ಹೊಸದಿಲ್ಲಿ: “ತಾಯಿ ಭಾರತಿಗೆ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಸಮರ್ಪಣೆ ಮತ್ತು ಸೇವೆಯು ಸದಾಕಾಲ ಸ್ಫೂರ್ತಿಯ ಮೂಲವಾಗಿ ಉಳಿಯಲಿದೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನವಾದ ಸೋಮವಾರ ಪ್ರಧಾನಿ ಮೋದಿ ‘ಸದೈವ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಮಾಜಿ ಪ್ರಧಾನಿಗೆ ಪುಷ್ಪ ನಮನ ಸಲ್ಲಿಸಿದರು. ಪ್ರಧಾನಿಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡರು. ನಂತರ ʼಎಕ್ಸ್ʼನಲ್ಲಿ ಅಟಲ್ ಅವರನ್ನು ಮೋದಿ ಸ್ಮರಿಸಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಮಾಜಿ ಪ್ರಧಾನಿಯ ವೀಡಿಯೊವನ್ನು ಹಂಚಿಕೊಂಡ ಮೋದಿ, “ದೇಶದ ಎಲ್ಲಾ ಪ್ರಜೆಗಳ ಪರವಾಗಿ ಮಾಜಿ ಪ್ರಧಾನಿ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ನಾನು ಅವರಿಗೆ ಇಂದು ಆಳವಾದ ಗೌರವವನ್ನು ಸಲ್ಲಿಸುತ್ತೇನೆ. ಅವರು ತಮ್ಮ ಜೀವನದುದ್ದಕ್ಕೂ ರಾಷ್ಟ್ರ ನಿರ್ಮಾಣದ ವೇಗವನ್ನು ಹೆಚ್ಚಿಸುವಲ್ಲಿ ನಿರತರಾಗಿದ್ದರು. ತಾಯಿ ಭಾರತಕ್ಕಾಗಿ ಅವರ ಸಮರ್ಪಣೆ ಮತ್ತು ಸೇವೆಯು ಅವರ ನಂತರವೂ ಸ್ಫೂರ್ತಿಯ ಮೂಲವಾಗಿ ಉಳಿಯಲಿದೆ” ಎಂದು ಬರೆದುಕೊಂಡಿದ್ದಾರೆ.
#WATCH | Delhi: Prime Minister Narendra Modi pays floral tribute to former Prime Minister Atal Bihari Vajpayee at 'Sadaiv Atal' memorial, on his birth anniversary. pic.twitter.com/BqpmVC6tie
— ANI (@ANI) December 25, 2023
ಪ್ರಧಾನಿ ಮೋದಿಯವರ ಧ್ವನಿಯಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಸೇವೆ ಸಲ್ಲಿಸಿದ ಸಮರ್ಪಿತ ನಾಯಕ ಎಂದು ವಿಡಿಯೊ ವಿವರಿಸುತ್ತದೆ. “ಎಲ್ಲಿಯೇ ಆಗಲಿ ಹಾಸ್ಯವನ್ನು ಕಾಣುವ ಅವರ ಸಾಮರ್ಥ್ಯ ಅವರಿಗೆ ವಿಶಿಷ್ಟವಾಗಿತ್ತು. ಪಕ್ಷದ ಸಭೆಗಳಲ್ಲಿ ಚರ್ಚೆ ಬಿಸಿಯೇರಿದ್ದರೂ ಅವರು ಮೂಡ್ ಅನ್ನು ಹಗುರಗೊಳಿಸುವ ಹಾಸ್ಯವನ್ನು ಸಿಡಿಸುತ್ತಿದ್ದರು. ಅವರು ಸನ್ನಿವೇಶದ ಮೇಲೆ ಹಿಡಿತವನ್ನು ಹೊಂದಿದ್ದರು” ಎಂದಿದ್ದಾರೆ ಮೋದಿ.
पूर्व प्रधानमंत्री आदरणीय अटल बिहारी वाजपेयी जी को उनकी जयंती पर देश के सभी परिवारजनों की ओर से मेरा कोटि-कोटि नमन। वे जीवनपर्यंत राष्ट्र निर्माण को गति देने में जुटे रहे। मां भारती के लिए उनका समर्पण और सेवा भाव अमृतकाल में भी प्रेरणास्रोत बना रहेगा। pic.twitter.com/RfiKhMb27x
— Narendra Modi (@narendramodi) December 25, 2023
90ರ ದಶಕದಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಕೇಂದ್ರದಲ್ಲಿ ಅಧಿಕಾರಕ್ಕೆ ತಂದ ಅಟಲ್ ಬಿಹಾರಿ ವಾಜಪೇಯಿ, ಆರು ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮೊದಲು 1996ರಲ್ಲಿ ಕೇವಲ 13 ದಿನಗಳ ಕಾಲ, ನಂತರ 1998ರಿಂದ 1999ರವರೆಗೆ 13 ತಿಂಗಳುಗಳ ಕಾಲ, ಬಳಿಕ 1999ರಿಂದ 2004ರವರೆಗೆ ಐದು ವರ್ಷಗಳ ಪೂರ್ಣಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ಅವರು ಆರ್ಯ ಸಮಾಜ ಚಳವಳಿಯ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. ಅವರು ರಾಜಕಾರಣಿ ಮಾತ್ರವಲ್ಲದೆ ಅಪೂರ್ವ ಕವಿಯೂ ಆಗಿದ್ದರು.
ಇದನ್ನೂ ಓದಿ: Main Atal Hoon: ಮೈ ಅಟಲ್ ಹೂಂ ಟೀಸರ್ ಔಟ್, ವಾಜಪೇಯಿ ಪಾತ್ರದಲ್ಲಿ ತ್ರಿಪಾಠಿ ಸೂಪರ್