Site icon Vistara News

ಸಿಎಂ ಸಿದ್ದು ‘ಅಹಿಂದ’ ಸೂತ್ರದಿಂದ ಲೋಕಸಭೆ ಎಲೆಕ್ಷನ್‌ನಲ್ಲಿ ಗೆಲುವು! ಹಿಂಟ್ ಕೊಟ್ರು ಎಸ್ಪಿ ನಾಯಕ ಅಖಿಲೇಶ್ ಯಾದವ್

akhilesh yadav

ಲಕ್ನೋ, ಉತ್ತರ ಪ್ರದೇಶ: ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು (BJP) ಸೋಲಿಸುವ ಸೂತ್ರವನ್ನು ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (SP Leader Akhilesh Yadav) ಅವರು ಮುಂದಿಟ್ಟಿದ್ದಾರೆ. ಪಿಡಿಎ (PDA)- ಪಿಚ್ಡೇ, ದಲಿತ್, ಅಲ್ಪಸಂಖ್ಯಾತ್ (ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರು – Backward Classes, Dalits and Minorities) ಸೂತ್ರದಡಿ ಎನ್‌ಡಿಎಯನ್ನು ಸೋಲಿಸಬಹುದು (Lok Sabha Election) ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ. ಎನ್‌ಡಿಟಿವಿ ಆಯೋಜಿಸಿದ್ದ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂದ ಹಾಗೆ, ಅಖಿಲೇಶ್ ಯಾದವ್ ಅವರು ಮುಂದಿಟ್ಟಿರುವ ಸೂತ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅನುಸರಿಸಿದ ‘ಅಹಿಂದ’ ಸೂತ್ರ ಎರಡೂ ಒಂದೆಯಾಗಿದೆ. ಸಿದ್ದರಾಮಯ್ಯ ಕೂಡ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ(ಅಹಿಂದ) ರಾಜಕಾರಣದ ಮೂಲಕವೇ ಕಾಂಗ್ರೆಸ್‌ಗೆ ಯಶಸ್ಸು ತಂದು ಕೊಟ್ಟಿದ್ದಾರೆ. ಹಾಗಾಗಿ, ಅಖಿಲೇಶ್ ಕೂಡ ಸಿದ್ದರಾಮಯ್ಯ ಹಾದಿಯನ್ನು ತುಳಿದಿದ್ದಾರೆಂದು ವಿಶ್ಲೇಷಿಸಬಹುದು.

ಪ್ರತಿಪಕ್ಷಗಳ ಮಹಾಮೈತ್ರಿ ಜತೆಗೆ ಹೋಗುವಿರಾ ಎಂಬ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದ ಅಖಿಲೇಶ್ ಯಾದವ್ ಅವರು, ಉತ್ತರ ಪ್ರದೇಶದ ಮಟ್ಟಿಗೆ 80 ಸೋಲಿಸಿ, ಬಿಜೆಪಿ ಕಿತ್ತೊಗೆಯಿರಿ ಎಂಬ ಘೋಷಣೆಯನ್ನಷ್ಟೇ ಮಾಡಿದರು.

ದೊಡ್ಡ ರಾಷ್ಟ್ರೀಯ ಪಕ್ಷಗಳು ನಮಗೆ ಬೆಂಬಲ ನೀಡಿದರೆ ಉತ್ತರ ಪ್ರದೇಶದಲ್ಲಿನ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಅಖಿಲೇಶ್ ಯಾದವ್ ಹೇಳಿದರು. ಯಾವ ರಾಜ್ಯದಲ್ಲಿ ಯಾವ ಮೈತ್ರಿ ಪಕ್ಷವು ಶಕ್ತಿಶಾಲಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೀಟು ಹಂಚಿಕೆಯನ್ನು ಮಾಡದಿರೆ, ಗೆಲುವು ಸುಲಭವಾಗಿ ದೊರೆಯಲಿದೆ ಎಂದು ಅವರು ಇದೇ ವೇಳೆ ಒತ್ತಿ ಹೇಳಿದರು.

ಈ ಸುದ್ದಿಯನ್ನೂ ಓದಿ: ಕಾಂಗ್ರೆಸ್​​ಗೇ ಕೈಕೊಟ್ಟ ಅಖಿಲೇಶ್ ಯಾದವ್​-ಮಮತಾ ಬ್ಯಾನರ್ಜಿ; ಬಿಜೆಪಿ ಸೋಲಿಸಲು ಹೊಸ ಮೈತ್ರಿ ರಚನೆ

ಈ ರಾಜ್ಯ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಾಯಾವತಿಯ ಅವರ ಬಹುಜನ ಸಮಾಜ ಪಾರ್ಟಿಯೊಂದಿಗಿನ ಮೈತ್ರಿಯನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್ ಅವರು, ಸಮಾಜವಾದಿ ಪಕ್ಷವು ಎಂದಿಗೂ ಪ್ರಾಮಾಣಿಕ ಹಾಗೂ ಹೊಂದಾಣಿಕಾಯ ಮೈತ್ರಿ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು. ಎಸ್‌ಪಿ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿ. ನಿಮಗೆ ಸೀಟು ಹಂಚಿಕೆ ಬಗೆಗಿನ ಗೊಂದಲ ದೊರೆಯಲಾರದು ಎಂದು ಇದೇ ವೇಳೆ ಹೇಳಿದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version