ಶ್ರೀನಗರ: ಭಾರತೀಯ ಸೇನೆಯು ವಿಶ್ವದಲ್ಲೇ ಅತಿ ಎತ್ತರದ ಸಮರಾಂಗಣ ಎಂದೇ ಖ್ಯಾತಿಯಾದ ಸಿಯಾಚಿನ್ ಹಿಮದ ರಾಶಿಯ (Siachen Glacier) ಮೇಲೆ, ೧೯,೦೬೧ ಅಡಿ ಎತ್ತರದಲ್ಲಿ ಸ್ಯಾಟಲೈಟ್ ಆಧಾರಿತ ಅಂತರ್ಜಾಲ ಸೇವೆಗೆ ಚಾಲನೆ ನೀಡುವ ಮೂಲಕ ಮಹತ್ವದ ಸಾಧನೆ ಮಾಡಿದೆ.
ಸಿಯಾಚಿನ್ ಸಿಗ್ನಲರ್‌ಗಳು ಸಿಯಾಚಿನ್ ಹಿಮದ ರಾಶಿಯ ಮೇಲೆ ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (Bharat Broadband Network Limited-BBNL) ಡಿಶ್ ಬಳಸಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಿದ್ದಾರೆ. ದೇಶದ ಸೇನೆಯ ಫೈರ್ ಆ್ಯಂಡ್ ಫ್ಯುರಿ ಕಾರ್ಪ್ಸ್ ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಇದರಿಂದಾಗಿ ಸೇನೆಯು ೧೯ ಸಾವಿರ ಅಡಿ ಎತ್ತರದ ಪ್ರದೇಶದಲ್ಲಿಯೂ ಅಂತರ್ಜಾಲ ಸೇವೆ ಪಡೆಯಬಹುದಾಗಿದೆ.
ಈಗಾಗಲೇ ಭಾರತೀಯ ಸೇನೆಯು ರಕ್ಷಣಾ ಉದ್ಯಮ ಕ್ಷೇತ್ರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ತುರ್ತು ಉಪಕರಣಗಳ ತಯಾರಿಕೆಗೆ ಆಹ್ವಾನ ನೀಡಿದೆ. ಬಂದೂಕು, ಕ್ಷಿಪಣಿ, ಡ್ರೋನ್, ಸಂಪರ್ಕ ಹಾಗೂ ಆಪ್ಟಿಕಲ್ ಸಿಸ್ಟಮ್‌ಗಳ ಅಭಿವೃದ್ಧಿಗೆ ಆಹ್ವಾನಿಸಿದೆ. ಇದರಲ್ಲಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸಹ ಸೇರಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Viral letter | ಅಪ್ಪ ಇಲ್ಲವಾದ 9 ವರ್ಷದ ನಂತರ ಸಿಕ್ಕ ಅವನ ಪತ್ರ: ಇಂಟರ್ನೆಟ್ ಜಗತ್ತು ಭಾವುಕ!