ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಎಟಿಎಂ ಒಂದರಲ್ಲಿ ವ್ಯಕ್ತಿಯೊಬ್ಬರು 500 ರೂ. ಡ್ರಾ ಮಾಡಿದ್ದರು. ಈ ವೇಳೆ ಐದು ಬಾರಿ 500 ನೋಟುಗಳು ಬಂದಿದೆ. ಬಳಿಕ ಮತ್ತೊಮ್ಮೆ ಎಟಿಎಂನಲ್ಲಿ 500 ಡ್ರಾ ಮಾಡಿದ್ದಾರೆ. ಆಗಲೂ 500 ರೂ. ಮುಖಬೆಲೆಯ ಐದು ನೋಟುಗಳು ಬಂದಿವೆ. ಹೀಗೆ ಒಟ್ಟು 2500 ನೋಟುಗಳು ಆತನಿಗೆ ಸಿಕ್ಕಿತು!
ನಾಗ್ಪುರದಿಂದ 30 ಕಿಲೋ ಮೀಟರ್ ದೂರವಿರುವ ಕಪಾರ್ಖೇಡಾ ಟೌನ್ ಬಳಿ ಇರುವ ಖಾಸಗಿ ಬ್ಯಾಂಕಿನ ಎಟಿಎಂನಲ್ಲಿ 500 ರೂಪಾಯಿ ತೆಗೆಯಲು ಸ್ಥಳೀಯರೊಬ್ಬರು ಹೋಗಿದ್ದರು. ಆಗಲೂ ಎಟಿಎಂನಲ್ಲಿ 500 ರೂ. ಮುಖಬೆಲೆಯ ಐದು ನೋಟುಗಳು ಬಂದಿವೆ.
ಇದನ್ನು ಓದಿ| ಎಟಿಎಂ ಮೆಷಿನ್‌ಗೆ ಕನ್ನ ಹಾಕಲು ಬಂದಿದ್ದ ಆಸಾಮಿ ಪೊಲೀಸ್ ಬಲೆಗೆ!
ಈ ಸುದ್ದಿ ನಗರದ ತುಂಬೆಲ್ಲ ಕಾಡ್ಗಿಚ್ಚಿನಂತೆ ಹರಡಿದ್ದು, ಎಟಿಎಂ ಮುಂದೆ ನೂರಾರು ಜನ ಹಣ ತೆಗೆಯಲು ಸಾಲುಗಟ್ಟಿ ನಿಂತಿದ್ದರು. ಆ ಬ್ಯಾಂಕಿನ ಗ್ರಾಹಕನೊಬ್ಬ ಕೂಡಲೇ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಬಂದ್ ಮಾಡಿ ಅಲ್ಲಿ ನೆರೆದಿದ್ದ ಜನರನ್ನು ಚದುರಿಸಿದ್ದಾರೆ. ಬಳಿಕ ಈ ಕುರಿತು ಬ್ಯಾಂಕ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ: ಎಟಿಎಂನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಹೆಚ್ಚುವರಿ ಹಣ ಬರುತ್ತಿತ್ತು. ಅಲ್ಲದೆ ಎಟಿಎಂಗೆ ಹಣ ತುಂಬುವವರು 100 ರೂಪಾಯಿ ನೋಟುಗಳನ್ನು ಇಡುವ ಟ್ರೇನಲ್ಲಿ 500 ರೂಪಾಯಿ ನೋಟುಗಳನ್ನು ಇಟ್ಟಿದ್ದರಿಂದ ಈ ಅಚಾತುರ್ಯ ನಡೆದಿದೆ. ಸದ್ಯಕ್ಕೆ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.