್ನೂ ಓದಿ: Karnataka Politics : 2024ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ಜತೆ ಇನ್ನೆಂದೂ ಕೈಜೋಡಿಸಲ್ಲ: ಎಚ್‌ಡಿಕೆ

Exit mobile version