Site icon Vistara News

ಹಿಂದೂ ದೇಗುಲಗಳ ಮೇಲೆ ದಾಳಿ: ಆಸ್ಟ್ರೇಲಿಯಾ ಪಿಎಂ ಭದ್ರತೆಯ ಭರವಸೆ ನೀಡಿದ್ದಾರೆ ಅಂದ್ರು ಪ್ರಧಾನಿ ಮೋದಿ

Attacks on Hindu temples: Australian PM promises security

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯದ ಸುರಕ್ಷತೆಯ ಬಗ್ಗೆ ಆಸ್ಟ್ರೇಲಿಯನ್ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು(Attacks on Hindu temples).

ಶುಕ್ರವಾರ ಆಸ್ಟ್ರೇಲಿಯಾ ಪಿಎಂ ಜತೆಗೂಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವಾರಗಳಿಂದ ದೇವಾಲಯಗಳ ಮೇಲಿನ ದಾಳಿಯ ವರದಿಗಳು ಆಸ್ಟ್ರೇಲಿಯಾದಿಂದ ನಿಯಮಿತವಾಗಿ ಬರುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಸುದ್ದಿಗಳು ಭಾರತದಲ್ಲಿ ಪ್ರತಿಯೊಬ್ಬರನ್ನು ಚಿಂತೆಗೀಡುಮಾಡುವುದು ಮತ್ತು ನಮ್ಮ ಮನಸ್ಸನ್ನು ಕಲಕುವುದು ಸಹಜ ಎಂದು ಪ್ರಧಾನಿ ಮೋದಿ ಹೇಳಿದರು.

ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಅವರೊಂದಿಗೆ ಭಾರತೀಯ ಭಾವನೆಗಳನ್ನು ಹಂಚಿಕೊಂಡಿದ್ದೇನೆ. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆಯ ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ತಂಡಗಳು ನಿರಂತರವಾಗಿ ಆಸ್ಟ್ರೇಲಿಯಾ ಸರ್ಕಾರ ಜತೆಗೆ ಸಂಪರ್ಕದಲ್ಲಿರಲಿದೆ ಮತ್ತು ಅಗತ್ಯ ನೆರವು ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ: Durga Bhawan | ಅಲ್ಲಾ ಹು ಅಕ್ಬರ್‌ ಎನ್ನುತ್ತ ಬ್ರಿಟನ್‌ನಲ್ಲಿ ಹಿಂದೂ ದೇಗುಲದ ಮೇಲೆ 3 ಸಾವಿರ ಜನರಿಂದ ದಾಳಿ!

ಕಳೆದ ವಾರ ಬ್ರಿಸ್ಬೆನ್‌ನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇಗುಲದ ಮೇಲೆ ಖಲಿಸ್ಥಾನಿ ಬೆಂಬಲಗರು ದಾಳಿ ನಡೆಸಿದ್ದರು. ಕಳೆದ ಎರಡು ತಿಂಗಳಲ್ಲಿ ಆಸ್ಟ್ರೇಲಿಯಾದ ಹಿಂದೂ ದೇಗುಲಗಳ ಮೇಲೆ ನಡೆಯುತ್ತಿರು ನಾಲ್ಕನೇ ದಾಳಿ ಇದಾಗಿದೆ. ಜನವರಿ 23ರಂದು ಮೇಲ್ಬರ್ನ್‌ನಲ್ಲಿ ಇಸ್ಕಾನ್ ಟೆಂಪಲ್ ಗೋಡೆ ಮೇಲೆ, ಹಿಂದೂಸ್ತಾನ್ ಮುರ್ದಾಬಾದ್ ಎಂಬ ಗೀಚು ಬರಹ ಬರೆಯಲಾಗಿತ್ತು. ಇದೇ ರೀತಿ ಇನ್ನೂ ಎರಡ್ಮೂರು ಘಟನೆಗಳು ನಡೆದಿದ್ದವು.

Exit mobile version