Site icon Vistara News

Bangladesh Unrest: ಶೇಖ್ ಹಸೀನಾ ಬೆಂಬಲಿಗನ ಫೈವ್‌ ಸ್ಟಾರ್‌ ಹೊಟೇಲ್‌ಗೆ ಬೆಂಕಿ; 24 ಜನ ಸಜೀವ ದಹನ

Bangladesh unrest

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರ(Bangladesh Unrest)ಕ್ಕೆ ಮಿತಿಯೇ ಇಲ್ಲ ಎನಿಸುತ್ತಿದೆ. ನಿನ್ನೆಯಷ್ಟೇ ಪ್ರಧಾನಿ ಶೇಖ್‌ ಹಸೀನಾ(Sheikh Hasina) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬೆನ್ನಲ್ಲೇ ಬಾಂಗ್ಲಾದೇಶದ ಅವಾಮಿ ಲೀಗ್ ಪಕ್ಷದ ನಾಯಕರೊಬ್ಬರ ಒಡೆತನದ ಹೋಟೆಲ್‌ಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ. ಪರಿಣಾಮವಾಗಿ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಕನಿಷ್ಠ 24 ಜನರನ್ನು ಗುಂಪು ಸಜೀವ ದಹನಗೊಂಡಿದೆ.

ಇನ್ನು ಈ ಬಗ್ಗೆ ಸ್ಥಳೀಯ ಪತ್ರಕರ್ತರು ಮತ್ತು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದು, ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ಸೋಮವಾರ ತಡರಾತ್ರಿ ಈ ದುರಂತ ಘಟನೆ ನಡೆದಿದೆ ಎನ್ನಲಾಗಿದೆ. ಜೋಶೋರ್ ಜಿಲ್ಲೆಯ ಜಿಲ್ಲಾ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲಾದಾರ್ ಒಡೆತನದ ಜಬೀರ್ ಇಂಟರ್ನ್ಯಾಷನಲ್ ಹೋಟೆಲ್‌ಗೆ ಉದ್ರಿಕ್ಯ ಗುಂಪು ಬೆಂಕಿ ಇಟ್ಟಿದ್ದಾರೆ. ಆಗ ಹೊಟೇಲ್‌ ಒಳಗಿದ್ದ ಅನೇಕ ಗಣ್ಯರು ಸುಟ್ಟು ಕರಕಲಾಗಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರು ಭಾರತೀಯ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಇಂಡೋನೇಷ್ಯಾ ಪ್ರಜೆಯೂ ಸೇರಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜೋಶೋರ್ ಜನರಲ್ ಆಸ್ಪತ್ರೆಯ ವೈದ್ಯರು 24 ಶವಗಳು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಅದರಲ್ಲಿ ಹೊಟೇಲ್‌ ಸಿಬ್ಬಂದಿಯ ಮೃತದೇಹವೂ ಸೇರಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅವಾಮಿ ಲೀಗ್ (ಎಎಲ್) ಆಡಳಿತವನ್ನು ವಿರೋಧಿಸುವ ಅಪರಿಚಿತ ಗುಂಪು ಹೋಟೆಲ್‌ನ ನೆಲಮಹಡಿಗೆ ಬೆಂಕಿ ಹಚ್ಚಿದೆ, ಅದು ಶೀಘ್ರದಲ್ಲೇ ಮೇಲಿನ ಮಹಡಿಗಳಿಗೆ ಹರಡಿತು ಎಂದು ಮಾಧ್ಯಮ ವರದಿಗಳು ಸೂಚಿಸಿವೆ.

ಇದನ್ನೂ ಓದಿ: Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Exit mobile version