ಬೆಂಗಳೂರು: ಬಾಲಾಕೋಟ್ ಏರ್ ಸ್ಟ್ರೈಕ್ ನಡೆದು ಇಂದಿಗೆ(ಫೆ.26) ನಾಲ್ಕು ವರ್ಷ. ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನ ಆಕ್ರಮಿತ ಪ್ರದೇಶವಾಗಿರುವ ಬಾಲಾಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಸಿ ಭಾರತವು ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿತ್ತು. ಪುಲ್ವಾಮಾ ಉಗ್ರ ಕೃತ್ಯದಲ್ಲಿ ಭಾರತೀಯ ಸಿಆರ್‌ಪಿಎಫ್‌ನ 46 ಯೋಧರನ್ನು ಉಗ್ರರು ಸಾಯಿಸಿದ್ದರು. ಈ ಘಟನೆಯಿಂದ ಇಡೀ ದೇಶವು ಪ್ರತೀಕಾರದ ಮೂಡ್‌ನಲ್ಲಿತ್ತು. ಆಗ ಕೇಂದ್ರ ಸರ್ಕಾರವು ಬಾಲಾಕೋಟ್ ಏರ್ ಸ್ಟ್ರೈಕ್ ನಡೆಸಿ, ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿತ್ತು(Balakot airstrike anniversary).
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಜವಾನರ ಸಾವಿಗೆ ಪ್ರತೀಕಾರ ತೀರಿಸುವ ಪ್ರಯತ್ನದಲ್ಲಿ, ಭಾರತೀಯ ವಾಯುಪಡೆಯು ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತು. ಆ ಮೂಲ ಪ್ರತೀಕಾರ ತೀರಿಸಿಕೊಂಡಿತ್ತು.
ಕೇಂದ್ರ ಸರ್ಕಾರವು, ಫೆಬ್ರವರಿ 27 ರಂದು ಬಾಲಾಕೋಟ್ ಏರ್ ಸ್ಟ್ರೈಕ್ ನಡೆಸಿರುವುದನ್ನು ಖಚಿತಪಡಿಸಿತು. ಭಾರತೀಯ ಯುದ್ಧ ವಿಮಾನಗಳ ವಾಯು ಬಾಂಬ್ ದಾಳಿಯು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿ ಶಿಬಿರವನ್ನು ಸ್ಥಾಪಿಸಿದ್ದ ದೊಡ್ಡ ಸಂಖ್ಯೆಯ ಭಯೋತ್ಪಾದಕರ ಸಾವಿಗೆ ಕಾರಣವಾಯಿತು ಎಂದು ಸರ್ಕಾರವು ಹೇಳಿತ್ತು.
ಏಕೆ ಬಾಲಾಕೋಟ್ ಏರ್ ಸ್ಟ್ರೈಕ್?
ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ 46 ಸಿಆರ್‌ಎಫ್‌ಪಿ ಸಿಬ್ಬಂದಿಗಳು ಉಗ್ರರ ದಾಳಿಗೆ ಅಸು ನೀಗಿದ್ದರು. ಇದರಿಂದ ರೊಚ್ಚಿಗೆದ್ದ ಭಾರತವು ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಬಾಲಾಕೋಟ್ ವೈಮಾನಿಕ ದಾಳಿಯನ್ನು ಸಂಘಟಿಸಿತು. 2019 ರ ಪುಲ್ವಾಮಾ ದಾಳಿಯನ್ನು ಫೆಬ್ರವರಿ 14 ರಂದು ಆತ್ಮಹತ್ಯಾ ಬಾಂಬರ್ ನಡೆಸಲಾಯಿತು ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಅದರ ಹೊಣೆಯನ್ನು ಹೊತ್ತುಕೊಂಡಿತ್ತು.
ಇದನ್ನೂ ಓದಿ: Pulwama Martyr’s Day: ಪುಲ್ವಾಮಾ ದಾಳಿ ಹುತಾತ್ಮರ ಸಂಸ್ಮರಣಾ ದಿನ; ಬಲಿದಾನಿಗಳಿಗೆ ರಾಜ್ಯದ ವಿವಿಧೆಡೆ ಗೌರವ ನಮನ
ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಬಹಳಷ್ಟು ಉಗ್ರರ ಕ್ಯಾಂಪ್‌ಗಳಿವೆ. ಈ ಹಿನ್ನೆಲೆಯಲ್ಲಿ ಭಾರತವು ಸರ್ಕಾರವು ಫೆಬ್ರವರಿ 26ರಂದು ಏರ್ ಸ್ಟ್ರೈಕ್ ನಡೆಸಿ, ಆ ಉಗ್ರ ಶಿಬಿರಗಳನ್ನು ನಾಶಪಡಿಸಿತು. ಈ ಕಾರ್ಯಾಚರಣೆಯಲ್ಲಿ ವಾಯುಪಡೆಯ 12 ಮಿಗ್ 2000 ಈ ಏರ್ ಸ್ಟ್ರೈಕ್ ಕೈಗೊಂಡವು. ಏತನ್ಮಧ್ಯೆ, ಪಾಕಿಸ್ತಾನದ ಸೇನೆಯ ಒಂದು ಮಿಗ್ ವಿಮಾನವನ್ನು ಹೊಡೆದುರುಳಿಸಿತು. ಅಲ್ಲದೇ, ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿಯಿತು. ಬಳಿಕ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿತು.