Site icon Vistara News

Video Viral: ವೇಗವಾಗಿ ಬರುತ್ತಿದ್ದ ಲಾರಿಗೆ ಆಟೋ ಡಿಕ್ಕಿ, ಗಾಳಿಯಲ್ಲಿ ಹಾರಿಬಿದ್ದ ಶಾಲಾ ಮಕ್ಕಳು!

Auto hit to truck and School Children flung into air and Video viral

ವಿಶಾಖಪಟ್ಟಣಂ: ವೇಗವಾಗಿ ಬರುತ್ತಿದ್ದ ಟ್ರಕ್‌ಗೆ (Truck) ಆಟೋರಿಕ್ಷಾ (Auto rickshaw) ಡಿಕ್ಕಿ ಹೊಡೆದ ಪರಿಣಾಮ, ಅದರಲ್ಲಿದ್ದ ಶಾಲಾ ಮಕ್ಕಳು ಗಾಳಿಯಲ್ಲಿ ಹಾರಿ ಬಿದ್ದ (School Children flung into air) ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ (Andhra Pradesh) ವಿಶಾಖಪಟ್ಟಣಂ ನಗರದಲ್ಲಿ (Vishakhapatnam City) ಬುಧವಾರ ನಡೆದಿದೆ. ಈ ಘಟನೆಯ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗಿದ್ದು, ಆಟೋದಲ್ಲಿದ್ದ ಎಂಟೂ ಮಕ್ಕಳು ಗಾಯಗೊಂಡಿದ್ದಾರೆ.

ಮಕ್ಕಳು ಬೆಳಗ್ಗೆ 7 ಗಂಟೆಗೆ ಬೆಥನಿ ಸ್ಕೂಲ್‌ಗೆ ಆಟೋದಲ್ಲಿ ಹೊರಟಿದ್ದರು. ವಿಶಾಖಪಟ್ಟಣದ ಸಂಗಂ ಶರತ್ ಥಿಯೇಟರ್ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ. 35 ಸೆಕೆಂಡ್‌ಗಳ ವಿಡಿಯೋದಲ್ಲಿ ಮಕ್ಕಳು ಗಾಳಿಯಲ್ಲಿ ಹಾರಿ ಬೀಳುವುದನ್ನು ಕಾಣಬಹುದು. ಬೆಳಗ್ಗೆ 7.35ಕ್ಕೆ ಫ್ಲೈಓವರ್‌ನ ಕೆಳಗೆ ಕ್ರಾಸಿಂಗ್‌‌ನಲ್ಲಿ ಟ್ರಕ್ ಸಮೀಪಿಸಿದಾಗ ಎಡಭಾಗದಿಂದ ವೇಗವಾಗಿ ಬರುತ್ತಿದ್ದ ಆಟೋ ಅದರೊಳಗೆ ನುಗ್ಗಿತು. ಲಾರಿ ನಿಲ್ಲಿಸಲು ವಿಫಲವಾದ ಕಾರಣ ಶಾಲಾ ಮಕ್ಕಳು ಆಟೋದಿಂದ ಗಾಳಿಯಲ್ಲಿ ಹಾರಿ ಬಿದ್ದರು.

ಅಪಘಾತ ಸಂಭವಿಸಿದ ಕೆಲವೇ ಸೆಕೆಂಡುಗಳಲ್ಲಿ ಬೈಕರ್ಸ್, ಅಲ್ಲಿದ್ದ ಸ್ಥಳೀಯರು ಗಾಯಾಳುಗಳ ಸಹಾಯಕ್ಕೆ ಮುಂದಾದರು. ಮುಗಿಚಿಬಿದ್ದಿದ್ದ ಆಟೋವನ್ನು ಮೇಲಕ್ಕೆ ಎತ್ತಿ, ಕೆಳಗಿದ್ದ ಮಕ್ಕಳನ್ನು ರಕ್ಷಿಸಿದರು. ಗಾಯಗೊಂಡಿದ್ದ 8 ಮಕ್ಕಳ ಪೈಕಿ ನಾಲ್ಕು ಮಕ್ಕಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒಬ್ಬ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಮೂವರ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಶಾಖಪಟ್ಟಣಂ ಸಂಗಮ್ ಸರತ್ ಥಿಯೇಟರ್‌ ಜಂಕ್ಷನ್‌ನಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್‌ಗೆ ಶಾಲಾ ಮಕ್ಕಳಿದ್ದ ಆಟೋ ಡಿಕ್ಕಿ ಹೊಡೆಯಿತು. 8 ಮಕ್ಕಳು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಮಗುವಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ರಾವ್ ಅವರು ಹೇಳಿದ್ದಾರೆ.

ಆಟೋದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದರು. ಅಪಘಾತಕ್ಕೀಡಾದ ಆಟೋ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ನಗರದೊಳಗೆ ಬೆಳಗಿನ ಸಮಯದಲ್ಲಿ ಲಾರಿಗಳ ಪ್ರವೇಶಕ್ಕೆ ಅವಕಾಶ ನೀಡಬೇಕೇ ಬೇಡವೇ ಎಂಬ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Murder Case : ಕೊಲೆ ಮಾಡಿಸಿದ ಅಪಘಾತ! ಮೂಲ ಹುಡುಕಿದಾಗ ಸಿಕ್ಕಿಬಿದ್ದ ಮಹಾ ಕಳ್ಳ..

Exit mobile version