ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಬಾಬಾ’ (Baba Film) ಚಿತ್ರವು 20 ವರ್ಷಗಳ ಬಳಿಕ ಮರು ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್ 12ಕ್ಕೆ ರಜನಿಕಾಂತ್ ಅವರು ತಮ್ಮ 72ನೇ ಬರ್ತ್‌ಡೇ (Rajnikanth Birthday) ಆಚರಿಸಿಕೊಳ್ಳುತ್ತಿದ್ದಾರೆ. 2002ರಲ್ಲಿ ತೆರೆ ಕಂಡಿದ್ದ ಅಧ್ಯಾತ್ಮಿಕ ಹಿನ್ನೆಲೆಯ ಕಥಾಹಂದರವನ್ನು ಹೊಂದಿರುವ ಬಾಬಾ ಸಿನಿಮಾ ಆಗ ಸಕ್ಸೆಸ್ ಕಂಡಿರಲಿಲ್ಲ. ಆದರೆ, ಈಗ ಮತ್ತೆ ತೆರೆಗೆ ಬಂದಿದೆ.
2002ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿದ್ದ ಸಿನಿಮಾವನ್ನು ಮತ್ತೆ 20 ವರ್ಷಗಳ ಬಳಿಕೆ ಯಾಕೆ ಮರು ಬಿಡುಗಡೆ ಮಾಡಲಾಗಿದೆ ಎಂಬ ಕುತೂಹಲ ಸಹಜ. ರಜನಿಕಾಂತ್ ಅವರ ಒತ್ತಾಸೆಯಿಂದಾಗಿಯೇ ಈ ಚಿತ್ರವನ್ನು ಮರು ಬಿಡುಗಡೆ ಮಾಡಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುರೇಶ್ ಕೃಷ್ಣ. ಈ ಚಿತ್ರದಲ್ಲಿ ಮೋನಿಷಾ ಕೊಯಿರಾಲ ಮುಖ್ಯ ನಟಿಯಾಗಿದ್ದರು. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದರು. ರಜನಿಕಾಂತ್ ಅವರದ್ದೇ ಕತೆ, ಚಿತ್ರಕತೆ ಮತ್ತು ನಿರ್ಮಾಣ ಕೂಡ. ಹಾಗಾಗಿ, ಈ ಸಿನಿಮಾದ ಬಗ್ಗೆ ಅವರಿಗೆ ಪ್ರೀತಿ ಹೆಚ್ಚು.
20 ವರ್ಷಗಳ ಹಿಂದೆ ತೆರೆಗೆ ಬಂದಿದ್ದು ಬಿಟ್ಟರೆ, ಆ ಬಳಿಕ ಅದು ಎಲ್ಲೂ ತೆರೆ ಕಂಡಿಲ್ಲ. ಟಿವಿ, ಒಟಿಟಿ, ಯುಟ್ಯೂಬ್ ಸೇರಿದಂತೆ ಯಾವ ವೇದಿಕೆಗಳಲ್ಲೂ ಈ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಈಗ ಮತ್ತೆ ಮರು ಬಿಡುಗಡೆಯಾಗಿರುವುದು ರಜನಿ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಬಹುಶಃ ಓಟಿಟಿ ಸೇರಿದಂತೆ ಇತರ ವೇದಿಕೆಗಳಲ್ಲೂ ಈ ಸಿನಿಮಾವನ್ನು ನಿರೀಕ್ಷಿಸಬಹುದೇನೊ…
ಇದನ್ನೂ ಓದಿ | Kantara Movie | ರಜನಿಕಾಂತ್ ಭೇಟಿ ವೇಳೆ ರಿಷಬ್ ಶೆಟ್ಟಿ ಪಂಚೆ ಬದಲು ಜೀನ್ಸ್ ಧರಿಸಿದ್ಯಾಕೆ? ನಟ ಹೇಳಿದ್ದೇನು?