Site icon Vistara News

Modi In Ayodhya | ಅಯೋಧ್ಯೆಯಲ್ಲಿ 15 ಲಕ್ಷ ದೀಪಗಳ ಚಿತ್ತಾರ, ಗಿನ್ನೆಸ್‌ ದಾಖಲೆಗೆ ದೀಪೋತ್ಸವ ಭಾಜನ

Ayodhya Light

ಅಯೋಧ್ಯೆ: ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ನಡೆದ ದೀಪೋತ್ಸವವು ಸಂಪನ್ನಗೊಂಡಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Modi In Ayodhya) ಅವರು ದೀಪೋತ್ಸವಲ್ಲಿ ಪಾಲ್ಗೊಂಡ ಕಾರಣ ಅಯೋಧ್ಯೆಗೆ ವಿಶೇಷ ಕಳೆ ಬಂದಿತ್ತು. ಅಲ್ಲದೆ, ರಾಮ ಜನ್ಮಭೂಮಿಯಲ್ಲಿ 15 ಲಕ್ಷ ದೀಪಗಳನ್ನು ಬೆಳಗಲಾಗಿದ್ದು, ಇದು ಗಿನ್ನೆಸ್‌ ದಾಖಲೆಗೆ ಭಾಜನವಾಗಿದೆ.

ಯೋಗಿ ಆದಿತ್ಯನಾಥ್‌ ಅವರಿಗೆ ಗಿನ್ನೆಸ್‌ ದಾಖಲೆಯ ಪ್ರಮಾಣಪತ್ರ ನೀಡಿದ ನರೇಂದ್ರ ಮೋದಿ.

ವಿಶ್ವದ ಯಾವುದೇ ಭಾಗದಲ್ಲಿ ಇಷ್ಟೊಂದು ದೀಪಗಳನ್ನು ಬೆಳಗದ ಕಾರಣ ಹಾಗೂ ಇದೇ ಮೊದಲ ಬಾರಿ 15 ಲಕ್ಷ ದೀಪಗಳನ್ನು ಬೆಳಗಿದ ಹಿನ್ನೆಲೆಯಲ್ಲಿ ಅಯೋಧ್ಯೆಯ ದೀಪೋತ್ಸವವು ಗಿನ್ನೆಸ್‌ ದಾಖಲೆಗೆ ಭಾಜನವಾಗಿದೆ. ದೀಪೋತ್ಸವದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಗಿನ್ನೆಸ್‌ ದಾಖಲೆಯ ಪ್ರಮಾಣಪತ್ರ ನೀಡಿದರು. ಅಯೋಧ್ಯೆಯಲ್ಲಿ 2012ರ ದೀಪೋತ್ಸವದಲ್ಲಿ 12 ಲಕ್ಷ ಹಾಗೂ 2020ರಲ್ಲಿ 6 ಲಕ್ಷ ದೀಪಗಳನ್ನು ಬೆಳಗಲಾಗಿತ್ತು.

ಇದನ್ನೂ ಓದಿ | Modi In Ayodhya | ಅಯೋಧ್ಯೆ ದೀಪಗಳಿಂದ ದಿವ್ಯ, ಭಾವನೆಗಳಿಂದ ಭವ್ಯ, ರಾಮನಿಗೆ ನಾನು ಧನ್ಯ ಎಂದ ಮೋದಿ

Exit mobile version