ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ಕಾಶ್ಮೀರದ ಯುವತಿಯೊಬ್ಬಳು (kashmiri girl) ರಾಮನನ್ನು ಸ್ವಾಗತಿಸಲು ಸ್ಥಳೀಯ ಭಾಷೆಯಲ್ಲಿ ಹಾಡಿರುವ ವಿಡಿಯೋ (viral video) ಗಮನ ಸೆಳೆದಿದೆ.
ದೇಗುಲದ ಬಹುನಿರೀಕ್ಷಿತ ಉದ್ಘಾಟನೆಗೆ ದೇಶಾದ್ಯಂತದಿಂದ ಬಹುರೀತಿಯ ತನು- ಮನ- ಧನ ನೆರವು ಹರಿದುಬರುತ್ತಿದೆ. ಈ ನಡುವೆ ಬಟೂಲ್ ಝೆಹ್ರಾ ಎಂಬ ಕಾಶ್ಮೀರಿ ಯುವತಿ ಸ್ಥಳೀಯ ಭಾಷೆಯಲ್ಲಿ ಭಗವಾನ್ ರಾಮನ ಆಗಮನವನ್ನು ಸ್ವಾಗತಿಸುತ್ತಾ ಹಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಕೇಂದ್ರ ಮಾಹಿತಿ- ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಈ ವೀಡಿಯೊವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
जब पूरा देश राममय हो चला हो तो स्वर्ग से भी सुंदर कश्मीर कैसे पीछे रहे..
— Anurag Thakur (@ianuragthakur) January 15, 2024
कश्मीर की बेटी बतूल जेहरा ने प्रभु श्री राम के स्वागत में स्थानीय भाषा में सुन्दर गीत गाते हुए, कितना सुंदर संदेश दिया है। कश्मीर का युवा अब तोड़ने की नहीं, जोड़ने की बातें कर रहा है।
बदलाव, जो मोदी राज… pic.twitter.com/zfL8tacxgo
“ಇಡೀ ದೇಶವೇ ರಾಮನ ಹಬ್ಬವನ್ನು ಆಚರಿಸುತ್ತಿರುವಾಗ, ಸ್ವರ್ಗಕ್ಕಿಂತ ಸುಂದರವಾಗಿರುವ ಕಾಶ್ಮೀರ ಹೇಗೆ ಹಿಂದುಳಿಯಲು ಸಾಧ್ಯ? ಕಾಶ್ಮೀರದ ಮಗಳು ಬಟೂಲ್ ಝೆಹ್ರಾ, ಭಗವಾನ್ ಶ್ರೀರಾಮನನ್ನು ಸ್ವಾಗತಿಸಲು ಸ್ಥಳೀಯ ಭಾಷೆಯಲ್ಲಿ ಸುಂದರವಾದ ಹಾಡನ್ನು ಹಾಡುವ ಮೂಲಕ ಸುಂದರವಾದ ಸಂದೇಶವನ್ನು ನೀಡಿದ್ದಾರೆ. ಕಾಶ್ಮೀರದ ಯುವಕರು ಈಗ ಒಗ್ಗೂಡುವ ಬಗ್ಗೆ ಮಾತನಾಡುತ್ತಿದ್ದಾರೆ, ವಿಭಜಿಸುವ ಬಗ್ಗೆ ಅಲ್ಲ. ಮೋದಿ ಆಡಳಿತದಲ್ಲಿ ಬದಲಾವಣೆ ಸ್ಪಷ್ಟವಾಗಿ ಕಂಡುಬಂದಿದೆ” ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಜನವರಿ 22ಕ್ಕೆ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ ಮೂರು ವರ್ಷಗಳ ನಂತರ, ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, 4,000 ಸಂತರು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮಮಂದಿರದ ಭಾಗವಾಗಿದ್ದ ʼಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನಗಳನ್ನು ಕಳುಹಿಸಿದೆ.
ಇದನ್ನೂ ಓದಿ: Ram Mandir: ಇಂದಿನಿಂದ ರಾಮ ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳು ಶುರು; ಏನೇನು ವಿಧಿವಿಧಾನ?