Site icon Vistara News

Ayodhya Ram Temple: ರಾಮ ದರ್ಬಾರ್, ಸೀತಾ ಕೂಪ… ಅಯೋಧ್ಯೆ ರಾಮ ಮಂದಿರದಲ್ಲಿ ಏನೇನಿದೆ? ಚಿತ್ರಗಳು ಇಲ್ಲಿವೆ

ram mandir

ಅಯೋಧ್ಯೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ (Ayodhya Ram Temple, Ayodhya Ram Mandir) ರಾಮ ಲಲ್ಲಾ (Ram Lalla) ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಆದರೆ ಈ ಬೃಹತ್ ದೇವಾಲಯದಲ್ಲಿ ಏನೇನಿರುತ್ತದೆ ಎಂಬುದು ನಿಮಗೆ ಗೊತ್ತಾ?

ram mandir

ರಾಮ ಜನ್ಮಭೂಮಿ ತೀರ್ಥ ಪ್ರಕಾರ, ಇದು ಮೂರು ಮಹಡಿಯ ಮಹಾ ಕಟ್ಟಡ. ಪ್ರತಿ ಮಹಡಿಯೂ 20 ಅಡಿ ಎತ್ತರ. ಒಟ್ಟಾರೆಯಾಗಿ ಇಡೀ ಮಂದಿರಲ್ಲಿ 392 ಸ್ತಂಭಗಳು ಹಾಗೂ 44 ದ್ವಾರಗಳು ಇವೆ.

ರಾಮ ಮಂದಿರದೆಡೆಗೆ ತೆರಳುವ ಮುಖ್ಯ ಮಹಾದ್ವಾರದ ಇಕ್ಕೆಲಗಳಲ್ಲಿ ಆನೆಗಳು, ಸಿಂಹಗಳು, ಹನುಮಂತ, ಗರುಡ ಮುಂತಾದವರ ಪ್ರತಿಮೆಗಳು ಇರಲಿವೆ. ಇವುಗಳನ್ನು ರಾಜಸ್ಥಾನದ ಬನ್ಸಿ ಪಹಾರ್‌ಪುರದಿಂದ ತರಿಸಲಾದ ಅಮೃತಶಿಲೆಯಿಂದ ನಿರ್ಮಿಸಲಾಗಿದೆ.

ram mandir

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಈ ಭವ್ಯ ದೇವಸ್ಥಾನದ ಒಟ್ಟಾರೆ ಉದ್ದ 389 ಅಡಿ, ಅಗಲ 250 ಅಡಿ ಹಾಗೂ ಎತ್ತರ 161 ಅಡಿ.

ದೇವಾಲಯದಲ್ಲಿ ನಾಲ್ಕು ಮಂಟಪಗಳಿರುತ್ತವೆ. ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಹಾಗೂ ಕೀರ್ತನ ಮಂಟಪ. ಮೊದಲ ಮಹಡಿಗೆ ʼಶ್ರೀ ರಾಮ ದರ್ಬಾರ್‌ʼ ಎಂದು ಹೆಸರು. ರಾಮ ಲಲ್ಲಾನ ಮೂರ್ತಿ ಹೊಂದಿದ ಗರ್ಭಗುಡಿ ಇಲ್ಲಿರುತ್ತದೆ.

ram mandir

ದೇವಾಲಯದ ತುಂಬಾ ದೇವದೇವಿಯರ ಮೂರ್ತಿಗಳು, ರಾಮಾಯಣದ ಮಹಾಕಾವ್ಯದ ದೃಶ್ಯಗಳ ಕೆತ್ತನೆಗಳು ತುಂಬಿರಲಿವೆ.

ದೇವಾಲಯದ ಮುಖ್ಯದ್ವಾರ ಪೂರ್ವಕ್ಕೆ ಅಭಿಮುಖವಾಗಿರುತ್ತದೆ. ಇದಕ್ಕೆ ಸಿಂಹದ್ವಾರ ದಾಟಿ 32 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಬಳಕೆಗಾಗಿ ರ್ಯಾಂಪ್‌ಗಳು ಹಾಗೂ ಲಿಫ್ಟ್‌ಗಳು ಇರುತ್ತವೆ.

ಇಡೀ ದೇವಾಲಯಕ್ಕೆ ʼಪ್ರಾಕಾರʼ ಎಂಬ ಹೆಸರಿನ ಆವರಣ ಗೋಡೆಯಿದ್ದು. ಇದರ ಒಟ್ಟಾರೆ ಉದ್ದ 732 ಮೀಟರ್.‌ ಇದರ ಅಗಲವೇ 14 ಮೀಟರ್.‌

ram mandir

ಮಂದಿರದ ತಳಹದಿಯನ್ನು 14 ಮೀಟರ್‌ನಷ್ಟು ದಪ್ಪನಾದ ರೋಲರ್‌ ಸಾಂದ್ರೀಕೃತ ಕಾಂಕ್ರೀಟ್‌ನಿಂದ ತುಂಬಲಾಗಿದೆ. ಇದೊಂದು ಕೃತಕ ಹೆಬ್ಬಂಡೆಯೇ ಸರಿ.

ದೇವಾಲಯದ ಆವರಣದಲ್ಲಿಯೇ ಐತಿಹಾಸಿಕವಾದ ʼಸೀತಾ ಕೂಪʼವೂ ಇದೆ. ಇದೊಂದು ಪುಣ್ಯತೀರ್ಥ. ಸೀತಾದೇವಿ ಈ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ. ಇದು ಪಾಪನಾಶಿನಿ ಎಂಬ ಪ್ರತೀತಿ ಇದೆ.

ಇದನ್ನೂ ಓದಿ: Ram Mandir : 65 ಲಕ್ಷ ರೂ. ಬೆಲೆಯ ಸ್ವರ್ಣ ಪಾದುಕೆಯೊಂದಿಗೆ ಅಯೋಧ್ಯೆಗೆ 8000 ಕಿ.ಮೀ ಪಾದಯಾತ್ರೆ!

Exit mobile version